ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ದೂರ ಮಾಡಲು ಪೋಲಿಯೋ ಲಸಿಕೆ ಬಳಕೆ: ತಜ್ಞರು

|
Google Oneindia Kannada News

ಬೆಂಗಳೂರು, ನವೆಂಬರ್ 02: ಕೊವಿಡ್ 19 ರೋಗ ದೂರ ಮಾಡಲು ಪೋಲಿಯೋ ಲಸಿಕೆ ಉತ್ತಮ ಎಂದು ತಜ್ಞರು ತಿಳಿಸಿದ್ದಾರೆ.

ಪೋಲಿಯೋ ಲಸಿಕೆಯು ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಕೊರೊನಾ ಲಸಿಕೆ ಬರಲು ಇನ್ನಷ್ಟು ಸಮಯ ಬೇಕಾಗಿರುವುದರಿಂದ ಭಾರತ, ಅಮೆರಿಕ, ಇಂಗ್ಲೆಂಡಿನ ತಜ್ಞರು ಹೇಳುವ ಪ್ರಕಾರ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪೋಲಿಯೊ ಲಸಿಕೆಯನ್ನು ಬಳಸಬಹುದು.

20 ರಿಂದ 25 ಕೋಟಿ ಭಾರತೀಯರಿಗೆ ಕೊರೊನಾವೈರಸ್ ಲಸಿಕೆ20 ರಿಂದ 25 ಕೋಟಿ ಭಾರತೀಯರಿಗೆ ಕೊರೊನಾವೈರಸ್ ಲಸಿಕೆ

ಎಪಿಜೆನೆಟಿಕ್ ಮಾರ್ಪಾಡುಗಳು ಮತ್ತು ಚಯಾಪಚಯ ಪ್ರೋಗ್ರಾಮಿಂಗ್ ಮೂಲಕ ಒಪಿವಿ ತರಬೇತಿ ಪಡೆದ ಸಹಜ ಪ್ರತಿರಕ್ಷೆಯನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯನ ಹೇಳಿದೆ.

ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯಲ್ಲಿ ಅಧ್ಯಯನ

ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯಲ್ಲಿ ಅಧ್ಯಯನ

ಪೋಲಿಯೊ ಲಸಿಕೆ ಮತ್ತು ಕೋವಿಡ್ 19ನ ವೈದ್ಯಕೀಯ ಅಧ್ಯಯನವನ್ನು ಇತ್ತೀಚೆಗೆ ತಜ್ಞರು ಬೆಂಗಳೂರಿನ ಹೆಚ್ ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಾಡಿದ್ದರು. ಕೋವಿಡ್-19 ರೋಗಿಗಳಿಗೆ ಆರಂಭದಲ್ಲಿಯೇ ಪೋಲಿಯೊ ಲಸಿಕೆ ನೀಡಿದರೆ ವೈರಸ್ ನ್ನು ಬೇಗನೆ ಕೊಲ್ಲಲು ಸಹಾಯ ಮಾಡುತ್ತದೆ. ಅಲ್ಲದೆ ವಯಸ್ಸಾದವರಲ್ಲಿ ಸಹ ಕೊರೋನಾ ಸೋಂಕು ತಗಲುವುದನ್ನು ತಡೆಗಟ್ಟುತ್ತದೆ. ಈ ಬಗ್ಗೆ ಪ್ರಾಯೋಗಿಕ ಅಧ್ಯಯನ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ಪೋಲಿಯೋ ಲಸಿಕೆ

ಕೊರೊನಾ ವಿರುದ್ಧ ಹೋರಾಡಲು ಪೋಲಿಯೋ ಲಸಿಕೆ

ಕೊರೊನಾ ವಿರುದ್ಧ ಹೋರಾಡಲು 18 ವರ್ಷ ಮೇಲ್ಪಟ್ಟವರಿಗೆ ಪೋಲಿಯೋ ಲಸಿಕೆ ನೀಡಬಹುದು ಎಂದು ವರದಿಯೊಂದು ತಿಳಿಸಿದೆ.

ಜೀವಿತಾವಧಿಯಲ್ಲಿ ಇರುತ್ತದೆ

ಜೀವಿತಾವಧಿಯಲ್ಲಿ ಇರುತ್ತದೆ

ಸಾಮಾನ್ಯವಾಗಿ, ಪೋಲಿಯೊ ಲಸಿಕೆ ಜೀವಿತಾವಧಿಯಲ್ಲಿ ಇರುತ್ತದೆ. ಆದರೆ ಪುನಃ ಸಕ್ರಿಯಗೊಳಿಸುವ ಪ್ರಮಾಣವನ್ನು ನೀಡಿದಾಗ, ಇದು ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ.

ಅಧ್ಯಯನ ಏನು ಹೇಳುತ್ತೆ?

ಅಧ್ಯಯನ ಏನು ಹೇಳುತ್ತೆ?

ಆರಂಭಿಕ ಹಂತದಲ್ಲಿ ಒಬ್ಬ ವ್ಯಕ್ತಿಗೆ ಒಪಿವಿ ನೀಡಿದರೆ, ಅದು ಸೋಂಕಿಗೆ ಒಳಗಾಗುವ ಮೊದಲು, ಅದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಪುನಃ ಸಕ್ರಿಯಗೊಳಿಸುತ್ತದೆ. ನಮ್ಮ ಅಧ್ಯಯನ ಮತ್ತು ಲಕ್ಷಣಗಳನ್ನು ನೋಡಿದಾಗ ಒಪಿವಿ ಕೆಲಸ ಮಾಡಬಹುದು ಎಂದು ನಮಗನಿಸಿದೆ ಎಂದರು.

ಅಧ್ಯಯನದ ಭಾಗವಾಗಿದ್ದ ಬೆಂಗಳೂರಿನ ಹೆಡ್ ನೆಕ್ ಸರ್ಜಿಕಲ್ ಆಂಕೊಲಾಜಿ ಮತ್ತು ಅಸೋಸಿಯೇಟ್ ಡೀನ್ - ಸೆಂಟರ್ ಆಫ್ ಅಕಾಡೆಮಿಕ್ಸ್ ಅಂಡ್ ರಿಸರ್ಚ್ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಾ. ವಿಶಾಲ್ ರಾವ್ ಮಾತನಾಡಿ ನಾವು ಜೀನೋಮಿಕ್ ಅಧ್ಯಯನವನ್ನು ನೋಡಿದಾಗ, ಒಪಿವಿ ಮತ್ತು ಕೊರೊನಾ ವೈರಸ್ ಎರಡೂ ಆರ್ ಎನ್ ಎ ವೈರಸ್.

Recommended Video

Modi ಯಿಂದ ಭಾರತೀಯರಿಗೆ ಮತ್ತೊಂದು Gift | Oneindia Kannada

English summary
Can the oral polio vaccine help in the fight against Covid-19? With a vaccine for Covid-19 at least some months away, experts from Bengaluru, the UK and the USA are suggesting the use of oral polio vaccine in order to activate the innate immune system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X