ಲೋಕ ಚುನಾವಣೆ: ದೇಶಕ್ಕೆ 3500 ಕೋಟಿ ರೂ ಖರ್ಚು

election-commission-2014-lok-sabha-polls-cost-exchequer-rs-3500-cr
ನವದೆಹಲಿ, ಫೆ.18- ಲೋಕಸಭಾ ಚುನಾವಣೆ ಸನಿಹದಲ್ಲೇ ಇದೆ. ಚುನಾವಣಾ ಆಯೋಗವೂ ಚುನಾವಣೆಗೆ ಸರ್ವಸಿದ್ಧತೆ ನಡೆಸುತ್ತಿದೆ. ಒಂದು ಅಂದಾಜಿನ ಪ್ರಕಾರ ಸರಕಾರಿ ಖಜಾನೆಯಿಂದ ಚುನಾವಣೆಗೆ ಬರೋಬ್ಬರಿ 3,500 ಕೋಟಿ ರೂ ಖರ್ಚಾಗಲಿದೆ.

ಅಂದರೆ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಖರ್ಚಾಗಿದ್ದಕ್ಕಿಂತ (1,400 ಕೋಟಿ ರೂ) ಶೇ. 150ರಷ್ಟು ಹೆಚ್ಚು ಈ ಬಾರಿ ಖರ್ಚಾಗಲಿದೆ! ತಕ್ಷಣ ಗಮನಿಸಿ. ಇದು ಸರಕಾರದ ಖಜಾನೆಯಿಂದ ಖಾಲಿಯಾಗುವ ಮೊತ್ತ. ಇನ್ನು, ಇದಕ್ಕೆ ರಾಜಕೀಯ ಪಕ್ಷಗಳು ಖರ್ಚು ಮಾಡುವ ಮೊತ್ತವನ್ನು ಸೇರಿಸಿಲ್ಲ. ಹಾಗೆಯೇ, ಸರಕಾರವು ಭದ್ರತೆಗಾಗಿ ಖರ್ಚು ಮಾಡುವುದನ್ನೂ ಸೇರಿಸಿಲ್ಲ. ಅವರೆಡೂ ಈ ಮೊತ್ತಕ್ಕಿಂತ ಹೆಚ್ಚಿನದ್ದಾಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಚುನಾವಣೆ ಸಂದರ್ಭದಲ್ಲಿ ಪ್ರತಿ ರಾಜ್ಯವೂ ಮೊದಲು ತಾನೇ ಚುನಾವಣೆಗೆ ಖರ್ಚು ಮಾಡುತ್ತದೆ. ಬಳಿಕ ಕೇಂದ್ರ ಸರಕಾರದಿಂದ ಮರುಪಾವತಿ ಪಡೆಯುತ್ತದೆ. ಕೇಂದ್ರ ಕಾನೂನು ಸಚಿವಾಲಯವು ರಾಜ್ಯಗಳ ಚುನಾವಣಾ ಖರ್ಚುಗಳನ್ನು ಪರಿಶೀಲಿಸಿ, ಮರುಪಾವತಿಗೆ ಅಂಕಿತ ಹಾಕುತ್ತದೆ. ಈ ಆಧಾರದಲ್ಲಿ ಅಂದಾಜು ಮಾಡುವುದಾದರೆ ಈ ಬಾರಿ ಹೆಚ್ಚುಕಮ್ಮಿ 3,500 ಕೋಟಿ ರೂ ಖರ್ಚಾಗಲಿದೆ ಎಂದು ಚುನಾವಣಾ ಆಯೋಗದ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

2009ರ ನಂತರ ಹಣದುಬ್ಬರ ಉಬ್ಬುತ್ತಲೇ ಇದೆ. ಜತೆಗೆ, ಆಯೋಗವು ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಂಡಿದೆ. ಮತದಾರರನ್ನು ಜಾಗೃತಗೊಳಿಸುವುದು, ಚುನಾವಣಾ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಬಳಸುವುದು, ಚುನಾವಣಾ ಅಕ್ರಮ ತಡೆಯಲು ಜಾಗೃತಗೊಳಿಸುವುದು ಇವೇ ಮುಂತಾದ ಕಾರ್ಯಕ್ರಮಗಳಿಗೆ ಆಯೋಗವು ಹೆಚ್ಚು ಹೆಚ್ಚು ಹಣವನ್ನು ತೊಡಗಿಸುತ್ತಿದೆ. ಕಳೆದ ಐದು ವರ್ಷಗಳಲ್ಲಿ ಈ ಬಾಬತ್ತಿನಲ್ಲಿ ಖರ್ಚುಗಳು ಹೆಚ್ಚಾಗಿವೆ. ಅಂದಹಾಗೆ, ಭದ್ರತಾ ವೆಚ್ಚಗಳನ್ನು ಆಯಾ ರಾಜ್ಯ ಸರಕಾರಗಳೇ ಹೊರಬೇಕಾಗುತ್ತದೆ.

ಚುನಾವಣೆ ಸೇವೆಯಲ್ಲಿ ತೊಡಗುವ ಅಧಿಕಾರಿಗಳಿಗೆ ಗೌರವ ಧನ ನೀಡುವುದು, ಅವರಿಗೆ ತರಬೇತಿ ನೀಡುವುದು, ಅವರ ಸಂಚಾರ ವೆಚ್ಚಗಳು ಇದರಲ್ಲಿ ಅಡಕವಾಗುತ್ತವೆ.

1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗ ಖಜಾನೆಯಿಂದ 10.45 ಕೋಟಿ ರೂ ಬರಿದಾಗಿತ್ತು.

ಕೆಲ ಲೋಕ ಚುನಾವಣೆಗಳ ಖರ್ಚುವೆಚ್ಚ ಹೀಗಿದೆ:
A. 1952 10.45 ಕೋಟಿ ರೂ
B. 1957 5.9 ಕೋಟಿ ರೂ
C. 1977 23 ಕೋಟಿ ರೂ
D. 1980 54 ಕೋಟಿ ರೂ
E. 1989 154 ಕೋಟಿ ರೂ
F. 1991 359 ಕೋಟಿ ರೂ
G. 1996 597 ಕೋಟಿ ರೂ
H. 1998 666 ಕೋಟಿ ರೂ
I. 1999 880 ಕೋಟಿ ರೂ
J. 2009 1,400 ಕೋಟಿ ರೂ
K. 2014 3,500 ಕೋಟಿ ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+