ಅಬಕಾರಿ ಸುಂಕ ಹೆಚ್ಚಳ: ಗ್ರಾಹಕರಿಗಿಲ್ಲ ಹೊರೆ

ನವದೆಹಲಿ, ಡಿ. 3 : ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಆದರೆ ಗ್ರಾಹಕರ ಮೇಲೆ ಇದರ ಹೊರೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಲೀಟರ್ ಪೆಟ್ರೋಲ್ ಮೇಲೆ 2.25 ರೂ. ಮತ್ತು ಡೀಸೆಲ್ ಮೇಲೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ನಿರಂತರವಾಗಿ ಕುಸಿಯುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗಣನೀಯ ಇಳಿಕೆ ಮಾಡಲಾಗಿದ್ದು ಬೊಕ್ಕಸಕ್ಕಾಗುವ ನಷ್ಟ ಸರಿದೂಗಿಸಿಕೊಳ್ಳಲು ಇಂಥ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.[70 ರೂ. ಗಡಿ ಬಿಟ್ಟು ಕೆಳಗಿಳಿದ ಪೆಟ್ರೋಲ್]

petrol

ಡಿಸೆಂಬರ್ 3 ರಿಂದಲೇ ಹೊಸ ಅಬಕಾರಿ ಸುಂಕ ನೀತಿ ಜಾರಿಗೆ ಬರಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚುವರಿ 4 ಸಾವಿರ ಕೋಟಿ ರೂ. ಆದಾಯ ಸಂಗ್ರಹ ಗುರಿ ಹೊಂದಲಾಗಿದ್ದು ಇದು ಆರ್ಥಿಕ ವ್ಯವಸ್ಥೆ ಭದ್ರತೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಕಳೆದ ತಿಂಗಳಲ್ಲಿಯೂ ಅಬಕಾರಿ ಸುಂಕ ಹೆಚ್ಚಳ ಮಾಡಲಾಗಿತ್ತು. ವಿತ್ತೀಯ ಕೊರತೆ ನಿವಾರಣೆಗೆ ಸರ್ಕಾರಗಳು ಇಂಥ ಕ್ರಮ ತೆಗೆದುಕೊಳ್ಳುವುದು ಸಾಮಾನ್ಯ. ಆದರೆ ಅವುಗಳ ನೇರ ಪರಿಣಾಮ ನಾಗರಿಕರಿಗೆ ತಟ್ಟದಿದ್ದರೆ ಯಾವ ಸಮಸ್ಯೆ ಉಂಟಾಗುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+