School Holidays: ಮಾರ್ಚ್‌ 15 ಮತ್ತು 28 ರಂದು ಶಾಲೆಗಳಿಗೆ ರಜೆ ಘೋಷಣೆಗೆ ಒತ್ತಾಯ

School Holidays in March: ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿವಿಧ ರಾಜ್ಯಗಳ ಶಾಲೆಗಳಿಗೆ, ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳಿಗೆ ಹೋಳಿ ಹಬ್ಬದ ಪ್ರಯುಕ್ತ ಮಾರ್ಚ್ 13, 14ರಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಇದರೊಂದಿಗೆ ಮಾರ್ಚ್ 15 ಹಾಗೂ ಮಾರ್ಚ್‌ 28ರಂದು ರಜೆ ಘೋಷಿಸಬೇಕು. ಇದರಿಂದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಶಿಕ್ಷಕರ ಸಂಘಟನೆಗಳು ಒತ್ತಾಯಿಸಿವೆ.

ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಲ್ಲಿ ಹಬ್ಬ ಹರಿದಿನಗಳಿಗಾಗಿ ರಜೆ ಪಡೆದು ಖುಷಿ ಪಟ್ಟಿದ್ದರು. ಇದೀಗ ಮಾರ್ಚ್ ಸಹ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ನೀಡುತ್ತಿದೆ. ಇದರೊಂದಿಗೆ ಪ್ರಮುಖ ಹಬ್ಬಗಳ ಹಿನ್ನೆಲೆಯಲ್ಲಿ ರಜೆ ನೀಡುವಂತೆ ಶಿಕ್ಷಕರ ಸಂಘಗಳು ಆಗ್ರಹಿಸಿವೆ.

Demands to Announce School Holidays on March 15 and 28 in Uttar Pradesh

ಹೌದು ನಮ್ಮ ರಾಜ್ಯದಲ್ಲಿ ಅಲ್ಲ ಬದಲಾಗಿ ಉತ್ತರ ಪ್ರದೇಶದ ಕೌನ್ಸಿಲ್ ಶಾಲೆಗಳ ಶಿಕ್ಷಕರ ಆಗ್ರಹವಾಗಿದೆ. ಮಾರ್ಚ್ 15 ಹಾಗೂ ಮಾರ್ಚ್ 28 ರಂದು ರಜೆ ಏಕೆ ಬೇಕು ಅಂತಲೂ ಅವರೇ ತಿಳಿಸಿದ್ದಾರೆ. ಪ್ರಾಥಮಿಕ ಶಿಕ್ಷಕ ತರಬೇತಿ ಪಡೆದ ಪದವೀಧರ ಸಂಘವು, ಕೌನ್ಸಿಲ್ ಶಾಲೆಗಳಲ್ಲಿ ಮಾರ್ಚ್ 13 ಮತ್ತು 14 ರಂದು ಹೋಳಿ ರಜೆ ನೀಡಲಾಗಿದೆ. ಈ ರಜೆಗಳ ಬಳಿಕ ಮಾರ್ಚ್ 15 ರಂದು ಶಾಲೆಗಳು ಪುನಃ ಅರಂಭವಾಗುತ್ತವೆ.

ಆದರೆ ಆದರೆ ಮಾರ್ಚ್ 15 ರಂದು ಭಯ್ಯಾ ದೂಜ್ ಹಬ್ಬ ಆಚರಿಸಲಾಗುತ್ತದೆ. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅನಾನುಕೂಲತೆ ಎದುರಿಸಬೇಕಾಗುತ್ತದೆ. ಸಕಾಲಕ್ಕೆ ಶಾಲೆಗೆ ಬರಲು ಆಗುವುದಿಲ್ಲ. ಬದಲಾಗಿ ಹವಲು ವಿದ್ಯಾರ್ಥಿಗಳು ಗೈರಾಗಬಹುದು. ಹಬ್ಬದ ಕಾರಣಕ್ಕಾಗಿ ಆದ್ದರಿಂದ ಈ ದಿನದಂದು ರಜೆ ನೀಡುವ ಅವಶ್ಯಕತೆ ಎಂದು ಸಂಘಟನೆ ಯುಪಿ ಸರ್ಕಾರಕ್ಕೆ ಒತ್ತಾಯಿಸಿವೆ.

ಮಾರ್ಚ್ 28 ರಂಜಾನ್: ಸಂಘದ ಪ್ರಾಂತೀಯ ಅಧ್ಯಕ್ಷರು ಹೇಳುವುದೇನು?

ಶಿಕ್ಷಕರ ಸಂಘದ ಪ್ರಾಂತೀಯ ಅಧ್ಯಕ್ಷ ವಿನಯ್ ಕುಮಾರ್ ಸಿಂಗ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕೌನ್ಸಿಲ್ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ಶಿಕ್ಷಕರು ಸ್ಥಳಿಯ ನಿವಾಸಿಗಳು ಅಲ್ಲ. ಬದಲಾಗಿ ಅವರು ತವರು ಜಿಲ್ಲೆಯಿಂದ ಬೇರೆ ಬೇರೆ ಕಡೆಗಿನ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಹಬ್ಬಗಳು ಎದುರಾದಗ ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಆಚರಣೆ ಕಷ್ಟವಗುತ್ತದೆ.

ಮೇಲಾಗಿ ಮಾರ್ಚ್ 28 ರಂಜಾನ್ ತಿಂಗಳ ಕೊನೆಯ ಶುಕ್ರವಾರವಾಗಿದೆ. ಮಾರ್ಚ್ 31 ರಂದು ಈದ್ ಮಿಲಾದ್ ಆಚರಣೆ ಇದೆ. ಈ ಸಮಯದಲ್ಲಿ, ಮಂಡಳಿಯು ಮಾರ್ಚ್ 24 ರಿಂದ 28 ರವರೆಗೆ ವಾರ್ಷಿಕ ಪರೀಕ್ಷೆಗಳನ್ನು ಹಮ್ಮಿಕೊಳ್ಳಲು ಪ್ರಸ್ತಾಪಿಸಿದೆ. ಪರೀಕ್ಷೆ, ಹಬ್ಬಗಳು, ರಜೆ ಮಾರನೇ ದಿನ ಬೇರೆ ಊರುಗಳಿಂದ ಬರುವುದು ಇದೆಲ್ಲವು ತೊಡಕಾಗಬಹುದು. ಆದ್ದರಿಂದ ಮಾರ್ಚ್ 15 (ಭಾಯ್ ದೂಜ್) ಮತ್ತು ಮಾರ್ಚ್ 28 (ರಂಜಾನ್ ಕೊನೆಯ ಶುಕ್ರವಾರ) ಗಳನ್ನು ಸಾರ್ವಜನಿಕ ರಜಾ ದಿನಗಳೆಂದು ಘೋಷಿಸಬೇಕು.

ಮಾರ್ಚ್ 28ರ ಪರೀಕ್ಷೆ: ಮುಂದೂಡಿಕೆಗೆ ಒತ್ತಾಯ

ರಂಜಾನ್ ಹಬ್ಬದಂದು ಮುಸ್ಲಿಂ ಶಿಕ್ಷಕರು ಮತ್ತು ಮಕ್ಕಳ ಹಾಜರಾತಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ಈ ವೇಳೆ ನೀವು ಇದು ಪರೀಕ್ಷೆ ನಡೆಸಿದರೆ ಅದರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮಾರ್ಚ್ 15 ಮತ್ತು ಮಾರ್ಚ್ 28 ರಂದು ಶಾಲೆಗಳಲ್ಲಿ ಸಾರ್ವಜನಿಕ ರಜಾದಿನಗಳಾಗಿ ಘೋಷಿಸಲು ಬೇಡಿಕೆ ಇಡಲಾಗಿದೆ.

ಶಿಕ್ಷಣ ನಿರ್ದೇಶಕರಿಗೆ ಶಿಕ್ಷಕರ ಸಂಘವು ಮನವಿ ಪತ್ರ ರವಾನಿಸಲಾಗಿದೆ. ಮಾರ್ಚ್ 28ರ ಉದ್ದೇಶಿತ ಪರೀಕ್ಷೆಯನ್ನು ಮಾರ್ಚ್ 29ಕ್ಕೆ ನಡೆಸಲು ಕೋರಲಾಗಿದೆ. ಈ ಬಗ್ಗೆ ಶೀಘ್ರವೇ ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+