ರೆಡ್‌ಝೋನ್: ಅಗತ್ಯವಲ್ಲದ ವಸ್ತುಗಳ ಪೂರೈಕೆಗೆ ಇ-ಕಾಮರ್ಸ್ ಕಂಪನಿಗಳಿಗೆ ಅನುಮತಿ
ರೆಡ್‌ಝೋನ್: ಅಗತ್ಯವಲ್ಲದ ವಸ್ತುಗಳ ಪೂರೈಕೆಗೆ ಇ-ಕಾಮರ್ಸ್ ಕಂಪನಿಗಳಿಗೆ ಅನುಮತಿ
ನವದೆಹಲಿ, ಮೇ 18: ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಹೊರಡಿಸಿರುವ ನೂತನ ಮಾರ್ಗಸೂಚಿಗಳ ಪ್ರಕಾರ ರೆಡ್‌ಝೋನ್ ವಲಯಗಳಲ್ಲೂ ಕೂಡ ಅಗತ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡಲು ಇ-ಕಾಮರ್ಸ್ ಕಂಪನಿಗಳಿಗೆ ಅನುಮತಿ ನೀಡಲಾಗಿದೆ.
ಇ- ಆನ್‌ಲೈನ್ ಶಾಪಿಂಗ್ ಹಾಗೂ ಕಾಮರ್ಸ್ ವೆಬ್‌ಸೈಟ್‌ಗಳಿಗೆ ಅನುಮತಿ ನೀಡಲಾಗಿದೆ. ಆದರೆ ಕಂಟೈನ್‌ಮೆಂಟ್ ಝೋನ್‌ಗಳಲ್ಲಿ ಮಾತ್ರ ಇದಕ್ಕೆ ಅವಕಾಶವಿಲ್ಲ.

ಈ ಮೊದಲು ಹಸಿರು ಹಾಗೂ ಆರೆಂಜ್ ಝೋನ್‌ಗಳಲ್ಲಿ ಮಾತ್ರ ಇ-ಕಾಮರ್ಸ್ ಹಾಗೂ ಆನ್‌ಲೈನ್‌ನಲ್ಲಿ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಲಾಕ್‌ಡೌನ್ ನಾಲ್ಕನೇ ಹಂತದಲ್ಲಿ ರೆಡ್ ಝೋನ್ ಪ್ರದೇಶಗಳಿಗೂ ಅನುಮತಿ ನೀಡಲಾಗಿದೆ.
ಲಾಕ್‌ಡೌನ್ 3.0ದಲ್ಲಿ ಕೆಂಪು ವಲಯಗಳಲ್ಲಿ ಇ-ಕಾಮರ್ಸ್ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಅಗತ್ಯ ವಸ್ತುಗಳ ಖರೀದಿ ಮಾತ್ರ. ಲಾಕ್‌ಡೌನ್ 4.0ದಲ್ಲಿ ಇ-ಕಾಮರ್ಸ್ ಚಟುವಟಿಕೆಗಳಿಗೆ ಅಗತ್ಯ ಹಾಗೂ ಅನಿವಾರ್ಯವಲ್ಲದ ವಸ್ತುಗಳನ್ನು ಕೊಳ್ಳಲು ಕೂಡ ಅನುಮತಿ ಇದೆ.
ರಾಜ್ಯ ಸರ್ಕಾರಗಳು ತಮ್ಮ ಸ್ಥಳೀಯ ಅಗತ್ಯಗಳು, ಸನ್ನಿವೇಶಗಳ ಆಧಾರದ ಮೇಲೆ ವ್ಯವಹಾರಗಳನ್ನು ನಡೆಸಲು ನಿರ್ಧಾರ ತೆಗೆದುಕೊಳ್ಳಲಿದೆ.ಲಾಕ್‌ಡೌನ್ 4.0ನಲ್ಲಿ ಇ-ಕಾಮರ್ಸ್ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಕ್ರಮವು ಈ ಹಿಂದೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಲು ಅನುಮತಿಸಿದ್ದ ಕಂಪನಿಗಳಿಗೆ ದೊಡ್ಡ ಲಾಭವಾಗಲಿದೆ.
ಕೊರೊನಾ ವೈರಸ್ ಭಾರತದಲ್ಲಿ ತನ್ನ ವ್ಯವಹಾರದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಅಮೆಜಾನ್ ಹೇಳಿದೆ. ಸಧ್ಯಕ್ಕೆ ದಿನಸಿ ವಸ್ತುಗಳನ್ನು ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದೆ.












Click it and Unblock the Notifications