Chandrayaan-3: ‘ಚಂದ್ರಯಾನ’ ಲ್ಯಾಂಡರ್ ಅವಶೇಷ ಪತ್ತೆ ಮಾಡಿದ್ದ ಟೆಕ್ಕಿಗೆ ಭಾರಿ ಡಿಮ್ಯಾಂಡ್!

ಭಾರತ ಇನ್ನೇನು 'ಚಂದ್ರಯಾನ-3' ಮೂಲಕ ಹೊಸ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಆದರೆ ಇದೇ ಹೊತ್ತಲ್ಲಿ ಟೆಕ್ಕಿ ಒಬ್ಬರ ಹೆಸರು ಮುನ್ನೆಲೆಗೆ ಬಂದಿದೆ. ಈ ವ್ಯಕ್ತಿ ಅಸಮಾನ್ಯ ಸಾಹಸ ಮಾಡಿದ್ದರು. 'ಚಂದ್ರಯಾನ' ಲ್ಯಾಂಡರ್ ಅವಶೇಷ ಪತ್ತೆ ಮಾಡಲು ಅಮೆರಿಕದ ನಾಸಾ ಪರದಾಡುವಾಗ ಸಹಾಯ ಮಾಡಿದ್ದರು. ಹೀಗೆ ಇಸ್ರೋ ಸಂಸ್ಥೆಗೂ ಪರೋಕ್ಷವಾಗಿ ಹೆಲ್ಪ್ ಮಾಡಿದ್ದ ವ್ಯಕ್ತಿ. ಇಂತಿಪ್ಪ ಟೆಕ್ಕಿ ಇದೀಗ ಮತ್ತೊಮ್ಮೆ ಫುಲ್ ವೈರಲ್ ಆಗಿದ್ದಾರೆ.

ಅಂದಹಾಗೆ ಭಾರತ ಚಂದ್ರಯಾನ-2 ಯೋಜನೆಯನ್ನ 2019ರ ಜುಲೈ 22ರಂದು ಉಡಾವಣೆ ಮಾಡಿತ್ತು. LVM3 ರಾಕೆಟ್‌ನಲ್ಲಿ ಲಾಂಚ್ ಆಗಿತ್ತು ಚಂದ್ರಯಾನ-2. ಆದರೆ ಈ ಯೋಜನೆಯ ಅಂತಿಮ ಕ್ಷಣ ನೋವಿನಿಂದ ಕೂಡಿತ್ತು. ಶತಕೋಟಿ ಭಾರತೀಯ ಪ್ರಜೆಗಳು ಚಂದ್ರಯಾನ ಲ್ಯಾಂಡರ್ ಕುಸಿದು ಬಿದ್ದಾಗ ಕಣ್ಣೀರು ಹಾಕಿದ್ದರು. ಇಸ್ರೋ ವಿಕ್ರಮ್‌ ಲ್ಯಾಂಡರ್ ಜೊತೆಗಿನ‌ ಸಂಪರ್ಕ ಕಳೆದುಕೊಂಡಿತ್ತು. ಅದು ಬಿಡಿ ಕೊನೆಗೆ ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ನ ಅವಶೇಷ ಪತ್ತೆ ಮಾಡುವುದಕ್ಕೂ ಅಮೆರಿಕದ ನಾಸಾ ಪರದಾಡಿತ್ತು. ಆಗ ತಮಿಳುನಾಡು ಮೂಲದ ಟೆಕ್ಕಿ ಹೀರೋ ರೀತಿ ಎಂಟ್ರಿ ಕೊಟ್ಟಿದ್ದರು.

Discover the man who helped NASA to find Chandrayaan-2 lander debris

ಚಂದ್ರನ ಮೇಲೆ ಭಾರತದ ಲ್ಯಾಂಡರ್

ಹೌದು, ಅವರ ಹೆಸರು ಷಣ್ಮುಗ ಸುಬ್ರಮಣಿಯನ್ ಅಂತಾ. ಚೆನ್ನೈ ನಿವಾಸಿಯಾದ ಇವರು ಸಾಫ್ಟ್‌ವೇರ್ ಡೆವಲಪರ್. ಹೀಗೆ ಇಸ್ರೋ ಹಾಗೂ ನಾಸಾ ವಿಜ್ಞಾನಿಗಳು ಚಂದ್ರನ ಮೆಲ್ಮೈಗೆ ಬಿದ್ದ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಹುಡುಕುವಾಗ, ಹೀರೋ ರೀತಿ ಎಂಟ್ರಿ ಕೊಟ್ಟಿದ್ರು. ವಿಕ್ರಮ್ ಲ್ಯಾಂಡರ್‌ ಅವಶೇಷವನ್ನ ಪತ್ತೆ ಹಚ್ಚುವ ಮೂಲಕ 2019ರಲ್ಲಿ ಇಂಟರ್‌ನ್ಯಾಷನಲ್ ಐಕಾನ್ ಆಗಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ್ದ ಸುಬ್ರಮಣಿಯನ್‌ಗೆ ಈಗ ಮತ್ತೆ ಭಾರಿ ಡಿಮ್ಯಾಂಡ್ ಬಂದಿದೆ. ಯಾಕೆ ಅಂತೀರಾ? ಅದರ ಕಂಪ್ಲೀಟ್ ಕಹಾನಿಗೆ ಮುಂದೆ ಓದಿ.

ಕೊನೆಗೂ ಸಿಕ್ಕಿತು ಭಾರತದ ಲ್ಯಾಂಡರ್

ಅಷ್ಟಕ್ಕೂ 2019ರಲ್ಲಿ ಚಂದ್ರನ ಕಕ್ಷೆಗೆ ವಿಕ್ರಮ್ ಲ್ಯಾಂಡರ್‌ ಹಾಜರಿ ಹಾಕಿದರೂ ಸೆಪ್ಟೆಂಬರ್ 6ರಂದು ಇಳಿಯಲು ಪ್ರಯತ್ನಿಸುವಾಗ ಲ್ಯಾಂಡರ್ ಕಳೆದುಹೋಗಿತ್ತು. ಆದ್ರೆ ಕಳೆದುಹೋಗಿದ್ದ ಲ್ಯಾಂಡರ್‌ ಹುಡುಕುವುದೇ ದೊಡ್ಡ ಸಾಹಸವಾಗಿತ್ತು. ಏಕೆಂದರೆ ಚಂದ್ರನ ಮೇಲೆ ಸಾಕಷ್ಟು ಕುಳಿಗಳು ಇದ್ದು, ಅದ್ರಲ್ಲೂ ಚಂದ್ರನ ದಕ್ಷಿಣ ಧ್ರುವ ಕುಳಿಗಳ ಸಾಮ್ರಾಜ್ಯ. ಹೀಗೆ ಯಾವ ಕುಳಿಯ ಒಳಗೆ ವಿಕ್ರಮ್ ಲ್ಯಾಂಡರ್ ಬಿದ್ದು ಹೋಗಿದೆ? ಅನ್ನೋ ಭಯ ಇತ್ತು. ಏಕೆಂದರೆ ಚಂದ್ರನ ಮೇಲೆ ಇರುವ ಒಂದೊಂದು ಕುಳಿ ನೂರಾರು ಕಿಲೋ ಮೀಟರ್ ಆಳ ಇರುತ್ತವೆ. ಹೀಗಿದ್ದಾಗ 2019ರ ಡಿಸೆಂಬರ್‌ನಲ್ಲಿ ಷಣ್ಮುಗ ಚಂದ್ರಯಾನ -2 ಲ್ಯಾಂಡರ್‌ನ ಅವಶೇಷ ಪತ್ತೆ ಮಾಡಿದ್ದರು. ಇದು ಜಗತ್ತಿಗೇ ಒಂದು ಸರ್ಪ್ರೈಸ್ ನೀಡಿತ್ತು.

Discover the man who helped NASA to find Chandrayaan-2 lander debris

ಚಂದ್ರನ ಅವಶೇಷ ಹುಡುಕಿದ್ದು ಹೇಗೆ?

ಅಷ್ಟಕ್ಕೂ ಭಾರತದ ಚಂದ್ರಯಾನ ಲ್ಯಾಂಡರ್ ಅವಶೇಷ ಹುಡುಕಿದ್ದ ಈ ಟೆಕ್ಕಿ ಖಗೋಳ ವಿಜ್ಞಾನಿಯೂ ಅಲ್ಲ, ಬಾಹ್ಯಕಾಶ ಸಂಸ್ಥೆ ಉದ್ಯೋಗಿಯೂ ಅಲ್ಲ. ಆದ್ರೆ ತಂತ್ರಜ್ಞಾನದ ಬಗ್ಗೆ ಜ್ಞಾನ ಇದ್ದ ಷಣ್ಮುಗ ಸತತ ಪ್ರಯತ್ನದ ನಂತರ ಇಸ್ರೋ & ನಾಸಾ ಮಾಡಿರದ ಸಾಧನೆಯನ್ನ ಮಾಡಿದ್ದರು. ಸ್ಟ್ಯಾಂಡರ್ಡ್ ಲ್ಯಾಪ್‌ಟಾಪ್‌ ಹೊಂದಿದ್ದ ಷಣ್ಮುಗ ಸುಬ್ರಮಣಿಯನ್ 2019 ರ ನವೆಂಬರ್ ಅಂತ್ಯದಲ್ಲಿ ಚಂದ್ರನ ಮೇಲ್ಮೈ ಮೇಲೆ ಪರಿಶೀಲಿಸಿದ್ದರು. ಚಂದ್ರನ ಹಳೆಯ ಚಿತ್ರ ಹಾಗೂ ಹೊಸ ಫೋಟೋಗಳನ್ನ ಹೋಲಿಕೆ ಮಾಡುತ್ತಾ, ಪಿಕ್ಸೆಲ್‌ನಿಂದ ಪಿಕ್ಸೆಲ್‌ಗೆ ಝೂಮ್ ಇನ್ & ಝೂಮ್ ಔಟ್ ಮಾಡಿ ಹುಡುಕಾಟ ಆರಂಭಿಸಿದ್ದರು.

ಕಷ್ಟದ ಕೆಲಸವೇ ಇಷ್ಟವಾಗಿ ಹೋಗಿತ್ತು!

ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅವಶೇಷ ಹುಡುಕುವುದು ಕಷ್ಟದ ಕೆಲಸ ಎಂಬುದು ಮೊದಲೇ ಗೊತ್ತಿತ್ತು. ಅದರಲ್ಲೂ ಚಂದ್ರನ ಹಳೆಯ ಚಿತ್ರ ಮತ್ತು ಹೊಸ ಫೋಟೋಗಳನ್ನ ಹೋಲಿಕೆ ಮಾಡುತ್ತಾ, ಪಿಕ್ಸೆಲ್‌ನಿಂದ ಪಿಕ್ಸೆಲ್‌ಗೆ ಝೂಮ್ ಇನ್ & ಝೂಮ್ ಔಟ್ ಮಾಡ್ತಾ ಹುಡುಕಾಟ ನಡೆಸಲು ಆಗೋದೆ ಇಲ್ಲ ಎನ್ನಲಾಗಿತ್ತು. ಆದ್ರೆ ಅದನ್ನ ಸುಳ್ಳು ಮಾಡಿದ್ದರು ಈ ಟೆಕ್ಕಿ. ವಿಜ್ಞಾನಿಗಳ ಪ್ರಕಾರ ಯಾವುದು ಅಸಾಂಪ್ರದಾಯಿಕ ಎನಿಸಿಕೊಂಡಿತ್ತೋ, ಅದೇ ಮಾರ್ಗದಲ್ಲಿ ಹಲವು ದಿನಗಳ ಕಾಲ ಪರಿಶ್ರಮ ಹಾಕಿ ಷಣ್ಮುಗ ಸುಬ್ರಮಣಿಯನ್ ಗೆದ್ದರು. ಹೀಗೆ ಹಲವು ದಿನಗಳ ಕಾಲ ಸತತ ಪರಿಶ್ರಮ ಹಾಕಿ, ಡಿಸೆಂಬರ್‌ನಲ್ಲಿ ವಿಕ್ರಮ್ ಲ್ಯಾಂಡರ್‌ನ ಅವಶೇಷ ಪತ್ತೆ ಮಾಡಿದ್ದರು.

ಹೀಗೆ ಅತ್ಯದ್ಭುತ ಸಾಧನೆ ಮಾಡಿದ್ದ ಷಣ್ಮುಗ ಸುಬ್ರಮಣಿಯನ್ ಬಗ್ಗೆ ನಾಸಾ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿತ್ತು. ಟೆಕ್ಕಿ ಷಣ್ಮುಗ ಸುಬ್ರಮಣಿಯನ್ ಅವರ ಪ್ರಯತ್ನಕ್ಕೆ ಧನ್ಯವಾದ ತಿಳಿಸಿತ್ತು. ಸುಬ್ರಮಣಿಯನ್ ಅವಶೇಷಗಳ ಧನಾತ್ಮಕ ಗುರುತಿಸುವಿಕೆ ಜೊತೆಗೆ LRO (ಚಂದ್ರನ ವಿಚಕ್ಷಣ ಆರ್ಬಿಟರ್) ಯೋಜನೆಯನ್ನು ಸಂಪರ್ಕಿಸಿದ್ದಾರೆ. ಬೆಳಕು ಹೇಗೆ ಪ್ರತಿಫಲಿಸುತ್ತದೆ ಎಂಬುದರ ವ್ಯತ್ಯಾಸ ಬಳಸಿಕೊಂಡು. ಇದರ ಜೊತೆಯಲ್ಲಿ ನೈಸರ್ಗಿಕ ವಸ್ತುಗಳನ್ನ ಮಾನವ ನಿರ್ಮಿತ ವಸ್ತುಗಳೊಂದಿಗೆ ಹೋಲಿಕೆ ಮಾಡುವ ಮೂಲಕ ಈ ಆವಿಷ್ಕಾರ ನಡೆಸಿದ್ದಾರೆ ಎಂದು ನಾಸಾ ಕೂಡ ಹೆಮ್ಮೆ ವ್ಯಕ್ತಪಡಿಸಿತ್ತು. ಇದು ಭಾರತೀಯರಿಗೂ ಹೆಮ್ಮೆ ತರಿಸಿತ್ತು.

Discover the man who helped NASA to find Chandrayaan-2 lander debris

ಕೆಲಸಕ್ಕೆ ಚಕ್ಕರ್ ಹಾಕಿದ ಟೆಕ್ಕಿ ಷಣ್ಮುಗ

ಇಷ್ಟೆಲ್ಲಾ ಸಾಧನೆಯನ್ನ ಮಾಡಿ, ನಾಸಾ ಸಂಸ್ಥೆಯಿಂದಲೇ ಹೊಗಳಿಕೆ ಪಡೆದಿದ್ದ ಷಣ್ಮುಗ ಸುಬ್ರಮಣಿಯನ್ ಒಬ್ಬ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ. 15 ವರ್ಷದಿಂದ ಐಟಿ ಕ್ಷೇತ್ರದಲ್ಲಿದ್ದಾರೆ ಷಣ್ಮುಗ ಸುಬ್ರಮಣಿಯನ್. ಈಗ ಚಂದ್ರಯಾನ-3 ಯೋಜನೆ ಲ್ಯಾಂಡಿಂಗ್ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೆಲಸಕ್ಕೆ ಚಕ್ಕರ್ ಹಾಕಿದ್ದಾರೆ. ಈ ಬಗ್ಗೆ ಮಾತನಾಡಿರುವ ಷಣ್ಮುಗ ಸುಬ್ರಮಣಿಯನ್, ಸಂತಸ ಹಂಚಿಕೊಂಡಿದ್ದಾರೆ. ಅಲ್ಲದೆ ಚಂದ್ರಯಾನ-3ಗೂ ಈ ಟೆಕ್ಕಿ ಕೈಜೋಡಿಸಿದ್ದಾರೆ.

ರಜೆ ಹಾಕಿ ಚಂದ್ರಯಾನ-3ಗೆ ಬೆಂಬಲ!

ನಾನು ನಿಜವಾಗೂ ಉತ್ಸುಕನಾಗಿದ್ದೇನೆ. ಲ್ಯಾಂಡಿಂಗ್ ಪ್ರಕ್ರಿಯೆ ವೀಕ್ಷಿಸಲು ರಜೆ ಹಾಕಿದ್ದೀನಿ. ಈಗಾಗಲೇ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ ಮಾಹಿತಿ & ಫೋಟೋಗಳ ಮೂಲಕ ಉದ್ದೇಶಿತ ಲ್ಯಾಂಡಿಂಗ್ ಪ್ರದೇಶದ ಚಿತ್ರ ಪ್ರಕಟಿಸಿದ್ದೇನೆ ಎಂದಿದ್ದಾರೆ ಟೆಕ್ಕಿ ಷಣ್ಮುಗ. ಹೀಗೆ ಭಾರತದ ಇಸ್ರೋದ ಮತ್ತೊಂದು ಮಹತ್ವದ ಯೋಜನೆಗೆ ಸಾಥ್ ನೀಡಲಿದ್ದಾರೆ ಭಾರತದ ಈ ಟೆಕ್ಕಿ. ಇದರ ಜೊತೆಗೆ ಶತಕೋಟಿ ಭಾರತೀಯರು ಹಾಗೂ ಇಡೀ ಜಗತ್ತೇ ಭಾರತೀಯರ ಸಾಧನೆಗೆ ಕಾದು ಕುಳಿತಿದೆ. ಇನ್ನೇನು ಕೆಲವೇ ನಿಮಿಷದಲ್ಲಿ ಅದಕ್ಕೆಲ್ಲಾ ಉತ್ತರ ಸಿಗಲಿದೆ.

Discover the man who helped NASA to find Chandrayaan-2 lander debris

ಚಂದ್ರನ ಮೇಲೆ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ಗೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಅಂದರೆ ಇಂದು ಸಂಜೆ, ಚಂದ್ರಯಾನ-3ರ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ಇಸ್ರೊ ಯಶಸ್ಸಿಗೆ ಭಾರತೀಯರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಹಾಗೇ ಜಗತ್ತು ಕೂಡ ಭಾರತದ ಈ ಯಶಸ್ಸಿಗಾಗಿ ಪ್ರಾರ್ಥನೆ ಮಾಡುತ್ತಿದ್ದು, ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಒಳ್ಳೆಯ ಸುದ್ದಿ ಸಿಗುವುದು ಬಹುತೇಕ ಪಕ್ಕಾ. ಮನುಷ್ಯರ ಭವಿಷ್ಯ ಚಂದ್ರಯಾನ ಯೋಜನೆ ಮೂಲಕ ಉಜ್ವಲವಾಗುವುದು ಕೂಡ ಗ್ಯಾರಂಟಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+