Kolhapur Earthquake: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭೂಕಂಪ: 3.4 ತೀವ್ರತೆ ದಾಖಲು
ಮಹಾರಾಷ್ಟ್ರ,ಆಗಸ್ಟ್ 16: ಮಹರಾಷ್ಟ್ರದ ಕೊಲ್ಹಾಪುರದಲ್ಲಿ ಬೆಳಗ್ಗೆ 06.45ಕ್ಕೆ ಲಘು ಭೂಕಂಪ ಸಂಭವಿಸಿದ್ದು, 3.4 ತೀವ್ರತೆ ದಾಖಲಾಗಿದೆ. 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಕೊಲ್ಹಾಪುರದಲ್ಲಿ ಲಘು ಭೂಕಂಪ ಸಂಭವಿಸಿದ್ದು, ಆದರೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಗಳಿಲ್ಲ. ಕೊಲ್ಹಾಪುರವು ಪಶ್ಚಿಮ ಮಹಾರಾಷ್ಟ್ರದಲ್ಲಿದೆ, ಮುಂಬೈನಿಂದ ಸುಮಾರು 375 ಕಿಮೀ ದೂರದಲ್ಲಿದೆ. ಈ ನಡುವೆ ಸತಾರಾ ಜಿಲ್ಲೆಯ ಪಟಾನ್ ನಗರ ಸೇರಿದಂತೆ ಸಮೀಪದ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 6.40ಕ್ಕೆ ಭೂಕಂಪ ಸಂಭವಿಸಿದೆ.

ಕೊಯ್ನಾ ಅಣೆಕಟ್ಟಿನಿಂದ 20 ಕಿ.ಮೀ ದೂರದಲ್ಲಿ ಭೂಕಂಪನದ ಅನುಭವವಾಗಿದ್ದು, ಅಣೆಕಟ್ಟು ಸುರಕ್ಷಿತವಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮೇ 27ರಂದು ಮಹಾರಾಷ್ಟ್ರದ ಪಾಲ್ಘಡ ಜಿಲ್ಲೆಯಲ್ಲಿ 3.3 ಮತ್ತು 3.5 ತೀವ್ರತೆಯ ಲಘು ಕಂಪನಗಳು ಸಂಭವಿಸಿದವು. 3.3 ರ ತೀವ್ರತೆಯೊಂದಿಗೆ ಆರಂಭಿಕ ಕಂಪನವು ಸಂಜೆ 5:15 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ, ನಂತರ 15 ನಿಮಿಷಗಳ ನಂತರ 5.28 ಕ್ಕೆ 3.5 ರ ತೀವ್ರತೆಯೊಂದಿಗೆ ಎರಡನೇ ಭೂಕಂಪ ಸಂಭವಿಸಿತ್ತು.












Click it and Unblock the Notifications