ಮಕಾಡೆ ಮಲಗಿದ ಕಾಂಗ್ರೆಸ್ː ರಾಹುಲ್ ಗಾಂಧಿ ಎಲ್ಲಿ?

ಬೆಂಗಳೂರು, ಅ.19: ದಸರಾ ಆರಂಭಕ್ಕೂ ಮುನ್ನವೇ ಬಿಜೆಪಿ ಪಟಾಕಿ ಸಿಡಿಸಿದೆ. ಮಹಾರಾಷ್ಟ್ರ ಮತ್ತು ಹರ್ಯಾಣಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಕೇಸರಿ ಪಡೆ ಸಂಭ್ರಮದಲ್ಲಿ ತೇಲಾಡುತ್ತಿದೆ. ಹರ್ಯಾಣದಲ್ಲಿ ಜನ ಬಿಜೆಪಿಗೆ ಬಹುಮತ ನೀಡಿದ್ದು, ಮಹಾರಾಷ್ಟ್ರದಲ್ಲಿ ಮೈತ್ರಿ ಅನಿವಾರ್ಯ.

ಇತ್ತ ಬಿಜೆಪಿ ನಾಯಕರು ಕಾರ್ಯಕರ್ತರು ಸಂಭ್ರಮದಲ್ಲಿ ತೊಡಗಿದ್ದರೆ ಅತ್ತ ಕಾಂಗ್ರೆಸ್ ನಲ್ಲಿ ತಳಮಗಳ ಆರಂಭವಾಗಿವೆ. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಎಲ್ಲಿದ್ದಾರೆ? ಎಂಬ ಪ್ರಶ್ನೆ ಎದ್ದಿದೆ. ಇದನ್ನೇ ಇಟ್ಟುಕೊಂಡು ಸರಣಿ ಟ್ವೀಟ್ ಹರಿದು ಬರುತ್ತಿದೆ.[ಪ್ರಧಾನಿ ಮೋದಿಯನ್ನು ರಾಹುಲ್ ಲೇವಡಿ ಮಾಡಿದ್ದು ಹೀಗೆ !]

rahul gandhi

ಆದರೆ ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ವಕ್ತಾರೆ ಶೋಭಾ ಓಜಾ, ಹುಡ್ ಹುಡ್ ನಿಂದ ಹಾನಿಗೊಳಗಾದ ಆಂಧ್ರಪ್ರದೇಶದ ವೈಜಾಗ್ ನಲ್ಲಿ ರಾಹುಲ್ ಗಾಂಧಿ ಸಂತ್ರಸ್ತರ ಅಳಲು ಆಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರಾಹುಲ್ ಗಾಂಧಿ ಎಲ್ಲಿ? ಎಂಬ ವಿಷಯದ ಮೇಲೆ ಟ್ವಿಟ್ಟರ್ ನಲ್ಲಿ ಹರಿದು ಬಂದವುಗಳ ಕೆಲ ಸ್ಯಾಂಪಲ್ ನಿಮಗಾಗಿ....

* ರಾಹುಲ್ ಈಗ ಛೋಟಾ ಭೀಮ್ ನೋಡುತ್ತಿರಬಹುದು
* ಆ ಮಗುವನ್ನು(ರಾಹುಲ್) ದಯವಿಟ್ಟು ಬಿಟ್ಟು ಬಿಡಿ
* ಪೊಗೊ ಮತ್ತು ಕಾರ್ಟೂನ್ ನೆಟ್ ವರ್ಕ್ ಬಂದ್ ಮಾಡಿದರೆ ರಾಹುಲ್ ಬಾಬಾ ಎಲ್ಲಿದ್ದಾರೆ ಎಂಬುದು ತಿಳಿಯುತ್ತದೆ.
* ತರಗತಿಗೆ ಚಕ್ಕರ್ ಹಾಕಿ, ಏನೂ ಅಭ್ಯಾಸ ಮಾಡದೇ, ಫಲಿತಾಂಶದ ದಿನ ವೃದ್ಧೆಗೆ ರಸ್ತೆ ದಾಟಿಸುವವನೇ ರಾಹುಲ್ ಗಾಂಧಿ
* ಈಗಲೂ ರಾಹುಲ್ ಗಾಂಧಿ ಛೋಟಾ ಭೀಮ್ ನೋಡ್ತಾನೇ ಇದಾರೆ. ಯಾಕೇಂದ್ರೆ ಕಾಂಗ್ರೆಸ್ ನಲ್ಲಿ ಯಾವ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತು.[ಉಪಚುನಾವಣೆ ಫಲಿತಾಂಶ: ಎಂಥ ವಿರೋಧಾಭಾಸ!]
* ಮುಂದಿನ ಚುನಾವಣೆ ಸಮಯದಲ್ಲಿ ಬಿಜೆಪಿಯೇ ಖರ್ಚು ಭರಿಸಿ ಕಾಂಗ್ರೆಸ್ ಮೆರವಣಿಗೆ ನಡೆಸಬೇಕು. ಆದರೆ ರಾಹುಲ್ ಗಾಂಧಿ ಭಾಗವಹಿಸುವುದು ಕಡ್ಡಾಯ!
* ಈಗ ಎಲ್ಲಿ ರಾಹುಲ್ ಗಾಂಧಿ, ಕೆಲ ತಿಂಗಳ ನಂತರ: ಯಾರು ರಾಹುಲ್ ಗಾಂಧಿ
* ರಾಹುಲ್ ಗಾಂಧಿ ಬಿಡಿ ಸೋನಿಯಾ ಗಾಂಧಿ ಮೊದಲು ಹುಡುಕಿ
* ಅರ್ನಾಬ್ ಕೇಳುತ್ತಿದ್ದಾರೆ ಎಲ್ಲಿ ರಾಹುಲ್ ಗಾಂಧಿ?
* ರಾಹುಲ್ ಗಾಂಧಿ ಮಹಿಳಾ ಸಬಲೀಕರಣ ಮಾಡುವುದರಲ್ಲಿ ನಿರತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+