ವಿಶ್ವ ಭೂ ದಿನಾಚರಣೆ ಸಂಭ್ರಮದ ಕ್ಷಣಗಳು

ಬೆಂಗಳೂರು, ಏ.22: ವಿಶ್ವಾದ್ಯಂತ ಏಪ್ರಿಲ್ 22ರಂದು 'ವಿಶ್ವ ಭೂ ದಿನ' ಆಚರಿಸಲಾಗುತ್ತದೆ. ಪರಿಸರದ ಮಹತ್ವವನ್ನು ಎತ್ತಿಹಿಡಿಯುತ್ತ ಹೊಸ ಸಂದೇಶವನ್ನು ಸಾರಲಾಗುತ್ತದೆ. ಎಲ್ಲ ಮಾನವರ ಪ್ರಕೃತಿಯೊಂದಿಗೆ ಆರೋಗ್ಯಪೂರ್ಣವಾಗಿ ಸಾಮರಸ್ಯದಿಂದ ಬದುಕುವ ಹಕ್ಕನ್ನು ಉತ್ತೇಜಿಸುವ ಸಂದೇಶ ಎಲ್ಲೆಡೆ ಕೇಳಿ ಬರುತ್ತದೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿಶ್ವ ಭೂ ದಿನಾಚರಣೆ ಸಂಭ್ರಮದಿಂದ ಆಚರಿಸಲಾಗಿದೆ.

ಜಗತ್ತಿನ ಎಲ್ಲ ಸರಕಾರಗಳು, ವಾಣಿಜ್ಯ ಸಂಘಟನೆಗಳು ಹಾಗೂ ನಾಗರಿಕರು ಭೂ ಮಾತೆಯನ್ನು ಗೌರವದಿಂದ ಕಾಣಬೇಕು ಮತ್ತು ಆಕೆಯ ಬಗ್ಗೆ ಸೂಕ್ತ ಗಮನ ನೀಡಬೇಕು ಎಂದು ವಿಶ್ವಸಂಸ್ಥೆ ಸಂದೇಶ ಹೊರಡಿಸಿದೆ.

ಹೈದರಾಬಾದಿನಲ್ಲಿ ಐಟಿ ಹಾಗೂ ಐಟಿಯೇತರ ಸಂಸ್ಥೆಗಳ ಒಕ್ಕೂಟ (ITsAP) ಸುಮಾರು 300 ಸದಸ್ಯರನ್ನು ಒಟ್ಟುಗೂಡಿಸಿ ಮಂಗಳವಾರದಂದು ವಿಶ್ವಭೂ ದಿನಾಚರಣೆ ಅಂಗವಾಗಿ ಬಸ್ ದಿನಾಚರಣೆ ಮಾಡಿದ್ದಾರೆ. ಖಾಸಗಿ ವಾಹನಗಳು, ಕಾರು, ಬೈಕು ಪಕ್ಕಕ್ಕಿಟ್ಟು ಕೆಲವರು ಸೈಕಲೇರಿದರೆ ಇನ್ನು ಕೆಲವರು ಸಾರ್ವಜನಿಕ ವಾಹನ ಬಸ್ ಏರಿ ಕಚೇರಿ ತಲುಪಿದರು. ದೇಶದ ವಿವಿಧೆಡೆ ಶಾಲೆಗಳಲ್ಲಿ ಭೂ ದಿನಾಚರಣೆ ವರದಿಗಳು ಬಂದಿವೆ. ಭೂಮಿಯನ್ನು ಆದರಿಸುವ ಈ ದಿನದ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ

1970ರಿಂದ ವಿಶ್ವ ಭೂ ದಿನ ಆಚರಣೆ

1970ರಿಂದ ವಿಶ್ವ ಭೂ ದಿನ ಆಚರಣೆ

1970ರಿಂದ ವಿಶ್ವ ಭೂ ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸುಮಾರು 192 ದೇಶಗಳಲ್ಲಿ ಆಚರಣೆಯಲ್ಲಿದೆ.

ವಿಶ್ವ ಭೂ ದಿನಾಚರಣೆ ಚಿತ್ರಗಳು

ವಿಶ್ವ ಭೂ ದಿನಾಚರಣೆ ಚಿತ್ರಗಳು

ದಿಮಾಪೌರ್ (ನಾಗಾಲ್ಯಾಂಡ್) ನಲ್ಲಿ ಕಸ ಆಯುವವರು ಕಸದ ರಾಶಿಯ ನಡುವೆ ಸಾಗುವ ದೃಶ್ಯ ಇಲ್ಲಿ ಕಾಣಬಹುದು. ಗಾರ್ಡನ್ ಸಿಟಿ ಬೆಂಗಳೂರಿಗೂ ಇದೇ ಕಸದ ಸಮಸ್ಯೆ ಬೃಹತ್ ಪ್ರಮಾಣದಲ್ಲಿ ಕಾಡುತ್ತಿದೆ.

ಮೊರಾದಾಬಾದಿನ ಶಾಲಾ ಮಕ್ಕಳು

ಮೊರಾದಾಬಾದಿನ ಶಾಲಾ ಮಕ್ಕಳು

ಮೊರಾದಾಬಾದಿನ ಶಾಲಾ ಮಕ್ಕಳು ಪರಿಸರ ಜಾಗೃತಿ ನೃತ್ಯ ರೂಪಕ ಪ್ರದರ್ಶಿಸಿ ಭೂ ದಿನಾಚರಣೆ ಆಚರಿಸಿದರು.

ನವದೆಹಲಿಯಲ್ಲಿ ಪರಿಸರ ಕಾಳಜಿ

ನವದೆಹಲಿಯಲ್ಲಿ ಪರಿಸರ ಕಾಳಜಿ

ನವದೆಹಲಿಯಲ್ಲಿ ಪರಿಸರ ಕಾಳಜಿ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಮಕ್ಕಳ ಜತೆ ಜಾಗೃತಿ ಮೂಡಿಸಿದರು. ಚಿತ್ರಗಳು: ಪಿಟಿಐ

ಜಾಲ ತಾಣಗಳಲ್ಲಿ ಭೂ ದಿನಾಚರಣೆ

ಜಾಲ ತಾಣಗಳಲ್ಲಿ ಭೂ ದಿನಾಚರಣೆ ಸಂಭ್ರಮ ಮುಗಿಲು ಮುಟ್ಟಿದ್ದು, ಸಂದೇಶಗಳ ಸುರಿಮಳೆ ಹರಿದಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+