ಈ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆಯಂತೆ!
ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಕಂಡ ನಂತರ, ಸಾಲು ಸಾಲು ರಾಜ್ಯಗಳಲ್ಲೂ ಇದೇ ರೀತಿ ಗೆಲುವು ಸಾಧಿಸುತ್ತಿದೆ. ಅದ್ರಲ್ಲೂ ಈಗ ನಡೆಯುತ್ತಿರುವ ಪಂಚರಾಜ್ಯ ಎಲೆಕ್ಷನ್ ಭಾರಿ ಕುತೂಹಲ ಕೆರಳಿಸಿದ್ದು, ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಪಕ್ಕಾ ಅಂತಾ ಚುನಾವಣೆ ಸಮೀಕ್ಷೆಗಳು ಹೇಳಿವೆ. ಈ ಸಮಯದಲ್ಲಿ ನಕ್ಸಲ್ ಪೀಡಿತ ರಾಜ್ಯದಲ್ಲಿ ಯಾರು ಗೆಲ್ಲುತ್ತಾರೆ? ಎಂಬ ಬಗ್ಗೆ ಕೂಡ ಸಮೀಕ್ಷೆಯ ವರದಿ ಹೊರಬಿದ್ದಿದೆ.
ಹೌದು, ಬಹುನಿರೀಕ್ಷಿತ ಪಂಚರಾಜ್ಯ ಚುನಾವಣೆ ಇನ್ನೇನು ಮುಗಿಯಲಿದೆ. ಹಾಗೇ 2024ರ ಲೋಕಸಭಾ ಚುನಾವಣೆಗೆ ಕೂಡ ಈ ಪಂಚರಾಜ್ಯ ಚುನಾವಣೆ ದಿಕ್ಸೂಚಿ ಎನ್ನಲಾಗಿದೆ. ಈ ನಡುವೆ, ಛತ್ತೀಸ್‌ಗಢ ರಾಜ್ಯದಲ್ಲಿ ಗೆಲುವಿಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಇದೇ ಸಮಯದಲ್ಲಿ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಯಾರು ಗೆದ್ದು ಬೀಗಲಿದ್ದಾರೆ? ಅನ್ನೋ ಬಗ್ಗೆ ಅಂತಿಮ ಚುನಾವಣಾ ಪೂರ್ವ ಸಮೀಕ್ಷೆಯು ಈಗ ಹೊರಬಿದ್ದಿದೆ. ಹಾಗಾದರೆ ಛತ್ತೀಸ್‌ಗಢ ರಾಜ್ಯದಲ್ಲಿ ಯಾರು ಗೆಲ್ಲಬಹುದು?

ಭಾರಿ ತಿಕ್ಕಾಟದಲ್ಲಿ ಇವರಿಗೆ ಗೆಲುವು?
ನಾಳೆ ಛತ್ತೀಸ್‌ಗಢ ರಾಜ್ಯದಲ್ಲಿ 2ನೇ ಮತ್ತು ಕೊನೇ ಹಂತದ ಮತದಾನ ನಡೆಯಲಿದೆ. ಈ ಕಾರಣಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಆದರೆ ಈ ಸಮಯದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯೊಂದು ತನ್ನ ಅಂತಿಮ ವರದಿ ನೀಡಿದೆ. ಆ ಪ್ರಕಾರ ಈ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೊಮ್ಮೆ ಅಧಿಕಾರ ಸಿಗಲಿದೆ ಅಂತಾ ಹೇಳಲಾಗಿದೆ. ಹಾಗಾದರೆ ಛತ್ತೀಸ್‌ಗಢ ಚುನಾವಣೆ ಅಖಾಡದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಬಹುದು? ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ? ಆ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.
ಯಾವ ಯಾವ ರಾಜ್ಯದಲ್ಲಿ ಚುನಾವಣೆ?
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂ ರಾಜ್ಯಗಳಿಗೆ ಎಲೆಕ್ಷನ್ ನಡೆಯುತ್ತಿದೆ. ಆದರೆ ಉಳಿದ 4 ರಾಜ್ಯ ಒಂದು ಲೆಕ್ಕವಾದರೆ, ಛತ್ತೀಸ್‌ಗಢ ಚುನಾವಣೆ ಮಾತ್ರ ಇನ್ನೊಂದು ಲೆಕ್ಕ. ಛತ್ತೀಸ್‌ಗಢ ಇಡೀ ದೇಶದ ಗಮನ ಸೆಳೆಯುತ್ತಿದೆ. ನಕ್ಸಲ್ ಹಾವಳಿ ಹಿನ್ನೆಲೆ & ಭದ್ರತೆ ಅಗತ್ಯತೆ ಕಾರಣಕ್ಕೆ ಛತ್ತೀಸ್‌ಗಢ ರಾಜ್ಯದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ನವೆಂಬರ್ 7 ಕ್ಕೆ ಮೊದಲ ಹಂತದಲ್ಲಿ ಮತದಾನ ನಡೆದಿದ್ದು, ನವೆಂಬರ್ 17 ಅಂದರೆ ನಾಳೆ ಮತ್ತೊಂದು ಹಂತದಲ್ಲಿ ಚುನಾವಣೆ ನಡೆಯಲಿದೆ. 90 ಸ್ಥಾನಗಳ ರಾಜ್ಯದಲ್ಲಿ, ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು? ಕಾಂಗ್ರೆಸ್‌ಗೆ ಸಿಗುವ ಸ್ಥಾನ ಎಷ್ಟು ಗೊತ್ತಾ?

ಕಾಂಗ್ರೆಸ್ ಮತ್ತೊಮ್ಮೆ ಗೆಲ್ಲುವುದು ಗ್ಯಾರಂಟಿ?
ಚುನಾವಣಾ ಪೂರ್ವ ಸಮೀಕ್ಷೆಗಳ ಅಂತಿಮ ವರದಿಯಂತೆ ಕಾಂಗ್ರೆಸ್ ಪಕ್ಷ ಭರ್ಜರಿ 59 ರಿಂದ 61 ಸ್ಥಾನ ಗೆಲ್ಲಬಹುದು ಅಂತಿದೆ ಸಮೀಕ್ಷೆ. ಹಾಗೆ ಬಿಜೆಪಿ ಪಕ್ಷ ಇಲ್ಲಿ 28 ರಿಂದ 30 ಸ್ಥಾನವನ್ನ ಪಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನ ಹೊರತುಪಡಿಸಿ, ಇತರರು 1 ಸ್ಥಾನ ಪಡೆಯಬಹುದು ಎನ್ನಲಾಗಿದೆ. 'ಲೋಕ್ ಪೋಲ್' ಸಮೀಕ್ಷೆಯಲ್ಲಿ ಈ ಮಾಹಿತಿ ಈಗ ಸಿಕ್ಕಿದೆ. 90 ವಿಧಾನಸಭೆ ಕ್ಷೇತ್ರಗಳನ್ನ ಹೊಂದಿರುವ ಛತ್ತೀಸ್‌ಗಢ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಒಟ್ಟು 9,000 ಮಾದರಿ ಸಂಗ್ರಹಿಸಿ ಈ ವರದಿ ಸಿದ್ಧಪಡಿಸಲಾಗಿದೆ ಎನ್ನಲಾಗಿದೆ.
ಡಿಸೆಂಬರ್ 3 ರಂದು ಈ ಚುನಾವಣೆಯ ರಿಸಲ್ಟ್ ಹೊರಬೀಳಲಿದೆ. ಈ ಹಿನ್ನೆಲೆ ಡಿಸೆಂಬರ್ 3 ರಂದು ಯಾರು ಗೆಲ್ಲುತ್ತಾರೆ? ಯಾರು ಸೋಲ್ತಾರೆ? ಎಂಬುದರ ಕುರಿತು, ಪಕ್ಕಾ ಮಾಹಿತಿ ಹೊರಬೀಳಲಿದೆ. ಹೀಗಾಗಿ ಇನ್ನೂ ಕೆಲವು ದಿನಗಳ ಕಾಲ ಕಾದು, ಚುನಾವಣೆಯ ರಿಸಲ್ಟ್ ಕಣ್ತುಂಬಿಕೊಳ್ಳಬಹುದಾಗಿದೆ.












Click it and Unblock the Notifications