ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಆಧಾರ್ ಕಾರ್ಡ್ ನೀಡಿದರೆ ಹೊಸ ಸಿಮ್

|
Google Oneindia Kannada News

ನವದೆಹಲಿ, ಜುಲೈ, 14: ಭದ್ರತೆ ದೃಷ್ಟಿಯಿಂದ ಹೊಸ ಮೊಬೈಲ್ ಸಂಪರ್ಕ ಪಡೆಯುವ ವ್ಯವಸ್ಥೆಯನ್ನು ದೂರಸಂಪರ್ಕ ಇಲಾಖೆ ಬಿಗಿಗೊಳಿಸಿದ್ದು ಗೊತ್ತೆ ಇದೆ. ಅದರಲ್ಲೂ ಬಿ ಎಸ್ ಎನ್ ಎಲ್ ಹೊಸ ಸಿಮ್ ಪಡೆದುಕೊಳ್ಳಬೇಕು ಎಂದರೆ ಸಾಹಸವನ್ನೇ ಮಾಡಬೇಕಾಗುತ್ತದೆ.

ಆದರೆ ಈ ಎಲ್ಲ ವಿಳಂಬಕ್ಕೆ ಇದೀಗ ಕೇಂದ್ರ ಸರ್ಕಾರವೇ ಅಂತ್ಯ ಹಾಡಲು ಮುಂದಾಗಿದೆ. ಇನ್ನು ಮುಂದೆ ಹೊಸ ಮೊಬೈಲ್‌ ಸಿಮ್‌ ಪಡೆಯಲು ಗ್ರಾಹಕರು ಆಧಾರ್‌ ಕಾರ್ಡ್‌ನ ಪ್ರತಿ ಡೌನ್ ಮೋಡ್ ಪ್ರತಿ ಅಥವಾ ಇ- ಆಧಾರ್ ಕಾರ್ಡ್ ನೀಡಿದರೂ ಸಾಕು.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

e-aadhaar-valid-document-for-new-mobile-connections

ಇ-ಆಧಾರ್ ಕಾರ್ಡ್ ನ್ನು ಗ್ರಾಹಕರ ಗುರುತು ಮತ್ತು ವಿಳಾಸದ ದಾಖಲೆಯಾಗಿ ತಡಗೆದುಕೊಳ್ಳಬಹುದು ಎಂದು ದೂರಸಂಪರ್ಕ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಗ್ರಾಹಕ ಸಲ್ಲಿಸಿದ ಇ-ಆಧಾರ್ ದಾಖಲೆಯಲ್ಲಿರುವ ಹೆಸರು, ವಿಳಾಸ, ಜನ್ಮದಿನ, ಲಿಂಗ, ಊರು ಸೇರಿದಂತೆ ಎಲ್ಲ ವಿವರಗಳು ಪ್ರಾಧಿಕಾರ ನೀಡಿರುವ ಆಧಾರ್ ಕಾರ್ಡ್ ನೊಂದಿಗೆ ಸರಿಯಾಗಿ ಹೊಂದಾಣಿಕೆಯಾಗಬೇಕು.[ಪಾಸ್‌ಪೋರ್ಟ್ ಪಡೆಯಲು 4 ದಾಖಲೆಗಳು ಸಾಕೇ ಸಾಕು]

ಹಾಗಾಗಿ ಇನ್ನು ಮುಂದೆ ಸಿಮ್ ಖರೀದಿ ಮಾಡಿದ ನಂತರ ಆಕ್ಟಿವೇಶನ್ ಗೆ ಪರದಾಡುವ ಸ್ಥಿತಿ ದೂರವಾಗುತ್ತದೆ. ನೀಡಿದ ಮತದಾರರ ಗುರುತಿನ ಚೀಟಿ ಝೆರಾಕ್ಸ್ ಸರಿ ಇಲ್ಲ, ಫೋಟೋ ಸರಿಯಾಗಿ ಬಂದಿಲ್ಲ ಅಥವಾ ಇನ್ನಿತರ ಕಾರಣ ನೀಡಿ ಗ್ರಾಹಕರು ಪರಿತಪಿಸುವಂತೆ ಇದ್ದ ಸ್ಥಿತಿ ದೂರವಾಗಲಿದೆ.

English summary
The e-Aadhaar letter or the downloaded version of the card from the UIDAI website, can now be used as a valid identity and address proof document for taking a new mobile connection. This has been clarified by the Department of Telecom which has also placed the onus of verifying the details mentioned in the e-Aadhaar letter - including name, address, date of birth, gender - from the UIDAI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X