ಕಾನೂನು ತಿದ್ದುಪಡಿಯಿಂದ ಮಾತ್ರ ಏಕಕಾಲದ ಚುನಾವಣೆ ಸಾಧ್ಯ: ರಾವತ್

ನವದೆಹಲಿ, ಆಗಸ್ಟ್ 14: ಲೋಕಸಭೆ ಚುನಾವಣೆ ಜತೆಗೇ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವುದು ಕಾನೂನು ತಿದ್ದುಪಡಿಯಿಂದ ಮಾತ್ರ ಸಾಧ್ಯ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೇ 11 ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಆಯೋಗಕ್ಕೆ ಪತ್ರ ಬರೆದಿದ್ದರು.

ಲೋಕಸಭಾ ಚುನಾವಣೆ ಜೊತೆ 11 ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ?
ಕಾನೂನಿಗೆ ತಿದ್ದುಪಡಿ ತರದ ಹೊರತು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದು ಸಾಧ್ಯವಿಲ್ಲ.

ಆದರೆ, ಎಲ್ಲ ಸಂಬಂಧಿತ ವಿಧಾನಸಭೆಗಳನ್ನು ವಿಸರ್ಜಿಸಿ ಒಟ್ಟಿಗೆ ಚುನಾವಣೆಗೆ ಎದುರಾಗಲು ಒಪ್ಪಿಕೊಂಡರೆ 11 ರಾಜ್ಯಗಳಿಗೆ ಒಮ್ಮೆಲೆ ಚುನಾವಣೆ ನಡೆಸಬಹುದು ಎಂದು ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂದರೆ ಕಾನೂನಿಗೆ ತಿದ್ದುಪಡಿ ತರಬೇಕು. ಇದಕ್ಕೆ ಕಾನೂನಿನ ಚೌಕಟ್ಟು ಅಗತ್ಯವಾಗಿದೆ. ಹೆಚ್ಚುವರಿ ಚುನಾವಣಾ ಸಿಬ್ಬಂದಿ, ಭದ್ರತೆ ಮತ್ತು ವಿವಿಪ್ಯಾಟ್ ಕೂಡ ಬೇಕಾಗುತ್ತದೆ ಎಂದು ರಾವತ್ ತಿಳಿಸಿದರು.

election commission rejects the proposal of simultaneous election of lok sabha and 11 states

ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳ ವಿಧಾನಸಭೆಯ ಕಾಲಾವಧಿ 2019 ರ ಜನವರಿಯಲ್ಲಿ ಮುಕ್ತಾಯವಾಗಲಿದ್ದು, ಈ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣಗಳಲ್ಲಿ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆ ಸಹ ಇದೇ ಅವಧಿಯಲ್ಲಿ ನಡೆಯಲಿದೆ.

ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಮಿಜೋರಾಂಗಳಲ್ಲಿ ಸೆಪ್ಟೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಚುನಾವಣೆ ನಡೆಯಬೇಕಿದೆ. ಆದರೆ, ಇಲ್ಲಿ ವಿಧಾನಸಭೆಯನ್ನು ಮೊದಲೇ ವಿಸರ್ಜಿಸಿ ಲೋಕಸಭೆ ಚುನಾವಣೆ ವೇಳೆಗೇ ಈ ರಾಜ್ಯಗಳಲ್ಲಿಯೂ ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+