ಪುತ್ರನ ತಿಥಿಯಂದು ರಕ್ತಪಾತ ಬೇಡ: ಬುರ್ಹನ್ ವಾನಿ ತಂದೆ ಮನವಿ
ಶ್ರೀನಗರ(ಭಾರತ), ಜುಲೈ 8: ನನ್ನ ಪುತ್ರ ಬುರ್ಹನ್ ವಾನಿ ತಿಥಿಯಂದು ರಕ್ತಪಾತವಾಗುವುದನ್ನು ನಾನು ಇಷ್ಟಪಡುವುದಿಲ್ಲ. ನಮಗೆ ಹಿಂಸೆ ಬೇಕಿಲ್ಲ. ದಯವಿಟ್ಟು ಎಲ್ಲರೂ ಶಾಂತವಾಗಿರಿ ಎಂದು ಹಿಜ್ಬುಲ್ ಮುಜಾಹಿದ್ದಿನ್ ಕಮಾಂಡರ್ ಬುರ್ಹನ್ ವಾನಿಯ ತಂದೆ ಮುಜಾಫರ್ ಅಹಮ್ಮದ್ ವಾನಿ ಮನವಿಮಾಡಿದ್ದಾರೆ.
ಕಳೆದ ವರ್ಷ (2016)ದ ಜುಲೈ 8 ರಂದು ಕಾಶ್ಮೀತರ ಕಣಿವೆಯ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಭದ್ರತಾ ಪಡೆಯಿಂದ ಹತ್ಯೆಗೀಡಾದ ಭಯೋತ್ಪಾದಕ ಬುರ್ಹನ್ ವಾನಿ ಸತ್ತು ಇಂದಿಗೆ (ಜುಲೈ 8) ಸರಿಯಾಗಿ ಒಂದು ವರ್ಷ ತುಂಬಿದ್ದು, ಈ ಹಿನ್ನೆಲೆಯಲ್ಲಿ ಕಣಿವೆಯಲ್ಲಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.

ಕಳೆದ ವರ್ಷ ಈ ದಿನದಂದು ಎನ್ ಕೌಂಟರ್ ನಲ್ಲಿ ವಾನಿ ಹತ್ಯೆಯಾಗುತ್ತಿದ್ದಂತೆಯೇ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಬುಗಿಲೆದ್ದಿತ್ತು. ವಾನಿ ಬೆಂಬಲಿಗರ ಉಪಟಳ ನಿಯಂತ್ರಿಸಲು ಬರೋಬ್ಬರಿ 53 ದಿನ ಇಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಆದರೂ ಐದು ತಿಂಗಳ ಕಾಲ ಮುಂದುವರಿದಿದ್ದ ಹಿಂಸಾಚಾರದಲ್ಲಿ ಬರೋಬ್ಬರಿ 78 ಜನರು ಮತ್ತು ಇಬ್ಬರು ಸೈನಿಕರು ಹತರಾಗಿದ್ದರು.












Click it and Unblock the Notifications