• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ ಖಾತೆದಾರರು, ಡಿಎಲ್ ಹೊಂದಿರುವವರಿಗೆ ಹೊಸ ನಿಯಮ ಜಾರಿ

|
Google Oneindia Kannada News

ನವದೆಹಲಿ, ಸಪ್ಟೆಂಬರ್.27: ಕೇಂದ್ರ ಸರ್ಕಾರ ಜಾರಿಗೊಳಿಸುವ ಹೊಸ ನಿಯಮಗಳ ಪಾಲನೆ ಅತ್ಯಗತ್ಯವಾಗಿದೆ. ವಾಹನ ಚಾಲನೆ ಮತ್ತು ವಾಹನ ನೋಂದಣಿ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದ್ದು, ಅಕ್ಟೋಬರ್.01ರಿಂದ ಹೊಸ ನಿಯಮ ಜಾರಿಗೆ ಬರಲಿದೆ.
ಭಾರತೀಯರು ಹಳೆದ ವಾಹನ ನೋಂದಣಿ ಪದ್ಧತಿ ಮತ್ತು ಚಾಲನೆ ಪರವಾನಗಿ ಪ್ರಕ್ರಿಯೆ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲವು ಅಂಶಗಳಿವೆ. ಅಕ್ಟೋಬರ್.01ರಿಂದ ದೇಶಾದ್ಯಂತ ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಗಳ ಮೂಲಕ ಹಣ ಪಾವತಿಸಿದರೂ ಯಾವುದೇ ರೀತಿಯ ವಿನಾಯಿತಿ ಇರುವುದಿಲ್ಲ. ಇಂಥದ್ದೇ ಹಲವು ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಹೆಲ್ಮೆಟ್ ಧರಿಸದ ಬೈಕ್ ಸವಾರನಿಗೆ 42,500 ರೂಪಾಯಿ ದಂಡ
ಭಾರತದಾದ್ಯಂತ ಅಕ್ಟೋಬರ್.01 ರಿಂದ ಏಕರೂಪದ ವಾಹನ ನೋಂದಣಿ ಕಾರ್ಡ್‌ಗಳು (ಆರ್‌ಸಿಗಳು) ಮತ್ತು ಚಾಲನಾ ಪರವಾನಗಿಗಳನ್ನು (ಡಿಎಲ್ ‌ಗಳು) ನೀಡಲಾಗುತ್ತದೆ. ಹೊಸ ಚಾಲನಾ ಪರವಾನಗಿಯು ಕ್ವಿಕ್ ರೆಸ್ಪಾನ್ಸ್ (ಕ್ಯೂಆರ್) ಕೋಡ್ ಮತ್ತು ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್‌ಸಿ) ನಂತಹ ವೈಶಿಷ್ಟ್ಯಗಳೊಂದಿಗೆ ಸುಧಾರಿತ ಮೈಕ್ರೋಚಿಪ್ ಅನ್ನು ಹೊಂದಿರುತ್ತದೆ.

ಡಿಎಲ್ ಮತ್ತು ಆರ್ ಸಿ ನಿಯಮಗಳಲ್ಲಿ ಬದಲಾವಣೆ

ಡಿಎಲ್ ಮತ್ತು ಆರ್ ಸಿ ನಿಯಮಗಳಲ್ಲಿ ಬದಲಾವಣೆ

ಈ ಬದಲಾವಣೆ ಕೇಂದ್ರೀಕೃತ ಆನ್‌ಲೈನ್ ಡೇಟಾಬೇಸ್ ‌ನಲ್ಲಿ ಡಿಎಲ್ ಹೊಂದಿರುವವರ ದಾಖಲೆಗಳು ಮತ್ತು ದಂಡವನ್ನು 10 ವರ್ಷಗಳವರೆಗೆ ಉಳಿಸಿಕೊಳ್ಳಲು ಸಹಾಯವಾಗುತ್ತದೆ. ಹೊಸ ಡಿಎಲ್ ವಿಭಿನ್ನ ಸಾಮರ್ಥ್ಯದ ಚಾಲಕರ ದಾಖಲೆಗಳು, ವಾಹನಗಳಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲು ಸರ್ಕಾರಕ್ಕೆ ಸಹಕಾರಿಯಾಗಲಿದೆ. ಆರ್‌ಸಿಗಳಂತೆ, ಅಕ್ಟೋಬರ್ 1 ರಿಂದ ಈ ಪ್ರಕ್ರಿಯೆ ಕಾಗದರಹಿತಗೊಳಿಸಲು ಸರ್ಕಾರ ಸಿದ್ಧವಾಗಿದೆ. ಹೊಸ ಆರ್‌ಸಿ ಮಾಲೀಕರ ಹೆಸರನ್ನು ಮುಂಭಾಗದಲ್ಲಿ ಮುದ್ರಿಸಿದರೆ ಮೈಕ್ರೊಚಿಪ್ ಮತ್ತು ಕ್ಯೂಆರ್ ಕೋಡ್ ಅನ್ನು ಕಾರ್ಡ್‌ನ ಹಿಂಭಾಗದಲ್ಲಿ ಹುದುಗಿಸಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಗಳಿಗೆ ವಿನಾಯಿತಿ ಇರುವುದಿಲ್ಲ

ಕ್ರೆಡಿಟ್ ಕಾರ್ಡ್ ಗಳಿಗೆ ವಿನಾಯಿತಿ ಇರುವುದಿಲ್ಲ

ದೇಶಾದ್ಯಂತ ಪೆಟ್ರೋಲ್ ಬಂಕ್ ಗಳಲ್ಲಿ ವಾಹನಗಳಿಗೆ ಇಂಧನ ಹಾಕಿಸಿಕೊಂಡ ಬಳಿಕ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಿದರೂ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ. ಡಿಜಿಟಲ್ ಪಾವತಿ ಉತ್ತೇಜಿಸಲು ತೈಲ ಕಂಪನಿಗಳು ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳು ಮತ್ತು ಇ-ವ್ಯಾಲೆಟ್ ‌ಗಳನ್ನು ಬಳಸಿಕೊಂಡು ಈ ರಿಯಾಯಿತಿ ಪರಿಚಯಿಸಿದ್ದವು. ಸಿಹಿ ಸುದ್ದಿ ಎಂದರೆ ಡೆಬಿಟ್ ಕಾರ್ಡ್‌ಗಳ ಮೇಲಿನ ರಿಯಾಯಿತಿ ಮತ್ತು ಡಿಜಿಟಲ್ ಪಾವತಿಗಳ ಇತರ ವಿಧಾನಗಳು ಸದ್ಯಕ್ಕೆ ಮುಂದುವರಿಯುತ್ತದೆ.

ಕಾರುಸಾಲು, ಗೃಹಸಾಲ, ವೈಯಕ್ತಿಕ ಸಾಲದರ ಕಡಿಮೆ

ಕಾರುಸಾಲು, ಗೃಹಸಾಲ, ವೈಯಕ್ತಿಕ ಸಾಲದರ ಕಡಿಮೆ

ಭಾರತೀಯ ರಿಸರ್ವ್ ಬ್ಯಾಂಕ್ ಚಿಲ್ಲರೆ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡುವ ಸಾಲಗಳಿಗೆ ನೀಡುವ ಬಾಹ್ಯ ಬಡ್ಡಿದರದ ನಿಗದಿಗೊಳಿಸುವ ಮಾನದಂಡವನ್ನು ಕಡ್ಡಾಯಗೊಳಿಸಲಾಗಿದೆ. ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲಗಳ ಮೇಲಿನ ದರವನ್ನು ಕಡಿಮೆಗೊಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದಂತೆ ಕಾರ್ಪೊರೇಟ್ ತೆರಿಗೆಯನ್ನು ಅಕ್ಟೋಬರ್. 01 ರಿಂದ ಜಾರಿಗೆ ಬರುವಂತೆ ಕಡಿತಗೊಳಿಸಲಾಗುತ್ತದೆ.

ಕನಿಷ್ಠ ಬಾಕಿ ಮೊತ್ತದ ಪ್ರಮಾಣ ಇಳಿಸಿದ ಎಸ್ ಬಿಐ

ಕನಿಷ್ಠ ಬಾಕಿ ಮೊತ್ತದ ಪ್ರಮಾಣ ಇಳಿಸಿದ ಎಸ್ ಬಿಐ

ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಖಾತೆದಾರರು ಮಾಸಿಕ ಹೊಂದಿರಬೇಕಾದ ಕನಿಷ್ಠ ಬಾಕಿ ಮೊತ್ತದ ಪ್ರಮಾಣವನ್ನು ಮೊದಲಿಗಿಂತಲೂ ಇಳಿಕೆ ಮಾಡಿದೆ. ಮೆಟ್ರೋ ಮತ್ತು ನಗರ ಕೇಂದ್ರದಲ್ಲಿ ಖಾತೆ ಹೊಂದಿರುವವರು ಕನಿಷ್ಠ ಮಾಸಿಕ 3,000 ಮತ್ತು ಗ್ರಾಮೀಣ ಶಾಖೆಗಳಲ್ಲಿ ಖಾತೆ ಹೊಂದಿರುವವರು 1,000 ಬಾಕಿ ಹೊಂದಿರಬೇಕು. ಖಾತೆದಾರರು ಈ ಮೊತ್ತ ನಿರ್ವಹಿಸಲು ವಿಫಲವಾದಲ್ಲಿ ಶುಲ್ಕವನ್ನು ಸಹ ಕಡಿಮೆಗೊಳಿಸಲಾಗುತ್ತದೆ. ಅಲ್ಲದೇ ಶೇಕಡಾ 50 ರಷ್ಟು ಕಡಿಮೆಯಾದರೆ, ವ್ಯಕ್ತಿಗೆ 10 ರೂ ಮತ್ತು ಜಿಎಸ್‌ಟಿ ವಿಧಿಸಲಾಗುತ್ತದೆ. ಖಾತೆದಾರನು ಶೇಕಡಾ 50-75 ಕ್ಕಿಂತ ಕಡಿಮೆಯಾದರೆ, ಅಂಥವರು 12 ರೂ.ಗಳ ದಂಡ ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಖಾತೆದಾರನು ಶೇಕಡಾ 75 ಕ್ಕಿಂತ ಹೆಚ್ಚು ಕಡಿಮೆಯಾದರೆ, ಅದು 15 ರೂ.ಗಳ ದಂಡ ಮತ್ತು ಜಿಎಸ್ ‌ಟಿ ವಿಧಿಸಲಾಗುತ್ತದೆ.

English summary
DL, RC Card And SBI Account Holders Should Be Aware Of These New Rules From October 01.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X