ಹಿಮಾಚಲ ಪ್ರದೇಶದಲ್ಲಿ ಭೂಕಂಪ: 4:4 ತೀವ್ರತೆ ದಾಖಲು
ಹಿಮಾಚಲ ಪ್ರದೇಶ, ಅಕ್ಟೋಬರ್ 27: ಹಿಮಾಚಲ ಪ್ರದೇಶದ ಮಂಡಿಯಲ್ಲಿ ಇಂದು ಬೆಳಿಗ್ಗೆ 8:07 ಕ್ಕೆ ಲಘು ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪನದಲ್ಲಿ 4.4 ತೀವ್ರತೆ ದಾಖಲಾಗಿದೆ.
ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ. ಕಳೆದ ತಿಂಗಳು ಕಣಿವೆ ರಾಜ್ಯ ಜಮ್ಮು-ಕಾಶ್ಮೀರವನ್ನು ಕಾಡಿದ್ದ ಭೂಕಂಪದ ಭೀತಿ ಇದೀಗ ಹಿಮಾಚಲ ಪ್ರದೇಶವನ್ನೂ ವ್ಯಾಪಿಸಿದೆ.

ಕಳೆದ ತಿಂಗಳು ಜಮ್ಮು ಕಾಶ್ಮೀರದಲ್ಲಿ 4.5 ತೀವ್ರತೆಯ ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪನದಲ್ಲಿ ದಾಖಲಾಗಿತ್ತು.












Click it and Unblock the Notifications