ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಶಾಸಕ ಸ್ಥಾನದಿಂದ ಸಿಎಂ ಹೇಮಂತ್ ಸೋರೆನ್ ಅನರ್ಹ!?

|
Google Oneindia Kannada News

ನವದೆಹಲಿ/ರಾಂಚಿ, ಆಗಸ್ಟ್ 26: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಚುನಾವಣಾ ಆಯೋಗವು ತಪ್ಪಿತಸ್ಥರೆಂದು ಪರಿಗಣಿಸಿ, ಕೇವಲ "ಅನರ್ಹತೆ"ಗೆ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಇದರರ್ಥ ರಾಜಭವನದಿಂದ ಔಪಚಾರಿಕ ಘೋಷಣೆಯ ನಂತರ, ಅವರು ರಾಜೀನಾಮೆ ನೀಡಬೇಕಾಗುತ್ತದೆ. ಆದರೆ, ಆರು ತಿಂಗಳಲ್ಲಿ ಮರುಚುನಾವಣೆ ನಡೆಯಬಹುದು. ಯುಪಿಎ ಶಾಸಕರು ಅವರನ್ನು ನಾಯಕರಾಗಿ ಮರು ಆಯ್ಕೆ ಮಾಡಿದರೆ ಮುಖ್ಯಮಂತ್ರಿಯಾಗಿಯೂ ಮುಂದುವರಿಯಬಹುದು.

ಎಕೆ 47 ರೈಫಲ್ ವಶ: ಜಾರ್ಖಂಡ್‌ನ ಸಿಎಂ ಆಪ್ತ ಪ್ರೇಮ್ ಪ್ರಕಾಶ್ ಬಂಧಿಸಿದ ಇಡಿಎಕೆ 47 ರೈಫಲ್ ವಶ: ಜಾರ್ಖಂಡ್‌ನ ಸಿಎಂ ಆಪ್ತ ಪ್ರೇಮ್ ಪ್ರಕಾಶ್ ಬಂಧಿಸಿದ ಇಡಿ

ಜಾರ್ಖಂಡ್‌ನ ಹಿರಿಯ ನಾಯಕರಾದ ಸರಯು ರಾಯ್ ಅವರು ಸೊರೆನ್ ಅವರು ಶಾಸಕ ಸ್ಥಾನಕ್ಕೆ ಅರ್ಹರಲ್ಲ ಎಂದು ಚುನಾವಣಾ ಆಯೋಗವು ಘೋಷಿಸಿದೆ ಎಂದು ಅವರ "ಬಹಳ ವಿಶ್ವಾಸಾರ್ಹ ಮೂಲಗಳು" ತಿಳಿಸಿವೆ ಎಂದು ಹೇಳಿದ್ದಾರೆ.

Election Commission disqualifies Jharkhand CM Hemant Soren as MLA

"ಹೆಚ್ಚು ವಿಶ್ವಾಸಾರ್ಹ ಮೂಲಗಳ ಪ್ರಕಾರ, ಚುನಾವಣಾ ಆಯೋಗವು ಹೇಮಂತ್ ಸೋರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದೆ. ಅನರ್ಹತೆಯ ಅಧಿಸೂಚನೆಯು ರಾಜಭವನದಿಂದ ಹೊರಬಂದ ತಕ್ಷಣ, ಅವರು ರಾಜೀನಾಮೆ ನೀಡಬೇಕು ಅಥವಾ ಗೌರವಾನ್ವಿತ ನ್ಯಾಯಾಲಯದಿಂದ ಈ ಅಧಿಸೂಚನೆಗೆ ತಡೆಯಾಜ್ಞೆ ಪಡೆಯಬೇಕು" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ತಾವೇ ಗಣಿಗಾರಿಕೆ ಗುತ್ತಿಗೆಯನ್ನು ತಮಗೆ ನೀಡಿಕೊಂಡಿದ್ದಕ್ಕಾಗಿ ಮುಖ್ಯಮಂತ್ರಿ ಸೋರೆನ್ ವಿರುದ್ಧ ದೂರು ದಾಖಲಿಸಲಾಗಿದೆ.

ರಾಜ್ಯಪಾಲ ರಮೇಶ್ ಬೈಸ್ ಅವರು ಸೋರೆನ್ ಅವರ ಅನರ್ಹತೆಯ ಬಗ್ಗೆ ಚುನಾವಣಾ ಆಯೋಗದ ಅಭಿಪ್ರಾಯವನ್ನು ಪರಿಶೀಲಿಸುತ್ತಿದ್ದಾರೆ. ಶೀಘ್ರದಲ್ಲೇ ಅದನ್ನು ತಿಳಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಹೇಮಂತ್ ಸೊರೆನ್ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಬಂಧಿಸಲಾಗಿಲ್ಲ ಎಂದು ಹೇಳಿದರು.

ಇತ್ತ, ಸೋರೆನ್ ಅವರು ಮುಂದಿನ ಕ್ರಮದ ಬಗ್ಗೆ ಸಾಂವಿಧಾನಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ರಾಜ್ಯಪಾಲರ ಆದೇಶದ ನಂತರ ಜಾರ್ಖಂಡ್ ಮುಖ್ಯಮಂತ್ರಿ ಇಂದು ರಾಂಚಿಯ ತಮ್ಮ ನಿವಾಸದಲ್ಲಿ ಯುಪಿಎ ಸಭೆಯನ್ನು ಕರೆದಿದ್ದಾರೆ.

ಯುಪಿಎ ಮೈತ್ರಿಕೂಟದ ಭಾಗವಾಗಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), 2024 ರವರೆಗೆ ಸೋರೆನ್ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

English summary
Election Commission disqualifies Jharkhand CM Hemant Soren as MLA. in illegal mining case. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X