ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಬಳಸಿ ಎಸೆಯಬಲ್ಲ ಹಾಸಿಗೆ?

ಬೆಂಗಳೂರು, ಜು.3: ಬೆಂಗಳೂರು ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರಿಗೆ ಬಳಸಿ ಎಸೆಯಬಲ್ಲ ಹಾಸಿಗೆಗಳು ಸದ್ಯದಲ್ಲೇ ದೊರೆಯುವ ಸಾಧ್ಯತೆಯಿದೆ.

ಈಗ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ನೀಡುತ್ತಿರುವ ಹಾಸಿಗೆಗಳ ಬಗ್ಗೆ ಅಪಸ್ವರ ಬಂದಿರುವ ಹಿನ್ನೆಲೆಯಲ್ಲಿ ಪಾಲಿಸ್ಟರ್‌ ಫ್ಯಾಬ್ರಿಕ್‌ ನಿರ್ಮಿತ ಬಳಸಿ ಎಸೆಯಬಲ್ಲ ಹಾಸಿಗೆ ನೀಡಲು ರೈಲ್ವೆ ಇಲಾಖೆ ಚಿಂತನೆ ನಡೆಸಿದ್ದು ಜು.8ರಂದು ಮಂಡನೆಯಾಗಲಿರುವ 2014-15ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಈ ಅಂಶ ಘೋಷಣೆಯಾಗುವ ಸಾಧ್ಯತೆಯಿದೆ.

ಡಿನ್ಪೋಸೆಬಲ್‌ ಹಾಸಿಗೆಗಳನ್ನು ಮೊತ್ತಮೊದಲ ಬಾರಿಗೆ ಬೆಂಗಳೂರು-ದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿದ್ದು, ಬಜೆಟ್‌ನಲ್ಲಿ ಇದು ಪ್ರಸ್ತಾಪವಾಗಲಿದೆ ಎಂದು ಹೇಳಲಾಗುತ್ತಿದೆ.

Rail Budget
ಶತಾಬ್ದಿ ರೈಲಿನಲ್ಲಿ ಸ್ವಯಂಚಾಲಿತ ಬಾಗಿಲುಗಳು, ಮತ್ತು ಪ್ಯಾಸೆಂಜರ್‌ ಕೋಚ್‌ಗಳಲ್ಲಿ ಅಗ್ನಿಶಾಮಕ ವ್ಯವಸ್ಥೆ, ಹಾಲು ಸಾಗಿಸಲು ಹೆಚ್ಚಿನ ಸಾಮರ್ಥ್ಯದ ಹಾಲಿನ ವ್ಯಾನ್‌ ಮತ್ತು ಉಪ್ಪು ಸಾಗಿಸಲು ಹಗುರವಾದ ವ್ಯಾಗನ್‌ ನಿರ್ಮಾಣ ಪ್ರಸ್ತಾವ ಬಜೆಟ್‌ನಲ್ಲಿ ಘೋಷಣೆಯಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಾಲಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಹಾಲಿನ ವ್ಯಾಗನ್‌ ನಿರ್ಮಿಸುವ ಬಗ್ಗೆ ರೈಲ್ವೆ ಇಲಾಖೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗ ಇರುವ ವ್ಯಾನ್‌ ಭಾರವನ್ನು 37 ಟನ್‌ನಿಂದ 29 ಟನ್‌ಗೆ ಇಳಿಸಿ, ಪ್ರಸ್ತುತ ಇರುವ 40 ಸಾವಿರ ಲೀಟರ್‌ನಿಂದ 44,600 ಲೀಟರ್‌ ಸಾಮರ್ಥ್ಯದ ಹಾಲಿನ ಹೊಸ ವಿನ್ಯಾಸದ ವ್ಯಾನ್‌ ನಿರ್ಮಿಸಲು ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿದೆ.

ರೈಲು ದರ ಏರಿಕೆಯ ಸಂದರ್ಭದಲ್ಲಿ ವಿರೋಧ ವ್ಯಕ್ತವಾದಾಗ ವಿಶ್ವ ದರ್ಜೆಯ ಸೇವೆ ನೀಡುವ ರೈಲುಗಳು ಬೇಕೋ ಕಡಿಮೆ ದರದ ಕನಿಷ್ಠ ಗುಣಮಟ್ಟದ ರೈಲು ಸೇವೆ ಬೇಕೋ ಎಂದು ಪ್ರಶ್ನಿಸಿ ದರ ಏರಿಕೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡುವ ಅಂಶಗಳನ್ನು ಬಜೆಟ್‌‌‌‌ನಲ್ಲಿ ಸೇರಿಸಲು ಮುಂದಾಗುತ್ತಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+