ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ತಿಂಗಳಿನಲ್ಲಿ ಕೊರೊನಾ ಲಸಿಕೆ ಉತ್ಪಾದನೆ ಪ್ರಮಾಣವೆಷ್ಟು?

|
Google Oneindia Kannada News

ನವದೆಹಲಿ, ಜನವರಿ.12: ಭಾರತದಲ್ಲಿ ಪ್ರತಿ ತಿಂಗಳು 7 ರಿಂದ 8 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಲಾಗುತ್ತದೆ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅದರ್ ಪೂನಾವಲ್ಲಾ ಸ್ಪಷ್ಟಪಡಿಸಿದ್ದಾರೆ.

ದೇಶದಲ್ಲಿ ಜನವರಿ.16ರಿಂದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸುವುದಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಇದರ ಬೆನ್ನಲ್ಲೇ ಅನುಮೋದನೆ ಪಡೆದಿರುವ ಎಸ್ಐಐ ಸಂಸ್ಥೆ ಲಸಿಕೆ ಸರಬರಾಜು ಮಾಡುವುದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

1,000 ರೂ.ಗೆ ಒಂದು ಡೋಸ್ ಕೊರೊನಾವೈರಸ್ ಲಸಿಕೆ!1,000 ರೂ.ಗೆ ಒಂದು ಡೋಸ್ ಕೊರೊನಾವೈರಸ್ ಲಸಿಕೆ!

ಭಾರತಕ್ಕೆ ಎಷ್ಟು ಪ್ರಮಾಣದ ಕೊವಿಶೀಲ್ಡ್ ಲಸಿಕೆಯ ಅಗತ್ಯವಿದೆ. ಅದನ್ನು ಪೂರೈಸುವುದು ಹೇಗೆ ಮತ್ತು ಹೆಚ್ಚುವರಿ ಲಸಿಕೆಯನ್ನು ಯಾವ ರೀತಿಯಲ್ಲಿ ವಿದೇಶಗಳಿಗೆ ರಫ್ತು ಮಾಡಬೇಕು ಎನ್ನುವ ಬಗ್ಗೆ ಸಂಸ್ಥೆಯು ಯೋಜನೆ ಹಾಕಿಕೊಳ್ಳುತ್ತಿದೆ. ಲಸಿಕೆ ರಫ್ತಿಗೆ ಅಗತ್ಯವಿರುವ ವಾಹನಗಳ ವ್ಯವಸ್ಥೆ ಬಗ್ಗೆ ಸರ್ಕಾರವು ಕ್ರಮ ತೆಗೆದುಕೊಂಡಿದೆ. ಕಂಪನಿ ಕೂಡಾ ಕೆಲವು ಖಾಸಗಿ ವಾಹನಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಸಿಇಓ ಅದರ್ ಪೂನಾವಲ್ಲಾ ತಿಳಿಸಿದ್ದಾರೆ.

Every Month Company Will Produce 70-80 Million Doses Of Covishield Vaccine: Poonawalla

ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾಗೆ ಲಸಿಕೆ ರವಾನೆ:

ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆಗಾಗಿ ದೇಶ-ವಿದೇಶಗಳಿಂದಲೂ ಬೇಡಿಕೆ ಬರುತ್ತಿದೆ. ಹಲವು ದೇಶಗಳು ಲಸಿಕೆಯನ್ನು ನೀಡುವಂತೆ ಪ್ರಧಾನಮಂತ್ರಿ ಸಚಿವಾಲಯಕ್ಕೆ ಪತ್ರ ಬರೆಯುತ್ತಿವೆ. ಆದರೆ ಭಾರತೀಯರಿಗೆ ಮೊದಲು ಲಸಿಕೆ ಒದಗಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಇದರ ನಡುವೆ ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾಗೆ ಲಸಿಕೆ ನೀಡಲು ಸಂಸ್ಥೆಯು ಪ್ರಯತ್ನಿಸಲಿದೆ ಎಂದು ಅದರ್ ಪೂನಾವಲ್ಲಾ ಸ್ಪಷ್ಟಪಡಿಸಿದ್ದಾರೆ.

English summary
Every Month Company Will Produce 70-80 Million Doses Of Covishield Vaccine: Serum Institute CEO Adar Poonawalla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X