ಮೋದಿ 'ಎಕೆ' ಹೇಳಿಕೆಗೆ ಕೇಜ್ರಿವಾಲ್ ಪ್ರತ್ಯುತ್ತರ

ವಾರಣಾಸಿ, ಮಾ.26: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. ಮೊದಲಿಗೆ ವೈಷ್ಣೋದೇವಿ ಯಾತ್ರೆ ನಿರತ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನೀಡಿದ ಸಕತ್ ಹೇಳಿಕೆ ಅದಕ್ಕೆ ಅರವಿಂದ್ ಕೇಜ್ರಿವಾಲ್ ಉತ್ತರ ಇಂದಿನ ಮುಖ್ಯ ಸುದ್ದಿ.

* ಮೋದಿ ಅವರ ಎಕೆ ಹೇಳಿಕೆಗೆ ಕೇಜ್ರಿವಾಲ್ ಪ್ರತ್ಯುತ್ತರ ನೀಡಿದ್ದು, ನನ್ನನ್ನು ಪಾಕಿಸ್ತಾನಿಗಳ ಏಜೆಂಟ್ ಎಂದಿದ್ದಾರಾ? ಪ್ರಧಾನಿ ಅಭ್ಯರ್ಥಿಯೊಬ್ಬರು ಇಂಥ ಭಾಷೆ ಬಳಸಬಹುದೇ? ಎಂದು ಪ್ರಶ್ನಿಸಿದ್ದಾರೆ.
* ಯಡಿಯೂರಪ್ಪ, ಶ್ರೀರಾಮುಲು, ರಾಮ್ ವಿಲಾಸ್ ಪಾಸ್ವಾನ್ ರಂಥ ಭ್ರಷ್ಟರ ಬಗ್ಗೆ ಮೋದಿ ಏಕೆ ಮೌನ ವಹಿಸಿದ್ದಾರೆ ಎಂದು ಕೇಜ್ರಿವಾಲ್ ಪ್ರಶ್ನೆ ಎಸೆದಿದ್ದಾರೆ.

Elections 2014 : News in Brief on March 26

5.45: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಧಾರವಾಡ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
4.45: ಆದರ್ಶ್ ಹಗರಣದ ಆರೋಪಿ ಮಾಜಿ ಸಿಎಂ ಅಶೋಕ್ ಚವಾಣ್ ಹಾಗೂ ಮಾಜಿ ರೈಲ್ವೆ ಸಚಿವ ಪವನ್ ಬನ್ಸಾಲ್ ಗೆ ಕಾಂಗ್ರೆಸ್ ಟಿಕೆಟ್ ನೀಡಿಕೆ, ಬಿಜೆಪಿಯಿಂದ ತೀವ್ರ ವಿರೋಧ
3.35: ದೇಶದಲ್ಲಿ ಆರ್ಥಿಕ ಅಧಃಪತನ ಕಾಣುವಂತೆ ಮಾಡಿದ ಕಾಂಗ್ರೆಸ್ ಸರ್ಕಾರ 10 ಕೋಟಿ ಹೊಸ ಉದ್ಯೋಗ ಅವಕಾಶ ಸೃಷ್ಟಿಸುವುದು ಮೂರ್ಖತನ ಹೇಳಿಕೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಪ್ರತಿಕ್ರಿಯೆ.

3.00: ನಿಮ್ಮ ಧ್ವನಿ, ನಮ್ಮ ಸಂಕಲ್ಪ ಎಂಬ ಹೆಸರಿನ ಚುನಾವಣೆ ಪ್ರಣಾಳಿಕೆಯ ಬಿಡುಗಡೆ ಮಾಡಿದ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ.

2.00: ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಂಬಬೇಕಾಗಿಲ್ಲ. ಜನರಿಗೆ ನೀಡಿದ ಆಶ್ವಾಸನೆಗಳನ್ನು ಯುಪಿಎ ಈಡೇರಿಸಿದೆ ಎಂದ ಸೋನಿಯಾ ಗಾಂಧಿ.

13.01: ಪಾಕಿಸ್ತಾನಿಗಳಿಗೆ ಮೂರು AKಗಳು ತುಂಬಾ ಇಷ್ಟ. ಎಕೆ ಆಂಟನಿ, ಎಕೆ-47 ಹಾಗೂ ಅರವಿಂದ್ ಕೇಜ್ರಿವಾಲ್(ಎಕೆ) ಎಂದು ನರೇಂದ್ರ ಮೋದಿ ಅವರು ಭಾರತ್ ವಿಜಯ್ ಅಭಿಯಾನದಲ್ಲಿ ಬುಧವಾರ ಹೇಳಿದ್ದಾರೆ. 185 ಭಾರತ್ ವಿಜಯ್ ಸಮಾವೇಶ ನಿಯೋಜನೆ ಮಾಡಲಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

12.45: ಜಮ್ಮು ಮತ್ತು ಕಾಶ್ಮೀರದ ಹೀರಾನಗರ್ ನಲ್ಲಿ ಮೋದಿ ಸಮಾವೇಶ ನಡೆಸಿದ್ದು, ಅರವಿಂದ್ ಕೇಜ್ರಿವಾಲ್ ಆರೋಪಗಳಿಗೆ ಪ್ರಥಮ ಬಾರಿಗೆ ಉತ್ತರಿಸಿದ್ದಾರೆ. ಕಾಂಗ್ರೆಸ್ ಕುಟುಂಬ ರಾಜಕೀಯವನ್ನು ಖಂಡಿಸಿದ್ದಾರೆ.

Elections 2014 : News in Brief on March 26

13.30: ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮಾನ್ಯತೆ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
12.20: ಮುಝಾಫರ್ ನಗರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಹೊರ ಬಿದ್ದಿದೆ. ಉತ್ತರಪ್ರದೇಶ ಸರ್ಕಾರ ಹೊಣೆ ಹೊರುವಂತೆ ಸೂಚಿಸಲಾಗಿದೆ. ಹೀಗಾಗಿ ಅಖಿಲೇಶ್ ಯಾದವ್ ರಾಜೀನಾಮೆ ನೀಡಲಿ ಎಂದು ಬಿಜೆಪಿ ಆಗ್ರಹ. ಇನ್ನಷ್ಟು ಸುದ್ದಿ ನಿರೀಕ್ಷಿಸಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+