ಚುಟುಕು: ಚು.ಆಯೋಗಕ್ಕೆ ಸವಾಲು ಹಾಕಿದ ಅಜಂ
ಬೆಂಗಳೂರು, ಏ.16: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
4.30: ನಾನ್ಯಾಕೆ ಚುನಾವಣಾ ಆಯೋಗದ ಕ್ಷಮೆಯಾಚಿಸಬೇಕು? ಆಯೋಗ ಏನಾದರೂ ಸುಪ್ರೀಂಕೋರ್ಟ್ ಗಿಂತ ದೊಡ್ಡದೇ? ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಪ್ರಶ್ನಿಸಿದ್ದಾರೆ. ಅಮಿತ್ ಶಾ ಮೇಲಿನ ನಿಷೇಧ ತೆರವುಗೊಳಿಸಿದ ಆಯೋಗ, ಅಜಂ ಖಾನ್ ಕ್ಷಮೆಯಾಚಿಸಿದರೆ ನಿಷೇಧ ಹಿಂಪಡೆಯಲಾಗುವುದು ಎಂದಿತ್ತು.
4.15: ತೆಲಂಗಾಣಕ್ಕೆ ವಿಶೇಷ ಕೊಡುಗೆ ಘೋಷಿಸಿದ ಬಿಜೆಪಿ, ಉಚಿತ ಲ್ಯಾಪ್ ಟಾಪ್, ವಿದ್ಯಾರ್ಥಿನಿಯರಿಗೆ 1 ಲಕ್ಷ ಪ್ರಶಸ್ತಿ
ಕೃಷಿಗೆ ಪತ್ಯೇಕ ಬಜೆಟ್.

3.00: ರಾಹುಲ್ ಗಾಂಧಿ ಅವರು ಏ.21ರಂದು ತಮಿಳುನಾಡಿನ ರಾಮನಾಥಪುರಂ ನಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
2.00: ಬಾಬಾ ರಾಮದೇವ್ ವಿವಾದಿತ ವಿಡಿಯೋ:
12.50: ವಿವಾದಿತ ವಿಡಿಯೋ ಆಧಾರವಾಗಿಟ್ಟುಕೊಂಡು ಯೋಗ ಗುರು ಬಾಬಾ ರಾಮದೇವ್ ಬಂಧನಕ್ಕೆ ಕಾಂಗ್ರೆಸ್ ಆಗ್ರಹ.
12.40: ವಿಡಿಯೋದಲ್ಲಿರುವ ಮಾತುಗಳು ನನ್ನದಲ್ಲ. ನಾನು ಆ ರೀತಿ ಹಣಕ್ಕಾಗಿ ಸಿದ್ಧಾಂತ ಮಾರಿಕೊಳ್ಳುವುದಿಲ್ಲ ಎಂದು ರಾಮದೇವ್ ಹೇಳಿದ್ದಾರೆ. ರಾಜಸ್ಥಾನದ ಆಳ್ವಾರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೊಬ್ಬರ ಜತೆ ರಾಮದೇವ್ ಅವರು ಹಣ ಪಡೆಯುವ ಬಗ್ಗೆ ಡೀಲಿಂಗ್ ಮಾಡುತ್ತಿರುವ ವಿಡಿಯೋ ತುಣುಕು ಈಗ ಕಾಂಗ್ರೆಸ್ಸಿಗೆ ಅಸ್ತ್ರವಾಗಿದೆ.

11.30: ಸೋನಿಯಾ ಗಾಂಧಿ ಅವರು ಸುರ್ಜ್ ಗಜಾ(ಛತ್ತೀಸ್ ಗಢ) ಹಾಗೂ ಮಂದಾಸೌರ್(ಮಧ್ಯಪ್ರದೇಶ)ದಲ್ಲಿ ಭಾಷಣ ಮಾಡಲಿದ್ದಾರೆ.
11.00: ರಾಜನಾಥ್ ಸಿಂಗ್ ಅವರು ತಮಿಳುನಾಡಿನ ಪ್ರವಾಸದಲ್ಲಿದ್ದಾರೆ. ತಂಜಾವೂರು, ಶಿವಗಂಗಾ, ವಿರುಧನಗರ ಗಳಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.
10.45: 'ನನಗೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ಪತಿ ರಾಬರ್ಟ್ ವಾಧ್ರ ಅವರಿಂದ ಜೀವ ಬೆದರಿಕೆ ಇದೆ. ನಾನು ಇಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಲು ಮುಂದಾಗಿದ್ದೇನೆ' ಎಂದು ಅಮೇಥಿಯ ಎಎಪಿ ಅಭ್ಯರ್ಥಿ ಕುಮಾರ್ ವಿಶ್ವಾಸ್ ಘೋಷಿಸಿದ್ದಾರೆ. ರಾಹುಲ್ ಗಾಂಧಿ ಪ್ರಚಾರದ ಉಸ್ತುವಾರಿಯನ್ನು ಪ್ರಿಯಾಂಕಾ ಗಾಂಧಿ ವಹಿಸಿಕೊಂಡಿದ್ದಾರೆ.
10.30: ಮುಲಾಯಂ ಸಿಂಗ್ ಅವರ ಸೊಸೆ ಕೂಡಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಬೇಕೆಂದು ಆಗ್ರಹಿಸಿದ್ದಾರೆ.

10.15: ವಾರಾಣಸಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆಗಳು ನಡೆದಿರುವ ಸುದ್ದಿ ಬಂದಿದೆ.
10.00: ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋ ನೋಡಿ ಉಮಾ ಭಾರತಿ ಕೆಂಡಾಮಂಡಲವಾಗಿದ್ದು, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
9.45: ನರೇಂದ್ರ ಮೋದಿ ಸಮಾವೇಶ ನಡೆಯಬೇಕಿದ್ದ ಕಾನಪುರದ ವೇದಿಕೆ ಮಳೆಯಿಂದ ಕುಸಿದು ಬಿದ್ದಿದೆ. ಇಂದು ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಭಾರತ್ ವಿಜಯ್ ಸಮಾವೇಶ ಆಯೋಜನೆಗೊಂಡಿದೆ.
9.30: ಸೀಮಾಂಧ್ರದಲ್ಲಿ ಬಿಜೆಪಿ-ಟಿಡಿಪಿ ಮೈತ್ರಿ ಮುರಿದು ಬಿದ್ದಿದೆ. ಚಂದ್ರಬಾಬು ನಾಯ್ಡು ಜತೆ ಮಾತುಕತೆ ಮುಂದುವರೆದಿದೆ.
9.15: ಅಮಿತ್ ಶಾ ಅವರ ಮೇಲಿನ ನಿಷೇಧ ತೆರವುಗೊಳಿಸಿದ ಚುನಾವಣಾ ಆಯೋಗ, ಸಮಾಜವಾದಿ ಪಕ್ಷ ಗರಂ.
9.00: 5ನೇ ಹಂತದ ಚುನಾವಣಾ ಮತದಾನ ಶೇಕಡಾವಾರು : ಪಶ್ಚಿಮ ಬಂಗಾಳ 82%, ಒಡಿಶಾ 70%, ಬಿಹಾರ್ 56%, ಮಹಾರಾಷ್ಟ್ರ 54%, ಕರ್ನಾಟಕ 68%, ಜಮ್ಮು ಮತ್ತು ಕಾಶ್ಮೀರ 69%, ಮಧ್ಯಪ್ರದೇಶ 54% ಹಾಗೂ ರಾಜಸ್ಥಾನ ಶೇ 63%.












Click it and Unblock the Notifications