2020ರ ನವೆಂಬರ್ 8ರಂದು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆ ಪಾಂಡಿಚೆರಿಯಲ್ಲಿ ವಿಧುನ್ ಜನಿಸಿದ. ಈ ಪುಟಾಣಿ ಮಗು ಒಂದು ವಾರದವನಿದ್ದಾಗ ತೀವ್ರ ಯಾತನೆ ಅನುಭವಿಸತೊಡಗಿದ. ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಅವನನ್ನು ಉಳಿಸಿಕೊಳ್ಳಲು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದರು. ಇದು ಬಹು ದುಬಾರಿ ಶಸ್ತ್ರಚಿಕಿತ್ಸೆ. ಚಿಕಿತ್ಸೆಗಾಗಿ ಎಂಐಒಟಿ ಆಸ್ಪತ್ರೆಗೆ ದಾಖಲಿಸುವುದು ಸೂಕ್ತ ಎಂದು ಕುಟುಂಬದವರು ಸಂಬಂಧಿಕರು ಸಲಹೆ ನೀಡಿದರು.
ವಿಧುನ್ ತೂಕ ತೀರಾ ಕಡಿಮೆ ಇದೆ. ಆತನಲ್ಲಿ ಲಾರ್ಜ್ ಮಿಡ್ ಮಸ್ಕಲರ್ ವಿಎಸ್‌ಡಿ, ಮಹಾಪಧಮನಿಯ ಕೊನೆಯಲ್ಲಿನ ಸಂಕುಚಿತತೆ, ಮಾಡರೇಟ್ ಸೈಜ್ಡ್ ಆಸ್ಟಿಯಮ್ ಸೆಕಂಡಮ್ ಎಎಸ್‌ಡಿ ಮತ್ತು ತೀವ್ರ ಪಿಎಸ್‌ಎಚ್ ಸಮಸ್ಯೆಗಳು ಇರುವುದು ಪತ್ತೆಯಾಗಿವೆ.

ಮೂರು ಲಕ್ಷಕ್ಕೂ ಅಧಿಕ ಹಣ
ಇದನ್ನು ಸರಿಪಡಿಸಲು ಕೋಯಾರ್ಕ್ಟೇಷನ್ ದುರಸ್ತಿ ಮತ್ತು ವಿಎಸ್‌ಡಿ ಕ್ಲೋಸರ್ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದು ಅಗತ್ಯವಾಗಿದೆ ಎಂದು ಸಲಹೆ ನೀಡಲಾಗಿದೆ.
ಈ ಎಲ್ಲ ಪ್ರಕ್ರಿಯೆಗಳಿಗೆ ಶಸ್ತ್ರಚಿಕಿತ್ಸೆ ವೆಚ್ಚ, ಐಸಿಯು ಮತ್ತು ಆಸ್ಪತ್ರೆ ವಾಸ, ಶಸ್ತ್ರಚಿಕಿತ್ಸೆ ನಂತರದ ಪರಿಶೀಲನೆ ಹಾಗೂ ಔಷಧೋಪಚಾರಗಳಿಗೆ 3,10,000 (ಮೂರು ಲಕ್ಷದ ಹತ್ತು ಸಾವಿರ ರೂ) ರೂಪಾಯಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಜನವರಿ ಮೊದಲ ವಾರದೊಳಗೆ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ವೈದ್ಯರು ಸಲಹೆ ನೀಡಿದ್ದರು.

ಟೀ ವ್ಯಾಪಾರಿ ತಂದೆ
ಆತನ ತಂದೆ ವೆಂಕಟೇಶನ್ ತನ್ನ ಹಳ್ಳಿಯಲ್ಲಿ ಟೀ ವ್ಯಾಪಾರ ನಡೆಸುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಅವರ ವ್ಯಾಪಾರ ಸಂಪೂರ್ಣ ಸ್ಥಗಿತಗೊಳಿಸಬೇಕಾಗಿತ್ತು. ಇದರಿಂದ ಅವರು ಅತ್ಯಂತ ಕಷ್ಟಕರ ಜೀವನ ನಡೆಸಬೇಕಾಗಿತ್ತು. ಹೀಗಿರುವಾಗ ಇಂತಹ ಪರಿಸ್ಥಿತಿಯಲ್ಲಿ ತಮ್ಮ ಮಗನ ಶಸ್ತ್ರಚಿಕಿತ್ಸೆಗೆ ಬೇಕಾಗುವಷ್ಟು ಹಣ ಸಂಗ್ರಹಿಸುವುದು ಅವರಿಂದ ಸಾಧ್ಯವೇ ಇಲ್ಲ.

ಜೀವ ಉಳಿಸಲು ಹೋರಾಟ
ಪೋಷಕರಾದ ವೆಂಕಟೇಶನ್ ಮತ್ತು ಅಭಿರಾಮಿ ಇಬ್ಬರೂ ತಮ್ಮ ಪುಟಾಣಿ ಮಗುವಿನ ಜೀವ ಉಳಿಸಲು ಹೋರಾಡುತ್ತಿದ್ದಾರೆ. ಅವರಿಗೆ ಯಾವ ಆಸ್ತಿಪಾಸ್ತಿಯೂ ಇಲ್ಲ. ಅವರಿಗೆ ಸಹಾಯ ಮಾಡಲು ಕೂಡ ಯಾರೂ ಮುಂದೆ ಬರುತ್ತಿಲ್ಲ. ತಮ್ಮ ಈ ಸಂಕಷ್ಟದ ಸಮಯದಲ್ಲಿ ನೆರವು ನೀಡುವಂತೆ ಅವರು ಪರೋಪಕಾರಿಗಳು, ಉದಾತ್ತ ಮನೋಭಾವದವರು ಮತ್ತು ಕರುಣಾಳುಗಳಿಗೆ ಮನವಿ ಮಾಡಿದ್ದಾರೆ.

ಇಲ್ಲಿಗೆ ಹಣ ಕಳುಹಿಸಿ
ಸಹಾಯ ಮಾಡಲು ಇಚ್ಛಿಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು.
Bank Name: RBL Bank
Account number: 2223330032588731
Account name: CHIME - MIOT HOSPITAL
IFSC code: RATN0VAAPIS
UPI : rpy.edudharma00000005343@icici
RECOMMENDED STORIES