Earthquake In Gujarat: ಚಂಡಮಾರುತ ಭೀತಿಯ ನಡುವೆಯೇ ಗುಜರಾತ್‌ನಲ್ಲಿ ಭೂಕಂಪ
ಬಿಪರ್ ಜಾಯ್ ಚಂಡಮಾರುತದ ಭೀತಿಯಲ್ಲಿರುವ ಗುಜರಾತ್ ರಾಜ್ಯಕ್ಕೆ ಭೂಕಂಪನದ ಆತಂಕ ಎದುರಾಗಿದೆ. ರಾಜ್ಯದ ಕಛ್ ಜಿಲ್ಲೆಯಲ್ಲಿ ಬುಧವಾರ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದೆ.
ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ಭೂಕಂಪದಿಂದ ಸದ್ಯ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಗುಜರಾತ್‌ನ ಕರಾವಳಿ ಭಾಗಗಳಿಗೆ ಬಿಪರ್ ಜಾಯ್ ಚಂಡಮಾರುತ ಅಪ್ಪಳಿಸುವ ಭೀತಿ ಇರುವಾಗಲೇ ಭೂಕಂಪ ಸಂಭವಿಸಿದೆ. ಜೂನ್ 15ರಂದು ಬಿಪರ್ ಜಾಯ್ ಚಂಡಮಾರುತ ಗುಜರಾತ್ ಕರಾವಳಿ ಭಾಗಗಳಿಗೆ ಅಪ್ಪಳಿಸಲಿದ್ದು, ಚಂಡಮಾರು ಪರಿಸ್ಥಿರಿ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಗುಜರಾತ್ ಕರಾವಳಿ ಭಾಗದಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದ್ದು ಮುಂಜಾಗ್ರತಾ ಕ್ರಮವಾಗಿ 41 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.












Click it and Unblock the Notifications