ಗಣರಾಜ್ಯೋತ್ಸವದ ಲೈವ್ ಪ್ರಸಾರಕ್ಕೆ ಹೇಗಿದೆ ದೂರದರ್ಶನದ ಸಿದ್ಧತೆ?
ನವದೆಹಲಿ, ಜನವರಿ 25: ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದರ ನಡುವೆ ಈ ವರ್ಷ ಆಚರಿಸುತ್ತಿರುವ 72ನೇ ಗಣರಾಜ್ಯೋತ್ಸವವನ್ನು ಎಂದಿಗಿಂತ ವಿಭಿನ್ನ ಮತ್ತು ವಿಶೇಷವಾಗಿ ಪ್ರಸಾರ ಮಾಡುವುದಕ್ಕೆ ದೂರದರ್ಶನದ ಸಿದ್ಧತೆ ನಡೆಸಿದೆ.
ಗಣರಾಜ್ಯೋತ್ಸವದ ಮೆಗಾ ಪ್ರಸಾರದ ಜೊತೆ ಭಾರತೀಯ ವಾಯುಪಡೆಯ ಸಹಯೋಗದೊಂದಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. 75 ವರ್ಷಗಳ ಸ್ಮರಣಾರ್ಥವಾಗಿ 75 ವಿಮಾನಗಳು ವಿಶೇಷ ರಚನೆಯೊಂದಿಗೆ ಆಕಾಶದಲ್ಲಿ ಹಾರಾಟ ನಡೆಸಲಿವೆ.
ನವದೆಹಲಿಯಲ್ಲಿ ಈ ವರ್ಷ ಗಣರಾಜ್ಯೋತ್ಸವದ ಕವರೇಜ್‌ಗಾಗಿ ರಾಷ್ಟ್ರಪತಿ ಭವನದಿಂದ ರಾಜ್‌ಪಥ್ ಮೂಲಕ ಇಂಡಿಯಾ ಗೇಟ್‌ನಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದವರೆಗೆ ಸಂಪೂರ್ಣ ವಿಸ್ತಾರವಾಗಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು 59 ಕ್ಯಾಮೆರಾಗಳು ಮತ್ತು 160ಕ್ಕೂ ಹೆಚ್ಚು ಸಿಬ್ಬಂದಿಯು ಗಣರಾಜ್ಯೋತ್ಸವದ ಸಂಭ್ರಮವನ್ನು ಸೆರೆ ಹಿಡಿಯುವುದಕ್ಕೆ ನಿಯೋಜಿಸಲಾಗಿದೆ.

ಗಣರಾಜ್ಯೋತ್ಸವ ಸೆರೆ ಹಿಡಿಯಲು ಸಿದ್ಧತೆ:
ನವದೆಹಲಿಯಲ್ಲಿ ಗಣರಾಜ್ಯೋತ್ಸವದ ಪ್ರತಿಯೊಂದು ಪ್ರದರ್ಶನಗಳ ಜೊತೆಗೆ ಎಲ್ಲ ಘಟನೆಗಳನ್ನು 360 ಡಿಗ್ರಿ ವ್ಯಾಪ್ತಿಯಲ್ಲಿ(ನಾಲ್ಕೂ ದಿಕ್ಕುಗಳಿಂದ) ಸೆರೆ ಹಿಡಿಯುವುದಕ್ಕೆ 2021ರ ನವೆಂಬರ್ ತಿಂಗಳಿನಿಂದಲೇ ಸಿದ್ಧತೆ ಪ್ರಾರಂಭಿಸಲಾಗಿದೆ. ದೂರದರ್ಶನ ಅವರು ರಾಷ್ಟ್ರಪತಿ ಭವನದ ಗುಮ್ಮಟದಿಂದ ರಾಷ್ಟ್ರೀಯ ಕ್ರೀಡಾಂಗಣದ ಗುಮ್ಮಟದವರೆಗೆ ರಾಜಪಥದ ಉದ್ದಕ್ಕೂ 59 ಕ್ಯಾಮೆರಾಗಳನ್ನು ನಿಯೋಜಿಸಿದ್ದಾರೆ. ರಾಜಪಥದಲ್ಲಿ 33 ಕ್ಯಾಮೆರಾಗಳು, ನ್ಯಾಷನಲ್ ವಾರ್ ಮೆಮೋರಿಯಲ್, ಇಂಡಿಯಾ ಗೇಟ್, ನ್ಯಾಷನಲ್ ಸ್ಟೇಡಿಯಂನಲ್ಲಿ 16 ಕ್ಯಾಮೆರಾಗಳು ಮತ್ತು ರಾಷ್ಟ್ರಪತಿ ಭವನದಲ್ಲಿ 10 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಜಿಮ್ಮಿ ಜಿಬ್ಸ್ ಬಳಕೆ:
ಗಣರಾಜ್ಯೋತ್ಸವದ ಸಂಭ್ರಮವನ್ನು ಹಾಗೂ ಮೆರವಣಿಗೆಯ ಫ್ಲೈ-ಪಾಸ್ಟ್‌ನ ಪ್ರತಿ ನಿಮಿಷದ ಚಲನೆಯನ್ನು ಸೆರೆಹಿಡಿಯಲು DD 5 ಜಿಮ್ಮಿ ಜಿಬ್ಸ್, 100X ಮತ್ತು 86XTally ಲೆನ್ಸ್‌ಗಳ ಕಾಂಬಿನೇಷನ್, 15ಕ್ಕೂ ಹೆಚ್ಚು ವೈಡ್ ಆಂಗಲ್ ಲೆನ್ಸ್, ಅಬ್ಯಾಕಸ್ ಲೆನ್ಸ್, ಇತ್ಯಾದಿಗಳನ್ನು ಬಳಕೆ ಮಾಡಿಕೊಳ್ಳುತ್ತಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಇಂಡಿಯಾ ಗೇಟ್ ನಡುವೆ 120 ಅಡಿ ಎತ್ತರದ ಹೈಡ್ರಾಲಿಕ್ ಕ್ರೇನ್‌ನಲ್ಲಿ ಅಲಂಕೃತ ರಾಜಪಥದ ದೃಶ್ಯಗಳನ್ನು ತೆಗೆದುಕೊಳ್ಳಲು ಒಂದು ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರ ಜೊತೆಗೆ ವಿಶೇಷ ದೂರ ನಿಯಂತ್ರಿತ PTZ ಕ್ಯಾಮೆರಾಗಳನ್ನು ರಾಷ್ಟ್ರಪತಿ ಆವರಣದಲ್ಲಿ ಮತ್ತು ರಾಜಪಥದಲ್ಲಿ ಅಳವಡಿಸಲಾಗಿದೆ.
ಎಲ್ಲಾ ಪ್ರಮುಖ ತಾಣಗಳನ್ನು ಡಾರ್ಕ್ ಫೈಬರ್ ಆಪ್ಟಿಕಲ್ ಸಂಪರ್ಕ, ಉಪಗ್ರಹ ಸಂಪರ್ಕ ಮತ್ತು ಬ್ಯಾಕ್ ಪ್ಯಾಕ್ ಸಂಪರ್ಕದ ಮೂಲಕ ತಾಣಗಳನ್ನು ಪ್ರಭಾವಶಾಲಿಯಾಗಿ ಸೆರೆ ಹಿಡಿಯಲು ಯೋಜಿಸಲಾಗಿದೆ. ರಾಜಪಥದಲ್ಲಿ ಡಿಡಿ ತಾತ್ಕಾಲಿಕ ಉತ್ಪಾದನಾ ನಿಯಂತ್ರಣ ಕೊಠಡಿಯನ್ನು ನಿರ್ಮಿಸಿದೆ.
ಹೈ ಡೆಫಿನಿಷನ್ ದೃಶ್ಯಗಳನ್ನು ಅನಿಮೇಟೆಡ್ ಗ್ರಾಫಿಕ್ಸ್ ಮತ್ತು ಹೆಸರಾಂತ ವ್ಯಾಖ್ಯಾನಕಾರರ ಮೂಲಕ ಹೆಚ್ಚು ಆಕರ್ಷಕವಾಗಿ ಮಾಡಲಾಗುತ್ತದೆ. ಅವರು ಈವೆಂಟ್ ತೆರೆದುಕೊಳ್ಳುತ್ತಿದ್ದಂತೆ ಪ್ರತಿ ವಿವರವನ್ನು ವಿವರಿಸುತ್ತಾರೆ. ಡಿಡಿ ನ್ಯೂಸ್ ಕಾಮೆಂಟರಿಯನ್ನು ಸಹ ಸಂಕೇತ ಭಾಷೆಯ ಮೂಲಕ ಪ್ರಸಾರ ಮಾಡಲಾಗುತ್ತದೆ.
ದೂರದರ್ಶನದಲ್ಲಿ ಗಣರಾಜ್ಯೋತ್ಸವದ ಪ್ರಸಾರ:
ದೇಶದಾದ್ಯಂತ ದೂರದರ್ಶನದ ಎಲ್ಲಾ ಚಾನೆಲ್‌ಗಳಲ್ಲಿ ಜನವರಿ 26 ರಂದು ಬೆಳಗ್ಗೆ 9:15 ರಿಂದ ರಾಜ್‌ಪಥ್‌ನಲ್ಲಿನ ಕಾರ್ಯಕ್ರಮಗಳ ಅಂತ್ಯದವರೆಗೆ ಗಣರಾಜ್ಯೋತ್ಸವದ ನೇರ ಪ್ರಸಾರವನ್ನು ಮಾಡಲಾಗುತ್ತದೆ. ಲೈವ್ ಕವರೇಜ್ ಡಿಡಿ ನ್ಯಾಷನಲ್, ಡಿಡಿ ನ್ಯೂಸ್ ಯೂಟ್ಯೂಬ್ ಚಾನೆಲ್‌ಗಳು ಮತ್ತು ನ್ಯೂಸ್ಆನ್ ಏರ್ ಆಪ್ ಮತ್ತು ವೆಬ್‌ಸೈಟ್‌ನಲ್ಲಿಯೂ ಲಭ್ಯವಿರುತ್ತದೆ.












Click it and Unblock the Notifications