Divya Mittal: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್, ಯುಪಿ - ರಾಜಕೀಯ

ಬಿಜೆಪಿ ಪಕ್ಷಕ್ಕೆ ಸೆಡ್ಡು ಹೊಡೆದಿರುವ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು ತಮ್ಮದೇ ಪಕ್ಷವನ್ನು ಪ್ರಾರಂಭಿಸಿದ್ದಾರೆ. ಹೌದು ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು ಅಕ್ಟೋಬರ್ 15ರ ಗುರುವಾರ ಜನ್ ನೀತಿ ಭಾರತ್ ಎನ್ನುವ ಹೊಸ ಪಕ್ಷವನ್ನು ಘೋಷಿಸಿದ್ದಾರೆ. ಸೇವೆಯಿಂದ ಸ್ವಯಂಪ್ರೇರಿತ ನಿವೃತ್ತಿಯನ್ನು ಆಯ್ಕೆ ಮಾಡಿಕೊಂಡ ಒಂದು ತಿಂಗಳ ನಂತರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದರು. ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ದಿವ್ಯಾ ಮಿತ್ತಲ್ ಅವರು ಸೇವೆ ಸಲ್ಲಿಸುತ್ತಿದ್ದರು. ಆದರೆ, ಅನಿರೀಕ್ಷೆ ಬೆಳವಣಿಗೆಯಲ್ಲಿ ಅವರು ಐಎಎಸ್‌ನಿಂದ ನಿವೃತ್ತರಾಗಬೇಕಾದ ಸಂದರ್ಭ ಎದುರಾಯಿತು. ಜನರಿಗೆ ಒಳ್ಳೆಯದ್ದು ಮಾಡಿದ್ದರಿಂದ ಅವರು ರಾಜಕೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

Divya Mittal Former IAS Officer Launches Jan Neeti Bharat Sets Up New Political Challenge for BJP in Uttar Pradesh

ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರು ಜನ್ ನೀತಿ ಭಾರತ್ ಎನ್ನುವ ಪಕ್ಷದ ಬಗ್ಗೆ ಮಾತನಾಡಿದ್ದಾರೆ. ಈ ಪಕ್ಷವು ಜನರನ್ನು ನೀತಿ ನಿರೂಪಣೆಯಲ್ಲಿ ಕೇಂದ್ರಬಿಂದುವನ್ನಾಗಿ ಮಾಡುವತ್ತ ಮತ್ತು ಸರ್ಕಾರವು ತನ್ನ ಐದು ವರ್ಷಗಳ ಅವಧಿಯಲ್ಲಿ ಅವರಿಗೆ ಜವಾಬ್ದಾರಿಯಿಂದ ಇರುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನಹರಿಸುತ್ತದೆ ಮತ್ತು ಚುನಾವಣಾ ದಿನದಂದು ಮಾತ್ರವಲ್ಲ, ಅಧಿಕಾರದಲ್ಲಿ ಇರುವ ವರೆಗೂ ಜನರಿಗಾಗಿ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.

ರಾಜಕೀಯವು ಜನರನ್ನು ಆಳುತ್ತದೆ. ಆದರೆ ಜನ ನೀತಿ ಪಕ್ಷದಲ್ಲಿ ಜನರೇ ಆಡಳಿತ ನಡೆಸುತ್ತಾರೆ ಎಂದಿರುವ ಅವರು, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಹೆಸರು ಮತ್ತು ಅವರ ನಿರ್ಧಾರವನ್ನೂ ಘೋಷಿಸಿದ್ದಾರೆ.

ಐಐಟಿ ದೆಹಲಿ, ಐಐಎಂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿರುವ ಹಾಗೂ ಮಾಜಿ ವಾಲ್ ಸ್ಟ್ರೀಟ್ ವ್ಯಾಪಾರಿ ದಿವ್ಯಾ ಮಿತ್ತಲ್ ಅವರು ಕಳೆದ 13 ವರ್ಷಗಳ ನಂತರ ಸರ್ಕಾರಿ ವೃತ್ತಿಜೀವನದ ನಂತರ ಆಗಸ್ಟ್‌ 30 ರಂದು ಭಾರತೀಯ ಆಡಳಿತ ಸೇವೆ (ಐಎಎಸ್) ಗೆ ರಾಜೀನಾಮೆ ನೀಡಿದ್ದರು. ಸೆಪ್ಟೆಂಬರ್ 29 ರಂದು ಅವರು ರಾಜಕೀಯಕ್ಕೆ ಪ್ರವೇಶಿಸುವುದಾಗಿ ಘೋಷಿಸಿದ್ದರು.

ಜನರಿಗೆ ರಾಜಕೀಯ ಪ್ರವೇಶಿಸುತ್ತಿರುವುದಾಗಿ ಹೇಳಿದ್ದಾರೆ. ತಮ್ಮ ಮನವಿಗೆ ಜನರಿಂದ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ತಾವು ಹಂಚಿಕೊಂಡ ಫೋನ್ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದಿದ್ದಾರೆ. ಹೊಸ ಪಕ್ಷವನ್ನು ಘೋಷಿಸುವುದಕ್ಕೆ ಕಾರಣವೇನು ಎಂದೂ ಅವರು ವಿವರಿಸಿದ್ದಾರೆ. ಶಾಸಕರು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುವ ಅಸ್ತಿತ್ವದಲ್ಲಿರುವ ವ್ಯವಸ್ಥೆಗಿಂತ ಭಿನ್ನವಾಗಿ, ಜನ ನೀತಿ ಭಾರತ ಪ್ರತಿನಿಧಿಗಳು ನಾಗರಿಕರಿಗೆ ಉತ್ತರದಾಯಿಗಳಾಗಿ ಉಳಿಯಬೇಕಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ದಿವ್ಯಾ ಮಿತ್ತಲ್ ಅವರು, ಸಮಸ್ಯೆ ಪಕ್ಷಗಳಲ್ಲಿಲ್ಲ; ಜನರ ಮಾತಿಗೆ ಬೆಲೆ ಸಿಗದಿರುವುದೇ ಸಮಸ್ಯೆ. ಕೆಲವರ ಮಾತನ್ನು ಮಾತ್ರ ಕೇಳಲಾಗುತ್ತದೆ, ಎಲ್ಲರ ಮಾತನ್ನೂ ಕೇಳುವುದಿಲ್ಲ ಎಂದಿದ್ದಾರೆ.

ಯಾರು ಈ ದಿವ್ಯಾ ಮಿತ್ತಲ್

ಮಾಜಿ ಐಎಎಸ್ ಅಧಿಕಾರಿ ದಿವ್ಯಾ ಮಿತ್ತಲ್ ಅವರ "ಜಲ ಪೂಜನ್' ಆಮಂತ್ರಣ ವಿವಾದ (ಮಿರ್ಜಾಪುರ) ವಿಷಯದಿಂದ ಚರ್ಚೆಯ ಮುನ್ನೆಲೆಗೆ ಬಂದರು. ಇವರು ಮಾಡಿದ ಒಂದು ಒಳ್ಳೆಯ ಕೆಲಸದಿಂದ ಇವರಿಗೆ ಸಮಸ್ಯೆ ಎದುರಾಗಿತ್ತು. ಉತ್ತರ ಪ್ರದೇಶದ ಮಿರ್ಜಾಪುರದ ಲಹುರಿಯಾ ದಹಾ ಗ್ರಾಮಕ್ಕೆ ದಶಕಗಳ ಬಳಿಕ ಕುಡಿಯುವ ನೀರಿನ ಪೈಪ್‌ಲೈನ್ ಸಂಪರ್ಕವನ್ನು ದಿವ್ಯಾ ಅವರು ಕಲ್ಪಿಸಿದ್ದರು. ಜಲ ಪೂಜನ್ ಕಾರ್ಯಕ್ರಮದ ಆಮಂತ್ರಣ ಪತ್ರದಲ್ಲಿ ಶಾಸಕರು ಹಾಗೂ ಸಂಸದರ ಹೆಸರು ಹಾಕಿಲ್ಲ ಎನ್ನುವುದು ವಿವಾದಕ್ಕೆ ಕಾರಣವಾಗಿತ್ತು.

ಮಿರ್ಜಾಪುರ ಕ್ಷೇತ್ರದ ಸಂಸದೆ, ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಮತ್ತು ಸ್ಥಳೀಯ ಬಿಜೆಪಿ ನಾಯಕರನ್ನು ಆಹ್ವಾನಿಸಲ್ಲ ಎಂದು ಈ ಅಧಿಕಾರಿಗೆ ಸಮಸ್ಯೆ ನೀಡಲಾಗಿತ್ತು. ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ದಿವ್ಯಾ ಮಿತ್ತಲ್ ಅವರನ್ನು ಮಿರ್ಜಾಪುರ ಜಿಲ್ಲಾಧಿಕಾರಿ ಹುದ್ದೆಯಿಂದ ದಿಢೀರನೆ ವರ್ಗಾವಣೆ ಮಾಡಲಾಗಿತ್ತು. ಅಲ್ಲದೆ ಪರ್ಯಾಯ ಹುದ್ದೆ ಅಥವಾ ಜವಾಬ್ದಾರಿಯನ್ನು ಸಹ ಕೊಟ್ಟಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ದಿವ್ಯಾ ಅವರು ತಮ್ಮ ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+