ಭಾರತದ ರಿಯಲ್‌ ಬಾಸ್ ಅಂಬಾನಿನಾ? ಕೇಂದ್ರದ ವಿರುದ್ಧ ಎಲಾನ್ ಮಸ್ಕ್ ಗಂಭೀರ ಆರೋಪ, ರಾಹುಲ್ ಗಾಂಧಿ ಎಂಟ್ರಿ

ಭಾರತದಲ್ಲಿ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗೆ ಅನುಮತಿ ಪಡೆಯುವ ವಿಚಾರದಲ್ಲಿ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಾಗೂ ಕೇಂದ್ರ ಸರ್ಕಾರದ ನಡುವಿನ ಕೊಲ್ಡ್‌ ವಾರ ಸ್ವಲ್ಪ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಕಂಪನಿಗೆ ಉದ್ದೇಶಪೂರ್ವಕವಾಗಿ ಅನುಮತಿ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಎಲಾನ್ ಮಸ್ಕ್, "ಮುಖೇಶ್ ಅಂಬಾನಿ ಭಾರತದ ಅಸಲಿ ಬಾಸ್ ಆಗಿದ್ದಾರೆಯೇ?" ಎಂದು ನೇರವಾಗಿ ಪ್ರಶ್ನಿಸುವ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಈ ವಿವಾದದ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರವೇಶಿಸಿದ್ದು, ಚರ್ಚೆ ರಾಜಕೀಯ ತಿರುವು ಪಡೆದುಕೊಂಡಿದೆ.

Elon Musk Asks If Ambani Is The Real Boss Of India Over Starlink Delay Rahul Gandhi Joins Debate

ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆ ವಿಳಂಬ: ಮಸ್ಕ್ ಅಸಮಾಧಾನ

ಎಲಾನ್ ಮಸ್ಕ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು , ಭಾರತದ ಟೆಲಿಕಾಂ ನಿಯಮಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. "ಸ್ಟಾರ್‌ಲಿಂಕ್ 165ಕ್ಕೂ ಹೆಚ್ಚು ದೇಶಗಳಲ್ಲಿ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿದೆ. ಕಳೆದ ಐದು ವರ್ಷಗಳಿಂದ ಭಾರತ ಸರ್ಕಾರದ ಪ್ರತಿಯೊಂದು ಕಾನೂನು ಮತ್ತು ನಿಯಮಗಳನ್ನ ನಾವು ಪಾಲಿಸುತ್ತಾ ಬಂದಿದ್ದೇವೆ. ಆದರೂ ನಮಗೆ ಇನ್ನೂ ಪರವಾನಗಿ ಏಕೆ ಸಿಕ್ಕಿಲ್ಲ? ಅಂಬಾನಿ ಭಾರತದ ಅಸಲಿ ಬಾಸ್ ಆಗಿದ್ದಾರೆಯೇ?" ಎಂದು ಮಸ್ಕ್ ಪ್ರಶ್ನಿಸಿದ್ದಾರೆ.

ಕೆಲವು ಏಕಸ್ವಾಮ್ಯ ಹೊಂದಿರುವ ಉದ್ಯಮಿಗಳು ತಮ್ಮ ಮಾರುಕಟ್ಟೆಯನ್ನ ಉಳಿಸಿಕೊಳ್ಳಲು ಭಾರತದಲ್ಲಿ ಸ್ಟಾರ್‌ಲಿಂಕ್‌ಗೆ ತಡೆವೊಡ್ಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಆರೋಪಗಳನ್ನ ತಳ್ಳಿಹಾಕಿದ ಕೇಂದ್ರ ಸರ್ಕಾರ

ಎಲಾನ್ ಮಸ್ಕ್ ಅವರ ಆರೋಪಗಳನ್ನ ಭಾರತ ಸರ್ಕಾರ ತಳ್ಳಿಹಾಕಿದೆ. ದೇಶೀಯ ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ಸ್ಟಾರ್‌ಲಿಂಕ್‌ಗೆ ತಡೆಹಿಡಿಯಲಾಗುತ್ತಿದೆ ಎಂಬ ವಾದ ಆಧಾರರಹಿತ ಎಂದು ಟೆಲಿಕಾಂ ಸಚಿವಾಲಯ ತಿಳಿಸಿದೆ. "ಭಾರತದ ಟೆಲಿಕಾಂ ಮತ್ತು ಉಪಗ್ರಹ ಸೇವೆಗಳ ಅನುಮತಿ ಪ್ರಕ್ರಿಯೆಯು ಪಾರದರ್ಶಕ ಮತ್ತು ತಾರತಮ್ಯರಹಿತವಾಗಿದೆ.

ಸದ್ಯ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್, ರಿಲಯನ್ಸ್ ಜಿಯೋ ಸ್ಯಾಟ್‌ಕಾಮ್ ಮತ್ತು ಭಾರ್ತಿ ಬೆಂಬಲಿತ ಯುಟೆಲ್‌ಸ್ಯಾಟ್ ಒನ್‌ವೆಬ್ ಎಂಬ ಮೂರು ಕಂಪನಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ, ಪ್ರಸ್ತುತ ಭದ್ರತಾ ಮೌಲ್ಯಮಾಪನ ಮತ್ತು ಸ್ಪೆಕ್ಟ್ರಮ್ ಅನುಮೋದನೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಇದು ಪೂರ್ಣಗೊಳ್ಳುವವರೆಗೆ ಯಾರಿಗೂ ವಾಣಿಜ್ಯ ಕಾರ್ಯಾಚರಣೆ ಆರಂಭಿಸಲು ಸಾಧ್ಯವಿಲ್ಲ," ಎಂದು ಸರ್ಕಾರ ವಿವರಿಸಿದೆ.

ಚರ್ಚೆಗೆ ಎಂಟ್ರಿಕೊಟ್ಟ ರಾಹುಲ್ ಗಾಂಧಿ: ಆ ಇನ್ನೊಬ್ಬ ವ್ಯಕ್ತಿ ಯಾರು?

ಎಲಾನ್ ಮಸ್ಕ್ ಮತ್ತು ಸರ್ಕಾರದ ನಡುವಿನ ಈ ಟ್ವೀಟ್ ಸಮರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಮಸ್ಕ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, "ಭಾರತಕ್ಕೆ ಸ್ವಾಗತ, ಎಲಾನ್. ನೀವು ಆ ಇನ್ನೊಬ್ಬ ವ್ಯಕ್ತಿಯನ್ನ ಅನ್ವೇಷಿಸುವವರೆಗೆ ಕಾಯಿರಿ," ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಮರುಪ್ರತಿಕ್ರಿಯೆ ನೀಡಿರುವ ಎಲಾನ್ ಮಸ್ಕ್, "ಧನ್ಯವಾದಗಳು, ರಾಹುಲ್. ಇದು ನಿಜಕ್ಕೂ ಆತಂಕಕಾರಿ ವಿಚಾರ," ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಸ್ಟಾರ್‌ಲಿಂಕ್ ಅವಶ್ಯಕತೆ ಕುರಿತು ಮಸ್ಕ್ ವಾದ

ಭಾರತದಂತಹ ದೊಡ್ಡ ದೇಶದಲ್ಲಿ ಇಂಟರ್ನೆಟ್ ಸಂಪರ್ಕದ ಕೊರತೆ ಇರುವ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ಅತ್ಯಂತ ಅವಶ್ಯಕ ಎಂದು ಮಸ್ಕ್ ಪ್ರತಿಪಾದಿಸಿದ್ದಾರೆ. "ಯಾವುದೇ ಮೊಬೈಲ್ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಸೌಲಭ್ಯವೇ ಇಲ್ಲದ ಅಥವಾ ಕಳಪೆ ನೆಟ್‌ವರ್ಕ್ ಇರುವ ಭಾರತದ ಗ್ರಾಮೀಣ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ಬಹುದೊಡ್ಡ ವರದಾನವಾಗಲಿದೆ. ಅಮೆರಿಕಾ ಸೇರಿದಂತೆ ಯಾವುದೇ ದೇಶದಲ್ಲಿ ಶೇ.100ರಷ್ಟು ನೆಟ್‌ವರ್ಕ್ ಕವರೇಜ್ ಇಲ್ಲ. ಆದರೆ ಇಂಟರ್ನೆಟ್‌ನ ಅತಿ ಹೆಚ್ಚು ಅಗತ್ಯವಿರುವ ಜನರಿಗೆ ಸ್ಟಾರ್‌ಲಿಂಕ್ ನೆರವಾಗಬಲ್ಲದು," ಎಂದು ಎಲಾನ್ ಮಸ್ಕ್ ಸಮರ್ಥಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+