ಚಿಲ್ಲಿ ಪನೀರ್ ಬದಲಿಗೆ ಚಿಲ್ಲಿ ಚಿಕನ್ ಡೆಲಿವರಿ: ಡೆಲಿವರಿ ಬಾಯ್ ವಿರುದ್ಧ ಬ್ರಾಹ್ಮಣ ಕುಟುಂಬ ದೂರು
ಲಕ್ನೋ, ಅಕ್ಟೋಬರ್ 12: ಉತ್ತರ ಪ್ರದೇಶದ ಲಕ್ನೋದಲ್ಲಿ ಚಿಲ್ಲಿ ಪನೀರ್ ಆರ್ಡರ್ ಮಾಡಿದ ಸಸ್ಯಹಾರಿ ಬ್ರಾಹ್ಮಣ ಕುಟುಂಬಕ್ಕೆ ಚಿಲ್ಲಿ ಚಿಕನ್ ಡೆಲಿವರಿ ಮಾಡಿದ್ದು, ಇದನ್ನು ತಿಂದು ಮನೆಯವರು ಅನಾರೋಗ್ಯಕ್ಕೀಡಾದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಕ್ನೋದಲ್ಲಿರುವ ರೆಸ್ಟೊರೆಂಟ್‌ನಿಂದ ಚಿಲ್ಲಿ ಪನೀರ್ ಬದಲಿಗೆ ಚಿಲ್ಲಿ ಚಿಕನ್ ಡೆಲಿವರಿ ಮಾಡಿದ್ದರಿಂದ ಸಸ್ಯಾಹಾರಿ ಬ್ರಾಹ್ಮಣ ಕುಟುಂಬ ಕಂಗಾಲಾಗಿದೆ. ಈ ಸಸ್ಯಾಹಾರಿ ಕುಟುಂಬವು ಫುಡ್ ಡೆಲಿವರಿ ಆಪ್ ಸ್ವಿಗ್ಗಿ ಮೂಲಕ ಅಲಂಬಾಗ್‌ನಲ್ಲಿರುವ ಚೈನೀಸ್ ಫ್ಯೂಷನ್ ರೆಸ್ಟೋರೆಂಟ್‌ನಿಂದ ಚಿಲ್ಲಿ ಪನೀರ್ ಅನ್ನು ಆರ್ಡರ್ ಮಾಡಿತ್ತು. ಆದರೆ ಅವರಿಗೆ ಚಿಲ್ಲಿ ಚಿಕನ್ ಅನ್ನು ಡೆಲಿವರಿ ಆಗಿತ್ತು. ಸೋಮವಾರ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ.

ರೆಸ್ಟೋರೆಂಟ್, ಡೆಲಿವರಿ ಬಾಯ್ ವಿರುದ್ಧ ಪ್ರಕರಣ:
ಚಿಲ್ಲಿ ಪನೀರ್ ಎಂದು ಭಾವಿಸಿ ಮನೆಯವರು ನಾನ್ ವೆಜ್ ಚಿಲ್ಲಿ ಚಿಕನ್ ಚೈನೀಸ್ ಖಾದ್ಯವನ್ನು ತಿಂದರು. ಆಹಾರ ಸೇವಿಸಿದ ಬಳಿಕ ಅವರು ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ಆಗ ಕುಟುಂಬದ ಸದಸ್ಯರಾದ ರಾಕೇಶ್ ಕುಮಾರ್ ಶಾಸ್ತ್ರಿ ಅವರು ರೆಸ್ಟೋರೆಂಟ್ ಮತ್ತು ಆಹಾರ ಪದಾರ್ಥವನ್ನು ತಲುಪಿಸಿದ ಸ್ವಿಗ್ಗಿ ಡೆಲಿವರಿ ಬಾಯ್ ಮೊಹಮ್ಮದ್ ಇಮ್ರಾನ್ ವಿರುದ್ಧ ಆಶಿಯಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ, ರೆಸ್ಟೋರೆಂಟ್ ಮತ್ತು ಡೆಲಿವರಿ ಬಾಯ್ ವಿರುದ್ಧ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಡೆಲಿವರಿ ಗೂಫ್-ಅಪ್‌ಗಳು
ಅನೇಕ ಸಸ್ಯಾಹಾರಿಗಳು ಮಾಂಸಾಹಾರವನ್ನು ತಪ್ಪಾಗಿ ಡೆಲಿವರಿ ಮಾಡಿದ ಕಾರಣದಿಂದ ಮಾಂಸಾಹಾರವನ್ನು ನೀಡದ ರೆಸ್ಟೋರೆಂಟ್‌ಗಳಿಂದ ತಮ್ಮ ಆಹಾರವನ್ನು ಆರ್ಡರ್ ಮಾಡಲು ಬಯಸುತ್ತಾರೆ. ಆದರೆ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ. ಮಾರ್ಚ್‌ನಲ್ಲಿ, ಮಹಿಳೆಯೊಬ್ಬರು ಆನ್‌ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್ ಜೊಮಾಟೊದಿಂದ ಸಸ್ಯಾಹಾರಿ ಆಹಾರವನ್ನು ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಮಾಂಸಾಹಾರಿ ಪಧಾರ್ಥವನ್ನು ಡೆಲಿವರಿ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಈ ಸಂಬಂಧ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತನ್ನ ಮುಜುಗರದ ಅನುಭವವನ್ನು ಹಂಚಿಕೊಂಡ ಮಹಿಳೆ ನಿರುಪಮಾ ಸಿಂಗ್ ಅವರು, ಆನ್‌ಲೈನ್ ಆಹಾರ ವಿತರಣಾ ಆಪ್‌ನಿಂದ ಫುಡ್ ಅನ್ನು ಆರ್ಡರ್ ಮಾಡಿದ್ದೇನೆ. ಆದರೆ ನನಗೆ ನಾನ್ ವೆಜ್ ಫುಡ್ ಡೆಲಿವರಿ ಮಾಡಲಾಗಿದೆ. ತನ್ನ ಆರ್ಡರ್‌ನಲ್ಲಿ ಚಿಕನ್ ಖಾದ್ಯವನ್ನು ಮತ್ತು ಚಮಚದಿಂದ ಆಹಾರ ಪದಾರ್ಥವನ್ನು ತೋರಿಸುವ ವೀಡಿಯೊವನ್ನು ಅವಳು ಹಂಚಿಕೊಂಡಿದ್ದರು.
ಆ ಬಳಿಕ ಅವರು ಹಾಯ್ ಜೊಮಾಟೊ ನಿಮ್ಮಿಂದ ವೆಜ್ ಫುಡ್ ಆರ್ಡರ್ ಮಾಡಿ ಎಲ್ಲಾ ನಾನ್ ವೆಜ್ ಫುಡ್ ಪಡೆದುಕೊಂಡೆ. ನಮ್ಮಲ್ಲಿ 4/5 ಸಸ್ಯಾಹಾರಿಗಳು. ಇದು ಎಂತಹ ಸರ್ವೀಸ್ ಎಂದು ವಿಡಿಯೋ ಕ್ಲಿಪ್ ಅನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು.
ಇದೇ ಮಾದರಿ ಕಳೆದ ವರ್ಷ ಪಂಜಾಬ್‌ನ ಲುಧಿಯಾನದ ರೆಸ್ಟೊರೆಂಟ್‌ನಲ್ಲಿ ಗ್ರಾಹಕರೊಬ್ಬರಿಗೆ ಸಸ್ಯಾಹಾರಿ ಪದಾರ್ಥದ ಬದಲಿಗೆ ಮಾಂಸಾಹಾರಿ ಪಧಾರ್ಥವನ್ನು ವಿತರಿಸಿದ ನಂತರ ಮಾಲೀಕರಿಗೆ 1,500 ರೂಪಾಯಿ ದಂಡವನ್ನು ವಿಧಿಸಲಾಯಿತು. ಈ ಹಿಂದೆ ಬಳಕೆದಾರರೊಬ್ಬರು ಜೊಮಾಟೊದಿಂದ ಆರ್ಡರ್ ಮಾಡಿದ ಕಾಫಿಯಲ್ಲಿ ಚಿಕನ್ ಪೀಸ್ ಇತ್ತು. ಬಳಿಕ ರೆಸ್ಟೋರೆಂಟ್ ಮತ್ತು ಆಹಾರ ವಿತರಣಾ ಅಪ್ಲಿಕೇಶನ್ ಬಳಕೆದಾರರಿಗೆ ಕ್ಷಮೆಯಾಚಿಸಿತು.












Click it and Unblock the Notifications