ಪಾಕ್ ವಿವಾದಾತ್ಮಕ ನಾಯಕನಿಗೆ ಮೋದಿ ಹೋಲಿಕೆ, ದಿಗ್ವಿಜಯ್ ಪ್ರಮಾದ
ಅಲಿರಾಜ್ಪುರ, ಜುಲೈ 13: ಶಶಿ ತರೂರ್ ಅವರ 'ಹಿಂದು ಪಾಕಿಸ್ತಾನ' ಹೇಳಿಕೆಯ ಬಿಸಿ ಆರುವ ಮುನ್ನವೇ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೊದಿ ಅವರನ್ನು ಪಾಕಿಸ್ತಾನದ ವಿವಾದಾತ್ಮಕ ನಾಯಕ ಜಿಯಾ ಉಲ್ ಹಕ್ ಗೆ ಜೊತೆ ಹೋಲಿಸಿ ಮಾತನಾಡಿದ್ದಾರೆ ದಿಗ್ವಿಜಯ್ ಸಿಂಗ್!
'ಭಾರತದಲ್ಲಿ ಪ್ರಧಾನಿ ಮೋದಿ ಸರ್ಕಾರ ಧಾರ್ಮಿಕ ಉಗ್ರಗಾಮಿತ್ವವನ್ನು ಹರಡುತ್ತಿದೆ. ಪಾಕಿಸ್ತಾನದಲ್ಲಿ ಜಿಯಾ ಉಲ್ ಹಕ್ ಮತೀಯ ಉಗ್ರಗಾಮಿತ್ವ ಹರಡಿದಂತೆ, ಭಾರತದಲ್ಲಿ ನರೇಂದ್ರ ಮೋದಿ ಮತೀಯ ಉಗ್ರಗಾಮಿತ್ವ ಹರಡುತ್ತಿದ್ದಾರೆ' ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

"ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೆಚ್ಚುವುದಕ್ಕೆ ಕಾರಣವಾಗಿದ್ದೇ ಈ ಮತೀಯ ಉಗ್ರಗಾಮಿತ್ವ. ಭಾರತದಲ್ಲಿ ತಥಾಕತಿಥ ಹಿಂದುತ್ವವನ್ನಿಟ್ಟುಕೊಂಡು ಆಡಳಿತ ಪಕ್ಷ(ಎನ್ ಡಿಎ) ಭಾರತದಲ್ಲೂ ಅಂಥ ಭಯೋತ್ಪಾದನೆಯನ್ನು ಹರಡುತ್ತಿದೆ" ಎಂದು ಸಿಂಗ್ ಹೇಳಿದ್ದಾರೆ.
ಎರಡು ದಿನಗಳ ಹಿಂದಷ್ಟೇ, '2019 ರಲ್ಲೂ ಎನ್ ಡಿಎ ಸರ್ಕಾರವೇ ಅಧಿಕಾರಕ್ಕೆ ಬಂದರೆ ಭಾರತ ಹಿಂದು ಪಾಕಿಸ್ತಾನವಾಗಲಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಹಕ್ಕನ್ನು ಹತ್ತಿಕ್ಕಿದಂತೆ, ಭಾರತದಲ್ಲೂ ಮೋದಿ ಸರ್ಕಾರ ಅಲ್ಪಸಂಖ್ಯಾತರ ಹಕ್ಕನ್ನು ಹತ್ತಿಕ್ಕುತ್ತಿದೆ' ಎಂಬ ಹೇಳಿಕೆ ನೀಡಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿವಾದ ಸೃಷ್ಟಿಸಿದ್ದರು.












Click it and Unblock the Notifications