Israel-Hamas War: ಇಸ್ರೇಲ್ ಯುದ್ಧದ ಮೂಲಕ ಎಲ್ಲಾ ಸರ್ವನಾಶ!
ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಬಗ್ಗೆ ದಿನದಿನಕ್ಕೂ ಆಘಾತಕಾರಿ ಸುದ್ದಿ ಹೊರಬೀಳುತ್ತಿದೆ. ಇಬ್ಬರ ನಡುವೆ ವಾರ್ ಶುರುವಾಗಿ, ಕೇವಲ ಒಂದು ವಾರ ಆಗಿದೆ ಅಷ್ಟೇ. ಆಗಲೇ ಹೆಣಗಳ ರಾಶಿ ಬಿದ್ದಿದೆ & ವಿನಾಶಕಾರಿ ಅಸ್ತ್ರದ ಬಳಕೆಯೂ ಶುರುವಾಗಿದೆ. ಮನಷ್ಯರನ್ನು ನಾಶ ಮಾಡುವ ಅಸ್ತ್ರವನ್ನೂ ಇಸ್ರೇಲ್ ಸೇನೆ ಇದೀಗ ಗಾಜಾ ಪ್ರಜೆಗಳ ವಿರುದ್ಧ ಬಳಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹೌದು, ಗಾಜಾಪಟ್ಟಿ & ಲೆಬನಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ವೇಳೆ ಇಸ್ರೇಲ್ ಬಿಳಿ ರಂಜಕದ ಬಾಂಬ್‌ನ ಬಳಸಿದೆ ಎಂದು 'ಹ್ಯೂಮನ್ ರೈಟ್ಸ್ ವಾಚ್' ಗಂಭೀರ ಆರೋಪವನ್ನು ಮಾಡಿದೆ. ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್‌ನಲ್ಲಿ ಮುಖ್ಯ ಕಚೇರಿ ಇರುವ, 'ಹ್ಯೂಮನ್ ರೈಟ್ಸ್ ವಾಚ್' ಎನ್‌ಜಿಒ ಇಸ್ರೇಲ್ ವಿರುದ್ಧ ಇಂತಹ ಗಂಭೀರ ಆರೋಪವನ್ನ ಮಾಡಿದೆ. ಹಾಗಾದರೆ ಬಿಳಿ ರಂಜಕದ ಬಾಂಬ್ ಎಷ್ಟು ಅಪಾಯಕಾರಿ? ಯಾಕೆ ಈ ಕುರಿತು ಭಯ ಶುರುವಾಗಿದೆ? ಬಿಳಿ ರಂಜಕದ ಬಾಂಬ್ ಬಳಸಿದರೆ ಮನುಷ್ಯನ ದೇಹ ಏನಾಗುತ್ತೆ?

'ಬಿಳಿ ರಂಜಕದ ಬಾಂಬ್' ಎಂಬ ಡೆಡ್ಲಿ ಅಸ್ತ್ರ!
ಜಗತ್ತಿನಲ್ಲಿ ಅತ್ಯಂತ ವಿನಾಶಕಾರಿ ಅಸ್ತ್ರ ಎಂದರೆ ಪರಮಾಣು ಬಾಂಬ್‌ಗಳು ಮಾತ್ರ ಅಲ್ಲ. ನ್ಯೂಕ್ಲಿಯರ್ ಬಾಂಬ್‌ಗಳ ರೀತಿಯೇ ಹಲವು ಅಸ್ತ್ರಗಳು ಮನುಷ್ಯನನ್ನ ಸರ್ವನಾಶ ಮಾಡಿ ಹಾಕುತ್ತವೆ. ಅದರಲ್ಲೂ 'ಬಿಳಿ ರಂಜಕದ ಬಾಂಬ್' ಎಂಬ ಡೆಡ್ಲಿ ವೆಪನ್ ಕುರಿತು ನಿಮಗೆ ಅಚ್ಚರಿ ಮೂಡಬಹುದು. ಏಕೆಂದರೆ ಈ ಬಾಂಬ್ ಬಿದ್ದರೆ, ಮನುಷ್ಯನ ದೇಹ ಸುಡುತ್ತದೆ. ಹಾಗೂ ಮನುಷ್ಯನ ಮೂಳೆಗೂ ಇದರಿಂದ ಭಾರಿ ಹಾನಿ ಉಂಟಾಗಿ, ಗಾಯಗಳಿಂದ ವ್ಯಕ್ತಿ ಸುಧಾರಿಸಿಕೊಳ್ಳಲು ಆಗಲ್ಲ. ಕೊನೆಗೆ ಸೋಂಕು ಕೂಡ ಗಾಯಗಳಿಗೆ ತಗುಲಿ, ಆ ವ್ಯಕ್ತಿಯು ಸಾಯುತ್ತಾನೆ ಅಂತಾ ಹೇಳುತ್ತಾರೆ ತಜ್ಞರು.
ಇದಿಷ್ಟೇ ಅಲ್ಲದೆ ಇಂತಹ ಅಸ್ತ್ರ ಬಳಕೆಯಿಂದ ನಾಗರಿಕರ ಮೇಲೆ ಅಪಾಯ ಹೆಚ್ಚುತ್ತದೆ ಮತ್ತು ದೀರ್ಘಕಾಲಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು 'ಹ್ಯೂಮನ್ ರೈಟ್ಸ್ ವಾಚ್' ತಿಳಿಸಿದೆ. ಆದರೆ ಈವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 'ಬಿಳಿ ರಂಜಕದ ಬಾಂಬ್' ನಿಷೇಧಿಸಲು ಕಠಿಣ ಕಾನೂನು ಜಾರಿಯಾಗಿಲ್ಲ. ಈ ಮಧ್ಯೆ 'ಬಿಳಿ ರಂಜಕದ ಬಾಂಬ್' ಬಳಸಿರುವ ಬಗ್ಗೆ ಈಗ ಇಸ್ರೇಲ್ ಸೇನೆ ವಿರುದ್ಧ ಆರೋಪ ಕೇಳಿಬಂದಿದೆ. ಇನ್ನು ತನ್ನ ವಿರುದ್ಧ ಬಂದಿರುವ ಆರೋಪದ ಬಗ್ಗೆ ಇಸ್ರೇಲ್ ಸೇನೆ ಹೇಳಿದ್ದೇನು ಗೊತ್ತಾ?
ನಾನೇನು ಮಾಡಿಲ್ಲ ಅಂತು ಇಸ್ರೇಲ್!
ಇನ್ನು ಬಿಳಿ ರಂಜಕದ ಬಾಂಬ್ ಬಳಸಿ, ಗಾಜಾಪಟ್ಟಿ ಮತ್ತು ಲೆಬನಾನ್ ವಿರುದ್ಧ ಅಟ್ಯಾಕ್ ಮಾಡಿರುವ ಆರೋಪದ ಬಗ್ಗೆ ಇಸ್ರೇಲ್ ಪ್ರತಿಕ್ರಿಯೆ ನೀಡಿದೆ. ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಇಸ್ರೇಲ್ ಸೇನೆ, ಗಾಜಾದಲ್ಲಿ ಬಿಳಿ ರಂಜಕ ಹೊಂದಿದ ಶಸ್ತ್ರಾಸ್ತ್ರ ಬಳಸಿರುವ ಕುರಿತು ಮಾಹಿತಿ ಇಲ್ಲ ಎಂದಿದೆ. ಆದರೆ ಬಿಳಿ ರಂಜಕ ಅಸ್ತ್ರವನ್ನು ಲೆಬನಾನ್ ವಿರುದ್ಧ ಬಳಸಿದ್ರಾ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ.

ಇನ್ನು ಅಕ್ಟೋಬರ್ 10ರಂದು ಲೆಬನಾನ್‌ನಲ್ಲಿ ಮತ್ತು ಅಕ್ಟೋಬರ್ 11ಕ್ಕೆ ಗಾಜಾದಲ್ಲಿ ತೆಗೆದಿದ್ದ ವೀಡಿಯೋ ಪರಿಶೀಲಿಸಿದ್ದಾಗಿ 'ಹ್ಯೂಮನ್ ರೈಟ್ಸ್ ವಾಚ್' ಹೇಳಿತ್ತು. ಇದೇ ವಿಡಿಯೋಗಳ ಆಧಾರದಲ್ಲಿ ಆರೋಪ ಮಾಡಿರುವುದಾಗಿ 'ಹ್ಯೂಮನ್ ರೈಟ್ಸ್ ವಾಚ್' ತಿಳಿಸಿತ್ತು. ಹೀಗಾಗಿ ಇಸ್ರೇಲ್ ಸೇನೆ ಕೂಡ ಪ್ರತಿಕ್ರಿಯೆ ನೀಡಿದ್ದು, ಅಂತಹ ಅಸ್ತ್ರ ಬಳಸಿಲ್ಲ ಅಂತಿದೆ. ಇದೆಲ್ಲಾ ಒಂದು ಕಡೆಯಾದರೆ, ಸಾಮಾನ್ಯ ಜನರ ಬದುಕು ಮಾತ್ರ ಬೀದಿಗೆ ಬಿದ್ದಂತಾಗಿದೆ.
ಒಟ್ನಲ್ಲಿ ಮನುಷ್ಯ ಮತ್ತೊಂದು ಘೋರ ವಿನಾಶಕ್ಕೆ ಹತ್ತಿರವಾಗುತ್ತಿರುವ ರೀತಿ ಕಾಣುತ್ತಿದೆ. ಈಗಾಗಲೇ 2 ಮಹಾಯುದ್ಧ ನೋಡಿದ್ದರೂ ಮನುಷ್ಯನಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇದೇ ಕಾರಣಕ್ಕೆ ಮತ್ತೊಮ್ಮೆ ಅಂತಹದ್ದೇ ಘೋರ ಯುದ್ಧ ಶುರುವಾಗುತ್ತಿದೆ. ಇಸ್ರೇಲ್ & ಹಮಾಸ್ ನಡುವಿನ ಘರ್ಷಣೆಯಲ್ಲಿ ಜಗತ್ತು ಮತ್ತೊಂದು ಮಹಾಯುದ್ಧದಲ್ಲಿ ಮುಳುಗುವ ಭಯ ಕೂಡ ಶುರುವಾಗಿದೆ.












Click it and Unblock the Notifications