7th Pay Commission: ಸರ್ಕಾರಿ ನೌಕರರಿಗೆ ಮುಂದಿನ DA ಹೆಚ್ಚಳ ಪ್ರಮಾಣವೆಷ್ಟು? ಇಲ್ಲಿದೆ ಅಪ್ಡೇಟ್
ಬೆಂಗಳೂರು, ಮೇ 06: ಕೇಂದ್ರ ಸರ್ಕಾರಿ ನೌಕರರಿಗೆ ಇತ್ತೀಚೆಗೆ ಕೇವಲ ಶೇಕಡಾ 2 ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ್ದ ಕೇಂದ್ರ ಸರ್ಕಾರ ಮುಂದಿನ ಜುಲೈಗೆ ಎಷ್ಟು ತುಟ್ಟಿಭತ್ಯೆ (DA hike) ಮತ್ತು ತುಟ್ಟಿ ಪರಿಹಾರ (DR hike) ಎಷ್ಟು ಹೆಚ್ಚಳ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ 53 ರಷ್ಟು ಹೆಚ್ಚಾಗಿದ್ದ ತುಟ್ಟಿಭತ್ಯೆ 55ಕ್ಕೆ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಡಿಎ ಪ್ರಮಾಣ ಎಷ್ಟು ಹಚ್ಚಾಗಲಿದೆ ಎಂಬ ಅಂಕಿ ಸಂಖ್ಯೆ ಇಲ್ಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚುವರಿ ತುಟ್ಟಿಭತ್ಯೆ (DA) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (DA) ಹೆಚ್ಚಿಸಿ ಬಿಡುಗಡೆ ಮಾಡಲು ಒಕ್ಕೂಟವು ಅನುಮೋದನೆ ನೀಡಿದೆ. ಇಂದಿನ ದಿನಮಾನಗಳಲ್ಲಿ ಏರಿಕೆ ಆಗಿರುವ ಬೆಲೆಗಳ ಖರ್ಚು ವೆಚ್ಚ ಸರಿದೂಗಿಸಲು, ಹಣದುಬ್ಬರ ವಿರುದ್ಧ ಬದುಕು ಸಾಗಿಸಲು ಈ ಭತ್ಯೆಗಳ ಹೆಚ್ಚಳವು ಸರ್ಕಾರಿ ನೌಕರರಿಗೆ ಅನುಕೂಲ ಒದಗಿಸುತ್ತದೆ.

ಮೂಲ ವೇತನ/ಪಿಂಚಣಿಯ ಶೆಕಡಾ 53% ಅಸ್ತಿತ್ವದಲ್ಲಿತ್ತು, ಈ ತುಟ್ಟಿಭತ್ಯೆಗೆ ಕಳೆದ ಬಾರಿ ಜನವರಿಯಿಂದ ಅನ್ವಯವಾಗುವಂತೆ ಶೆಕಡಾ 2ರಷ್ಟು ಹೆಚ್ಚಳ ಮಾಡಲಾಯಿತು. ಆಗ 55ರಷ್ಟು ಹೆಚ್ಚಾಯಿತು. ಮುಂದಿನ ದಿನಗಳಲ್ಲಿ ಜುಲೈ 1ರಿಂದ ಅನ್ವಯಯವಾಗುವಂತೆ ತುಟ್ಟಿಭತ್ಯೆ ಏರಿಕೆ ಮಾಡಿದರೆ ಇದರ ಪ್ರಮಾಣ 58ಕ್ಕೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಏಳನೇ ವೇತನ ಆಯೋಗದಡಿ (7th Pay Commission) ಡಿಎ ಹೆಚ್ಚಳ ಮಾಡಲಾಗುತ್ತಿದೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಎಂಟನೇ ವೇತನ ಆಯೋಗದ ಜಾರಿಯನ್ನು ಕೇಂದ್ರ ಸರ್ಕಾರಿ ನೌಕರರು ಎದುರು ನೋಡುತ್ತಿದ್ದಾರೆ.
ಆಗಸ್ಟ್‌ನಲ್ಲಿ ನೌಕರರಿಗೆ ಸಿಹಿ ಸುದ್ದಿ
ಇದಲ್ಲದೇ ಇದೇ ವರ್ಷ ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿನ ಹಣದುಬ್ಬರ ಸರಿದೂಗಿಸಲು ಕೇಂದ್ರ ಸರ್ಕಾರವು ಬಾಕಿ ಹಣವನ್ನು ಈಗಾಗಲೇ ನೀಡಿದೆ. ನೌಕರರು ಜನವರಿ ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಪ್ರತಿ ವರ್ಷ ಜನವರಿ ಹಾಗೂ ಜುಲೈ ತಿಂಗಳಲ್ಲಿ ಎರಡು ಬಾರಿ ಡಿಎ, ಡಿಆರ್ ಹೆಚ್ಚಳ ಮಾಡಿ ಘೋಷಿಸಲಾಗುತ್ತದೆ. ಮುಂದಿನ ಜುಲೈ ತಿಂಗಳ ತುಟ್ಟಿಭತ್ಯೆಯನ್ನು ಆಗಸ್ಟ್ ಅಂತ್ಯಕ್ಕೆ ಇಲ್ಲವೇ ಸೆಪ್ಟಂಬರ್ ಮೊದಲ ವಾರ ಘೋಷಿಸಬಹುದೆಂದು ಹೇಳಲಾಗುತ್ತಿದೆ.

ಭತ್ಯೆ ಹೆಚ್ಚಳದಿಂದ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವಾಗಿ 18,000 ರೂಪಾಯಿ ಪಡೆದರೆ, ಪಿಂಚಣಿದಾರರು ಕನಿಷ್ಠ ಮೂಲ ಪಿಂಚಣಿಯಾಗಿ 9,000 ರೂಪಾಯಿ ಪಡೆಯುತ್ತಿದ್ದಾರೆ. ಸದ್ಯ ತುಟ್ಟಿಭತ್ಯೆ ಶೇಕಡಾ 55 ತಲುಪಿದೆ. ಇದರಿಂದ ಕೇಂದ್ರ ನೌಕರರಿಗೆ ಹಾಲಿ ಪ್ರತಿ ತಿಂಗಳಿಗೆ ಡಿಎ ಸೇರಿ ಮೂಲ ವೇತನ 27,900 ರೂಪಾಯಿ ಪಡೆಯುತ್ತಾರೆ. ಪಿಂಚಣಿದಾರರು ಈಗ ತಿಂಗಳಿಗೆ ಡಿಆರ್ ಸೇರಿ ಕನಿಷ್ಠ ಮೂಲ ಪಿಂಚಣಿ 13,950 ರೂಪಾಯಿ ಪಡೆಯುತ್ತಿದ್ದಾರೆ.
2025 ಜುಲೈ ಡಿಎ 3% ಹೆಚ್ಚಳ, ಒಟ್ಟು 58ರಷ್ಟು ಏರಿಕೆ?
ಕೇಂದ್ರ ಸರ್ಕಾರ ಜುಲೈ 1ರಿಂದ ಅನ್ವಯವಾಗುವಂತೆ ತುಟ್ಟಿ ಭತ್ಯೆ ಹೆಚ್ಚಳ ಘೋಷಣೆ ಮಾಡುವ ನಿರೀಕ್ಷೆ ಇದೆ. ಮುಂದಿನ ಡಿಎ/ಡಿಆರ್ ಹೆಚ್ಚಳ ಶೇಕಡಾ 3ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಈ ನಿರೀಕ್ಷೆ ಈಡೇರಿಕೆ ಆದರೆ ನೌಕರರ ತುಟ್ಟಿಭತ್ಯೆ ಪ್ರಮಾಣ 58ಕ್ಕೆ ತಲುಪಲಿದೆ ಎಂದು ನೌಕರರು ಈಗಾಗಲೇ ಲೆಕ್ಕಾಚಾರ ಹಾಕತೊಡಗಿದ್ದಾರೆ.
ಶೇಕಡಾ 3ರಷ್ಟು ತುಟ್ಟಿಭತ್ಯೆ ಹೆಚ್ಚಳವಾದರೆ ಕನಿಷ್ಠ 18,000 ರೂಪಾಯಿ ಮೂಲ ವೇತನ ಪಡೆಯುವ ನೌಕರನಿಗೆ ವೇತನದಲ್ಲಿ 540 ರೂಪಾಯಿ ಏರಿಕೆ ಆಗುತ್ತದೆ. ಇದೇ ಪಿಂಚಣಿದಾರರೊಬ್ಬರು ಕನಿಷ್ಠ ಮೂಲ ಪಿಂಚಣಿ ರೂ 9,000 ಪಡೆಯುತ್ತಿದ್ದರೆ, ಅವರಿಗೆ ಶೇಕಡಾ 3ರಷ್ಟು ಡಿಆರ್ ಏರಿಕೆ ಆದಲ್ಲಿ ಅವರು ಮುಂದಿನ ಜುಲೈ ನಂತರ 270 ರೂಪಾಯಿ ಹೆಚ್ಚುವರಿ ಪಿಂಚಣಿ ಪಡೆಯಲಿದ್ದಾರೆ.












Click it and Unblock the Notifications