ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ ಜೊತೆ 11 ರಾಜ್ಯಗಳಲ್ಲೂ ವಿಧಾನಸಭೆ ಚುನಾವಣೆ?

|
Google Oneindia Kannada News

ನವದೆಹಲಿ, ಆಗಸ್ಟ್ 14: 'ಒಂದು ದೇಶ, ಒಂದು ಚುನಾವಣೆ' ಎಂಬ ಪರಿಕಲ್ಪನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡಿದ ನಂತರ ಲೋಕಸಭಾ ಚುನಾವಣೆ ಅವಧಿಗೂ ಮುನ್ನವೇ ನಡೆಯಬಹುದು ಎಂದು ಅಂದಾಜಿಸಲಾಗಿತ್ತು.

72ನೇ ಸ್ವಾತಂತ್ರ್ಯ ದಿನಾಚರಣೆ 2018

ಆದರೆ ಲೋಕಸಭಾ ಚುನಾವಣೆ 2019 ರ ಏಪ್ರಿಲ್-ಮೇ ನಲ್ಲಿಯೇ ನಡೆಯುತ್ತದಾದರೂ ಇದರೊಟ್ಟಿಗೆ 11 ರಾಜ್ಯಗಳ ವಿಧಾನಸಭಾ ಚುನಾವಣೆಯೂ ನಡೆಯಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭೆ ಚುನಾವಣೆಗೆ ಹೊಸ ಪಕ್ಷದೊಂದಿಗೆ ಎಂಟ್ರಿ ಕೊಡಲಿದ್ದಾರೆ ಉಪೇಂದ್ರ ಲೋಕಸಭೆ ಚುನಾವಣೆಗೆ ಹೊಸ ಪಕ್ಷದೊಂದಿಗೆ ಎಂಟ್ರಿ ಕೊಡಲಿದ್ದಾರೆ ಉಪೇಂದ್ರ

ಲೋಕಸಭಾ ಚುನಾವಣೆ ಅವಧಿಗೂ ಮುನ್ನವೇ ಆಗುವ ಸಾಧ್ಯತೆಗಳು ಕಡಿಮೆ. ಚುನಾವಣಾ ಆಯೋಗ ಸಹ ಏಪ್ರಿಲ್-ಮೇ ತಿಂಗಳಿನಲ್ಲಿಯೇ ಲೋಕಸಭಾ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ ಈ ವರ್ಷದ ಡಿಸೆಂಬರ್ ತಿಂಗಳಿನಿಂದ, 2019 ರ ಸೆಪ್ಟೆಂಬರ್ ವರೆಗೆ ಚುನಾವಣೆ ಎದುರಿಸಲಿರುವ ವಿವಿಧ ರಾಜ್ಯಗಳ ಚುನಾವಣೆಯನ್ನು ಲೋಕಸಭಾ ಚುನಾವಣೆಗೆ ಹೊಂದಿಕೆಯಾಗುವಂತೆ ಆಯೋಜಿಸುವುದು ಬಿಜೆಪಿಯ ಉದ್ದೇಶವಾಗಿದೆ.

11 ರಾಜ್ಯಗಳಲ್ಲಿ ಚುನಾವಣೆ

11 ರಾಜ್ಯಗಳಲ್ಲಿ ಚುನಾವಣೆ

2019 ರ ಲೋಕಸಭಾ ಚುನಾವಣೆಯ ಆಸುಪಾಸಿನಲ್ಲಿ 11 ರಾಜ್ಯಗಳು ಸಹ ಚುನಾವಣೆ ಎದುರಿಸಲಿವೆ. ರಾಜಸ್ಥಾನ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳ ವಿಧಾನಸಭೆಯ ಕಾಲಾವಧಿ 2019 ರ ಜನವರಿಯಲ್ಲಿ ಅಂತ್ಯವಾಗಲಿದೆ. ಅಂದರೆ ಜನವರಿಗೂ ಮುನ್ನವೇ ಈ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ನಂತರ ಏಪ್ರಿಲ್-ಮೇ ತಿಂಗಳಿನಲ್ಲಿ ಆಂಧ್ರಪ್ರದೇಶ, ಒಡಿಶಾ, ತೆಲಂಗಾಣಗಳು ಚುನಾವಣೆ ಎದುರಿಸಲಿವೆ.

ಬೀದರ್‌ನಿಂದ ಲೋಕಸಭೆಗೆ ರಾಹುಲ್ ಗಾಂಧಿ ಸ್ಪರ್ಧೆ?ಬೀದರ್‌ನಿಂದ ಲೋಕಸಭೆಗೆ ರಾಹುಲ್ ಗಾಂಧಿ ಸ್ಪರ್ಧೆ?

ಅವಧಿಗೂ ಮುನ್ನ ಮಹಾರಾಷ್ಟ್ರದಲ್ಲಿ ಚುನಾವಣೆ?

ಅವಧಿಗೂ ಮುನ್ನ ಮಹಾರಾಷ್ಟ್ರದಲ್ಲಿ ಚುನಾವಣೆ?

ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್ ಮತ್ತು ಮಿಜೋರಾಂಗಳ ವಿಧಾನಸಭೆಯ ಅವಧಿ ಸೆಪ್ಟೆಂಬರ್ ನಿಂದ ಡಿಸೆಂಬರ್ ಅವಧಿಯಲ್ಲಿ ಮುಕ್ತಾಯವಾಗಲಿದ್ದು, ಈ ರಾಜ್ಯಗಳ ಚುನಾವಣೆಯನ್ನು ಕೊಂಚ ಮುನ್ನವೇ, ಅಂದ್ರೆ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಜೊತೆಗೆ ಬಿಹಾರದಲ್ಲಿ ಅವಧಿಗೂ ಮುನ್ನವೇ ಚುನಾವಣೆ ಮಾಡುವುದರಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೇ ಲಾಭವೆನ್ನಲಾಗುತ್ತಿದೆಯಾದ್ದರಿಂದ 2020ರ ಅಂತ್ಯದಲ್ಲಿ ಇಲ್ಲಿ ನಡೆಯಬೇಕಿದ್ದ ಚುನಾವಣೆಯೂ 2019 ರ ಲೋಕಸಭಾ ಚುನಾವಣೆಯ ಸಮಯದಲ್ಲೇ ನಡೆಯಬಹುದು ಎನ್ನಲಾಗುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ: ಎಚ್ ಡಿ ದೇವೇಗೌಡಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ: ಎಚ್ ಡಿ ದೇವೇಗೌಡ

ಚುನಾವಣಾ ಆಯೋಗದಿಂದ ಸಿದ್ಧತೆ

ಚುನಾವಣಾ ಆಯೋಗದಿಂದ ಸಿದ್ಧತೆ

2019 ರ ಏಪ್ರಿಲ್ -ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯೊಂದಿಗೆ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ನಡೆಸಲು ಸುನಾವಣಾ ಆಯೋಗ ಉತ್ಸುಕತೆ ತೋರಿದ್ದು, ಚುನಾವಣೆಗಾಗಿ ಈಗಾಗಲೇ 17.4 ಲಕ್ಷ ವಿವಿಪ್ಯಾಟ್(ಮತದಾನ ಖಾತ್ರಿ ಯಂತ್ರ)ಗಳನ್ನೂ, 13.95 ಲಕ್ಷ ಬ್ಯಾಲೆಟ್ ಯುನಿಟ್ ಗಳನ್ನು ಮತ್ತು 9.3 ಲಕ್ಷ ಕಂಟ್ರೋಲ್ ಯುನಿಟ್ ಗಳಿಗೆ ಆರ್ಡರ್ ನೀಡಿದೆ.

ಸಂವಿಧಾನದಲ್ಲಿ ತಿದ್ದುಪಡಿ?

ಸಂವಿಧಾನದಲ್ಲಿ ತಿದ್ದುಪಡಿ?

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಸಂವಿಧಾನದಲ್ಲಿ ತಿದ್ದುಪಡಿಯಾಗಬೇಕಿದೆ. ಲೋಕಸಭಾ ಚುನಾವಣೆಯ ಸಮಯದಲ್ಲೇ ಹಲವು ರಾಜದ್ಯಗಳು ಚುನಾವಣೆ ಎದುರಿಸಲಿರುವ ಕಾರಣ ಹೆಚ್ಚುವರಿ ಇವಿಎಂ(ಮತಯಂತ್ರ) ಮತ್ತು ವಿವಿಪ್ಯಾಟ್ ಗಳಿಗೆ ಬೇಡಿಕೆ ಇಡಲಾಗಿದೆ ಎಂದು ಮುಖ್ಯ ಚುನಾವಣಾಯುಕ್ತ ಒ ಪಿ ರಾವತ್ ಹೇಳಿದ್ದಾರೆ. 'ಸಂವಿಧಾನದಲ್ಲಿ ಯಾವುದೇ ಬದಲಾವಣೆ ತರದೆ, ಎಲ್ಲಾ ರಾಜ್ಯಗಳ ನಾಯಕರನ್ನು ವಿಶಸ್ವಾಸಕ್ಕೆ ತೆಗೆದುಕೊಂಡು ಲೋಕಸಭಾ ಚುನಾವಣೆಯ ಹೊತ್ತಲ್ಲೇ ವಿಧಾನಸಭಾ ಚುನಾವಣೆಯನ್ನೂ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ' ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಕಾನೂನು ಆಯೋಗಕ್ಕೆ ಅಮಿತ್ ಶಾ ಪತ್ರ

ಕಾನೂನು ಆಯೋಗಕ್ಕೆ ಅಮಿತ್ ಶಾ ಪತ್ರ

ಮೋದಿಯವರ 'ಒಂದು ರಾಷ್ಟ್ರ ಒಂದು ಚುನಾವಣೆ' ಪರಿಕಲ್ಪನೆಗೆ ಬೆಂಬಲ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇತ್ತೀಚೆಗಷ್ಟೇ, ಕಾನೂನು ಆಯೋಗಕ್ಕೆ ಪತ್ರವೊಂದನ್ನು ಬರೆದು, ಒಂದೇ ಬಾರಿ ಎಲ್ಲ ಕಡೆ ಚುನಾವಣೆ ನಡೆಸುವ ಕುರಿತು ಬಿಜೆಪಿ ಉತ್ಸುಕತೆ ತೋರಿದೆ ಎಂದಿದ್ದಾರೆ.

ವಿರೋಧಪಕ್ಷಗಳಾದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಮುಂತಾದ ಪಕ್ಷಗಳು ಈ ಪರಿಕಲ್ಪನೆಯನ್ನು ವಿರೋಧಿಸಿವೆ.

English summary
BJP is thinking of conducting elections in 11 states along with Lok Sabha elections 2019. What are those 11 states?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X