ಲೋಕಸಭಾ ಚುನಾವಣೆ ದಿನಾಂಕದ ಸುಳಿವು ನೀಡಿದ ನರೇಂದ್ರ ಮೋದಿ
Recommended Video

2019ರ ಲೋಕಸಭಾ ಚುನಾವಣಾ ಬಗ್ಗೆ ಹಿಂಟ್ ಕೊಟ್ಟ ಮೋದಿ | Oneindia Kannada
ನವದೆಹಲಿ, ಮಾರ್ಚ್ 27: 'ಒಂದು ರಾಷ್ಟ್ರ, ಒಂದು ಚುನಾವಣೆ' ನೀತಿಯನ್ನು ಜಾರಿಗೆ ತರುವ ಬಗ್ಗೆ ಉತ್ಸುಕತೆ ತೋರಿದ್ದ ಬಿಜೆಪಿ, ಈ ಬಾರಿ ಲೋಕಸಭಾ ಚುನಾವಣೆಯನ್ನು ವರ್ಷಾಂತ್ಯದಲ್ಲೇ ಎದುರಿಸಲಿದೆ ಎನ್ನಲಾಗುತ್ತಿತ್ತು.
ಆದರೆ ಈ ಮಾತು ಸುಳ್ಳು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಮಾತಿನಿಂದ ತಿಳಿದುಬಂದಿದೆ. ಇತ್ತೀಚೆಗೆ ಬಿಜೆಪಿ ಸಂಸದರೊಂದಿಗೆ ಮಾತನಾಡುತ್ತಿದ್ದ ನರೇಂದ್ರ ಮೋದಿ, 2019 ರ ಜನವರಿವರೆಗೂ ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಬೇಡಿ. ನಿಷ್ಠೆಯಿಂದ ದಕೆಲಸ ಮಾಡಿ ಎಂದಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ.
2019 ರ ಏಪ್ರಿಲ್-ಮೇ ತಿಂಗಳಿನಲ್ಲಿ ಚುನಾವಣೆ ನಡೆಯಬಹುದು ಎಂದು ಅಂದಾಜಿಸಲಾಗಿದ್ದು, ಯಾರೂ ಮುಂದಿನ ಚುನಾವಣೆಯ ಕುರಿತು ಹೆಚ್ಚು ಮಾತನಾಡದಂತೆ ಮೋದಿ ಹೇಳಿದ್ದಾರೆ. ಅಲ್ಲದೆ ಸಂಸದರು ತಮ್ಮ ಕ್ಷೇತ್ರದ ಜನರೊಂದಿಗೆ ಹೆಚ್ಚು ಬೆರೆತು, ಜನರಲ್ಲಿ ಹೆಚ್ಚು ಹೆಚ್ಚು ವಿಶ್ವಾಸ ಗಳಿಸುವಂತೆಯೂ ಮೋದಿ ಹೇಳಿದ್ದಾರೆ.













Click it and Unblock the Notifications