ಭಾರತ ಸೇನೆಗೆ ಬೆಂಬಲ ನೀಡುತ್ತಿರುವ ದೇಶಗಳು ಯಾವುವು... Operation Sindoor
ಭಾರತ ಇದೀಗ ಅತ್ಯಂತ ಕಠಿಣವಾದ ಪರಿಸ್ಥಿತಿಯಲ್ಲಿ ಇದ್ದು, ಪಾಪಿ ಪಾಕಿಸ್ತಾನಕ್ಕೆ ಸರಿಯಾಗಿ ಬುದ್ಧಿ ಕಲಿಸಬೇಕು ಅಂತಾ ನಿರ್ಧಾರ ಮಾಡಿ ಮುಂದೆ ನುಗ್ಗುತ್ತಿದೆ. ಭಾರತ & ಪಾಕಿಸ್ತಾನದ ನಡುವೆ ಘೋರ ಕಾಳಗ ಶುರುವಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಜಾಗತಿಕ ಯುದ್ಧ ಶುರುವಾಗುವ ಭಯ ಕೂಡ ಕಾಡುತ್ತಿದೆ. ಹಾಗಾದ್ರೆ ಇಂತಹ ಸಂಕಷ್ಟದ ಸಮಯದಲ್ಲೇ ನಮ್ಮ ಭಾರತಕ್ಕೆ ಹಾಗೂ ಭಾರತೀಯ ಸೇನೆಗೆ ಬೆಂಬಲ ನೀಡುತ್ತಿರುವ ದೇಶಗಳು ಯಾವುವು ಗೊತ್ತೆ?
ಉಗ್ರರ ಪೋಷಣೆ ಮಾಡುವ ಪಾಪಿ ಪಾಕಿಸ್ತಾನಕ್ಕೆ ಸರಿಯಾಗಿ ಪಾಠ ಕಲಿಸಿದೆ ಭಾರತದ ಸೇನೆ. ಪಾಕಿಸ್ತಾನದ ವಿರುದ್ಧ ಸಂಪೂರ್ಣ ತಯಾರಿ ಮಾಡಿಕೊಂಡು ಭಾರತ ಸೇನೆ ದಾಳಿ ನಡೆಸಿತ್ತು. ಭಾರತ ಸೇನೆಯಿಂದ ಪಾಕ್ ಆಕ್ರಮಿತ ಕಾಶ್ಮೀರ ಮೇಲೆ ದಾಳಿನ ಮಾಡಲಾಗಿತ್ತು. 'ಆಪರೇಷನ್ ಸಿಂಧೂರ್' ಹೆಸರಲ್ಲಿ ಪಾಕಿಸ್ತಾನದ 24 ಪ್ರದೇಶಗಳ ಮೇಲೆ ಹೀಗೆ ಭಾರಿ ದೊಡ್ಡ ಪ್ರಮಾಣದಲ್ಲೇ ಕ್ಷಿಪಣಿ ದಾಳಿ ನಡೆಸಿ ತಕ್ಕಪಾಠ ಕಲಿಸಲಾಗಿದೆ. ಇದೇ ಕಾರಣಕ್ಕೆ ಘೋರ ಕಾಳಗ ಶುರುವಾಗಿದ್ದು, ಗಡಿಯಲ್ಲಿ ಗುಂಡು & ಬಾಂಬ್ ಸದ್ದು ಜೋರಾಗಿದೆ. ಈ ಸಮಯದಲ್ಲೇ, ಭಾರತದ ಬೆನ್ನಿಗೆ ಸ್ನೇಹಿತ ದೇಶಗಳು ನಿಂತುಕೊಂಡಿವೆ.

ಭಾರತಕ್ಕೆ ಯಾವ ಯಾವ ದೇಶಗಳ ಬೆಂಬಲ?
ಪ್ರಪಂಚದ ಆರ್ಥಿಕತೆಗೆ ಭಾರತದ ಕೊಡುಗೆ ತುಂಬಾ ದೊಡ್ಡದಾಗಿದ್ದು, ಭಾರತವನ್ನು ಬಿಟ್ಟು ಜಗತ್ತು ಉಳಿಯುವುದು ಅಸಾಧ್ಯ. ಹೀಗಿದ್ದಾಗ ಭಾರತಕ್ಕೆ ತುಂಬಾ ಬಲಿಷ್ಠ ದೇಶಗಳ ಬೆಂಬಲ ಸಿಗುತ್ತಿದ್ದು, ಭಾರತದ ಅತಿಮುಖ್ಯ ಸ್ನೇಹಿತ ರಷ್ಯಾ ಈಗಾಗಲೇ ಭಾರತಕ್ಕೆ ತನ್ನ ಸಪೋರ್ಟ್ ಘೋಷಣೆ ಮಾಡಿದೆ. ಹಾಗೇ ಇಸ್ರೇಲ್ ಕೂಡ ಭಾರತದ ಬೆನ್ನಿಗೆ ನಿಂತಿದ್ದು, ಅಮೆರಿಕ ಕೂಡ ಭಾರತದ ಪರವಾಗಿಯೇ ಇದೆ. ಇನ್ನುಳಿದಂತೆ ಪಾಕಿಸ್ತಾನದ ಸುತ್ತಮುತ್ತ ಇರುವ ದೇಶಗಳೂ ಭಾರತವನ್ನೇ ಬೆಂಬಲಿಸುವ ಮೂಲಕ ಪಾಕಿಸ್ತಾನಕ್ಕೆ ಶಾಕ್ ನೀಡುತ್ತಿವೆ!
ಪಾಪಿ ಪಾಕಿಸ್ತಾನಕ್ಕೆ ಡಬಲ್ ಆಘಾತ!
ಅಮೆರಿಕ ಕೂಡ ಪಾಕಿಸ್ತಾನದ ವಿರುದ್ಧ ನಿಂತಿದೆ, ಹಿಂದೆ ಅಮೆರಿಕದಲ್ಲಿ ಇದ್ದ ಅಧ್ಯಕ್ಷರೆಲ್ಲಾ ಭಾರತದ ವಿರುದ್ಧ ಪಾಪಿ ಪಾಕಿಸ್ತಾನ ಬೆಂಬಲಿಸುತ್ತಿದ್ದರು. ಈ ಕಾರಣಕ್ಕೆ ದೊಡ್ಡ ಪ್ರಮಾಣದ ಸಹಾಯ ಮಾಡಿ ಪಾಕಿಸ್ತಾನ ಎತ್ತಿ ಕಟ್ಟುವ ಕೆಲಸ ಮಾಡಿದ್ದರು ಎಂಬ ಆರೋಪ ಇದೆ. ಆದರೆ ಇದೀಗ ಅಲ್ಲಿ ಅಂದ್ರೆ, ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಇದ್ದು. ಟ್ರಂಪ್ ಅವರಿಗೂ & ಪಾಕಿಸ್ತಾನ ರಾಜಕಾರಣಿಗಳಿಗೂ ಭಾರಿ ದ್ವೇಷ ಇದೆ. ಅಲ್ಲದೆ ಪಾಕಿಸ್ತಾನ ವಿರುದ್ಧ ಡೊನಾಲ್ಡ್ ಟ್ರಂಪ್ ಗರಂ ಆಗಿದ್ದಾರೆ. ಹೀಗಾಗಿಯೇ, ಈಗ ಪಾಕಿಸ್ತಾನಕ್ಕೆ ಅಮೆರಿಕ ಸಹಾಯ ಮಾಡುವುದು ಅನುಮಾನ, ಹಾಗೇ ಭಾರತ ಪರವಾಗಿ ಅಮೆರಿಕ ನಿಲ್ಲುವುದು ಕೂಡ ಗ್ಯಾರಂಟಿ. ಇದೆಲ್ಲವೂ ಭಾರತಕ್ಕೆ ಇದೀಗ ಬಲ ನೀಡುತ್ತಿದೆ.












Click it and Unblock the Notifications