Air Pollution: ಸದ್ದೇ ಇಲ್ಲದೆ ಜೀವ ತೆಗೆಯುತ್ತಿದೆ ಗಾಳಿ, ತಜ್ಞರ ಎಚ್ಚರಿಕೆ ಸಂದೇಶ!
ಭಾರತದಲ್ಲಿ ವಾಯು ಮಾಲಿನ್ಯ ಎಂಬುದು ದೊಡ್ಡ ಪಿಡುಗಾಗಿ ಪರಿಣಮಿಸಿದೆ, ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ವಾಯು ಮಾಲಿನ್ಯ ಪರಿಣಾಮ ಈಗ ದೆಹಲಿ ಜನ ಊರು ಬಿಡುವಂತೆ ಆಗಿದ್ದು, ಸಾವಿರಾರು ಜನ ಉಸಿರಾಡಲು ಪರದಾಡುತ್ತಾ ಆಸ್ಪತ್ರೆ ಸೇರಿದ್ದಾರೆ. ಇಂತಹ ಹೊತ್ತಲ್ಲೇ ದೂರದ ಲಂಡನ್ನಿಂದ ಭವಿಷ್ಯದ ಬಗ್ಗೆ ಭಯಾನಕ ಸುದ್ದಿಯು ಹೊರಬಿದ್ದಿದ್ದು, ಭಾರತೀಯರಿಗೆ ತಜ್ಞರು ನೀಡಿದ ಸಂದೇಶ ಏನು ಗೊತ್ತೆ?
ರಾಜಧಾನಿ ದೆಹಲಿಯ ಗಾಳಿ ಗುಣಮಟ್ಟ ಮನುಷ್ಯರು ಉಸಿರಾಡಲು ಆಗದ ಸ್ಥಿತಿ ತಲುಪಿದೆ. ಈಗ ಅಲ್ಲಿ 300ರ ಆಸುಪಾಸಿಗೆ ಗಾಳಿಯ ಗುಣಮಟ್ಟ ಕುಸಿತ ಕಂಡಿದ್ದು, ಹಲವು ಪ್ರದೇಶಗಳಲ್ಲಿ ನೇರ ಹೊರಗೆ ಹೋಗಲು ಆಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲಿ ಭಾರತವು ಕೋವಿಡ್ ಸಾಂಕ್ರಾಮಿಕದ ನಂತರ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ವಾಯುಮಾಲಿನ್ಯ ಆಗಿದೆ ಎಂದು ಬ್ರಿಟನ್ ಶ್ವಾಸಕೋಶ ಶಾಸ್ತ್ರಜ್ಞರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಭಾರತ ಸರ್ಕಾರ ಕೂಡ ಈ ಬಗ್ಗೆ ಕ್ರಮ ಕೈಗೊಂಡು ಮಾಲಿನ್ಯ ನಿಯಂತ್ರಣಕ್ಕೆ ಪ್ರಯತ್ನಿಸುತ್ತಿದೆ. ಆದರೆ ಈಗಾಗಲೇ ಪರಿಸ್ಥಿತಿ ಕೈಮೀರಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಸವಾಲಾಗಿ ಪರಿಣಮಿಸಲಿದೆ ಎಂದಿದ್ದಾರೆ ತಜ್ಞರು.

ಉತ್ತರ ಭಾರತದಲ್ಲಿ ಭೀಕರ ಪರಿಸ್ಥಿತಿ
ಲಿವರ್ಪೂಲ್ ಶ್ವಾಸಕೋಶ ಸಲಹೆಗಾರ ಮತ್ತು ಭಾರತದ ಆರೋಗ್ಯ ಇಲಾಖೆ ಕೋವಿಡ್-19 ಸಲಹಾ ಸಮಿತಿ ಮಾಜಿ ಸದಸ್ಯರೂ ಆಗಿದ್ದ ಮನೀಶ್ ಗೌತಮ್ ಈ ಬಗ್ಗೆ ಮಾತನಾಡಿದ್ದು, ಭಾರತ ಸರ್ಕಾರ ವಾಯುಮಾಲಿನ್ಯ ನಿಯಂತ್ರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತಾ ಇದ್ದರೂ ಅದು ತಡವಾಗಿದೆ. ಪ್ರಮುಖವಾಗಿ ಉತ್ತರ ಭಾರತದಲ್ಲಿ ವಾಸಿಸುತ್ತಿರುವ ಲಕ್ಷ ಲಕ್ಷ ಜನಕ್ಕೆ ಈಗಾಗಲೇ ಹಾನಿಯಾಗಿದೆ. ಕಳಪೆ ಗುಣಮಟ್ಟದ ಗಾಳಿ ಪರಿಣಾಮ ಅನಾರೋಗ್ಯ ಹೆಚ್ಚುತ್ತಾ ಇದ್ದು, ಭವಿಷ್ಯದಲ್ಲಿ ಇದು ದೊಡ್ಡ ಹೊರೆಯಾಗಿ ಪರಿಣಮಿಸಲಿದೆ ಎಂದಿದ್ದಾರೆ ಮನೀಶ್ ಗೌತಮ್.
ಬೊಜ್ಜು & ಹೃದಯ ಸಂಬಂಧಿ ಸಮಸ್ಯೆ
ಪಿಟಿಐ ಜೊತೆ ಈ ಬಗ್ಗೆ ಮಾತನಾಡಿರುವ ಶ್ವಾಸಕೋಶ ಶಾಸ್ತ್ರಜ್ಞರು ನಗರ ಪ್ರದೇಶಗಳಲ್ಲಿ ವಿಮಾನ, ವಾಹನಗಳು ಹೊರಸೂಸುವ ವಿಷಯುಕ್ತ ಗಾಳಿ ಪರಿಣಾಮ ಹಲವು ಸಮಸ್ಯೆ ಎದುರಾಗುತ್ತಿವೆ. ಈ ಪೈಕಿ ಭಾರತ ಹಾಗೂ ಬ್ರಿಟನ್ ಸೇರಿ ಹಲವು ದೇಶಗಳಲ್ಲಿ ಬೊಜ್ಜಿನ ಸಮಸ್ಯೆ ಮಾತ್ರವಲ್ಲ ಹೃದಯ ಸಂಬಂಧಿ ಕಾಯಿಲೆಗಳೂ ಕಳೆದ ಒಂದು ದಶಕದಲ್ಲಿ ಹೆಚ್ಚಾಗಿದೆ ಎಂದಿದ್ದಾರೆ. ಹೀಗಾಗಿ ತುಂಬಾ ಮುತುವರ್ಜಿ ವಹಿಸಿ ಪರಿಸ್ಥಿತಿ ನಿಭಾಯಿಸಲು ಸಲಹೆ ನೀಡಿದ್ದಾರೆ ತಜ್ಞರು.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ












Click it and Unblock the Notifications