ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾಹಪೂರ್ವ ಲೈಂಗಿಕತೆ ರೇಪ್ ಅಲ್ಲ ಎಂದ ನ್ಯಾಯಾಲಯ

ಇತ್ತೀಚೆಗೆ ಸುಪ್ರೀಂ ಕೋರ್ಟ್ ಪ್ರಕರಣವೊಂದರ ವಿಚಾರಣೆಲ್ಲಿ ಇಂಥದ್ದೇ ತೀರ್ಪು ನೀಡಿತ್ತು. ಬಾಂಬೆ ಹೈಕೋರ್ಟ್ ಇದನ್ನ ಮತ್ತಷ್ಟು ಸ್ಪಷ್ಟವಾಗಿ ಹೇಳಿದೆಯಷ್ಟೇ.

|
Google Oneindia Kannada News

ಮುಂಬೈ, ಜನವರಿ 21: ವಿದ್ಯಾವಂತ ತರುಣಿಯೊಬ್ಬಳು ಯಾವುದೇ ವ್ಯಕ್ತಿಯೊಂದಿಗೆ ಪರಸ್ಪರ ಒಪ್ಪಿಗೆ ಸಹಿತವಾದ, ವಿವಾಹ ಪೂರ್ವ ಲೈಂಗಿಕತೆಯಲ್ಲಿ ತೊಡಗಿಸಿಕೊಂಡು, ಆ ವ್ಯಕ್ತಿಯೊಂದಿಗಿನ ಬಾಂಧವ್ಯ ಮುರಿದುಬಿದ್ದ ನಂತರ ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿದಲ್ಲಿ, ಅಂಥ ಆರೋಪಗಳನ್ನು ಮಾನ್ಯ ಮಾಡಲಾಗದು ಎಂದು ಶುಕ್ರವಾರ ಬಾಂಬೆ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇದಲ್ಲದೆ, ಕೆಲವು ಪ್ರಕರಣಗಳಲ್ಲಿ, ಯುವಕನು ತಾನು ಮದುವೆಯಾಗುತ್ತೇನೆ ಎಂದು ಹೇಳಿ ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದರೂ, ಅದು ಮೋಸ ಅಥವಾ ಕುತಂತ್ರವೆಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಖಡಕ್ಕಾಗಿ ಹೇಳಿದೆ.

Educated Girl Having Consensual Premarital Sex Cannot Claim Rape After Breakup, Says Bombay HC

ಮುಂಬೈನ ತರುಣಿಯೊಬ್ಬಳು ತನ್ನ ಮಾಜಿ ಪ್ರಿಯಕರನ ವಿರುದ್ಧ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯ ವಿಚಾರಣೆ ವೇಳೆ ಇಂಥದ್ದೊಂದು ಮಹತ್ವದ ತೀರ್ಪು ನೀಡಿದೆ. ಅಂತೆಯೇ, ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಆಕೆಯ ಪ್ರಿಯಕರನನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ.

ತೀರ್ಪು ನೀಡಿದ ನ್ಯಾಯಮೂರ್ತಿ ಮೃದುಲಾ ಭಟ್ಕರ್, "ಶತಮಾನಗಳಿಂದಲೂ ನಮ್ಮ ದೇಶದಲ್ಲಿ ವಿವಾಹಪೂರ್ವ ಲೈಂಗಿಕತೆಗೆ ನಿಷೇಧವಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಯುವತಿಯರು ಹೊಸ ಬಗೆಯ ಆಕರ್ಷಣೆಗಳಿಗೆ ಒಳಗಾಗಿ ವಿವಾಹಪೂರ್ವ ಲೈಂಗಿಕತೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಯಾವುದೇ ಆಕ್ಷೇಪಣೆಯಿಲ್ಲ. ಆದರೆ, ವಿದ್ಯಾವಂತ ತರುಣಿಯೊಬ್ಬಳು ಇಂಥ ಪ್ರಸಂಗಗಳಲ್ಲಿ ಭಾಗಿಯಾಗವುದಾದರೆ, ಆಕೆಯ ಭವಿಷ್ಯದ ಜವಾಬ್ದಾರಿಯನ್ನು ಆಕೆಯೇ ಹೊರಬೇಕಿರುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
A promise to marry cannot be considered an inducement in every rape case, the Bombay high court has ruled while granting pre-arrest bail to a 21-year-old youth after his former girlfriend lodged a case of rape following their break-up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X