ಮೆಟ್ರೋ ಪ್ರಯಾಣಿಕರು ಮರೆತ ₹40 ಲಕ್ಷ ನಗದು, 89 ಲ್ಯಾಪ್‌ಟಾಪ್, ಚಿನ್ನಾಭರಣ & ಬೆಲೆಬಾಳುವ ವಸ್ತುಗಳು ವಶ!
ನವದೆಹಲಿ, ಜನವರಿ 26: ಮಹಾನಗರಗಳಲ್ಲಿ ಜನರು ನಿತ್ಯದ ಬದುಕು ಧಾವಂತದಿಂದ ಕೂಡಿರುತ್ತದೆ. ಕೆಲಸ, ಕಚೇರಿ, ಮನೆಗಳಿ ಓಡಾಟದಲ್ಲಿ ನಿರತರವಾದ ಮಂದಿಗೆ ಮೆಟ್ರೋ ರೈಲುಗಳು ಉತ್ತಮ ಸಾರಿಗೆ ಸೇವೆ ನೀಡುತ್ತವೆ. ದೈನಂದಿನ ಕಾರ್ಯ ಚುವಟಿಕೆಯಲ್ಲಿ ಅವಸವಸರವಾಗಿ ತೆರಳುವ ಪ್ರಯಾಣಿಕರು ಲಕ್ಷಾ ರೂಪಾಯಿ ನಗದು, ಚಿನ್ನಾಭರಣ, ಮೊಬೈಲ್, ಲ್ಯಾಪ್ ಟಾಪ್ ಸೇರಿ ಬೆಲೆ ಬಾಳುವ ಅನೇಕ ವಸ್ತುಗಳ ಮೆಟ್ರೋ ರೈಲಿನಲ್ಲಿಯೇ ಬಿಟ್ಟು ಹೋದ ಘಟನೆಗಳು ವರದಿ ಆಗಿವೆ. ಬಿಟ್ಟು ಹೋದ ವಸ್ತುಗಳನ್ನು ಲೆಕ್ಕಾ ಮಾಡಿ ದೆಹಲಿ ಮೆಟ್ರೋ ಮಾಹಿತಿ ಪ್ರಕಟಿಸಿದೆ.
2024 ರಲ್ಲಿ ದೆಹಲಿ ಮೆಟ್ರೋ ಪ್ರಯಾಣಿಕರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಹೋದ ಅಪರೂಪದ ಸಂಗತಿಗಳು ಬೆಳಕಿಗೆ ಬಂದಿವೆ. ನಿತ್ಯ ದೆಹಲಿ ಮೆಟ್ರೋದಲ್ಲಿ ಓಡಾಡುವ ಪ್ರಯಾಣಿಕರ ಪೈಕಿ ಅನೇಕರು ಮರೆತು, ಧಾವಂತದ ಬದುಕಿನ ಜಂಜಾಟಗಳ ಮಧ್ಯ ವಸ್ತುಗಳು ರೈಲಿನಲ್ಲಿ ಬಿಟ್ಟು ಇಳಿದಿದ್ದಾರೆ.

ಮೆಟ್ರೋ ನಿಲ್ದಾಣ, ರೈಲಿನಲ್ಲಿ ಬಿಟ್ಟು ಹೋದ ರಾಶಿ ವಸ್ತುಗಳನ್ನು ಮಾಹಿತಿ ನೀಡಿ ದೆಹಲಿ ಮೆಟ್ರೋ ಗಮನ ಸೆಳೆದಿದೆ. ಹರಿಯಾಣ, ಉತ್ತರ ಪ್ರದೇಶ, ಗುರುಗ್ರಾಮ್, ಫರಿದಾಬಾದ್ ಸೇರಿದಂತೆ ಅನೇಕ ಕಡೆಗಳ ಹೋಗುವಾಗಿ ದೆಹಲಿ ಮೆಟ್ರೋ ಮೂಲಕವು ಸಂಚರಿಸುತ್ತಾರೆ. ಸ್ಥಳೀಯ ನಿವಾಸಿಗಳು, ಉದ್ಯೋಗಿಗಳು ನಿತ್ಯ ಮೆಟ್ರೋ ಬಳಸುತ್ತಾರೆ. ಅವರಲ್ಲಿ ಕೆಲವರು ಬಿಟ್ಟು ಹೋದ ವಸ್ತುಗಳ ಮಾಹಿತಿ ಇಲ್ಲಿದೆ.
ಮೆಟ್ರೋದಲ್ಲಿ ಬಿಟ್ಟು ಹೋದ ಬೆಲೆಬಾಳುವ ವಸ್ತುಗಳು
2024ರ ಒಂದೇ ವರ್ಷದಲ್ಲಿ ಮರೆತು, ರೈಲಿನಲ್ಲಿ ಬಿಟ್ಟುಹೋದ ವಸ್ತುಗಳ ಪೈಕಿ ನಗದು ಪ್ರಮಾಣ ಹೆಚ್ಚಿದೆ. 40 ಲಕ್ಷಕ್ಕೂ ಅಧಿಕ ನಗದು ಹಣ, ಸುಮಾರು 89 ಲ್ಯಾಪ್‌ಟಾಪ್‌ಗಳು, 40 ಕೈಗಡಿಯಾರ, 193 ಮೊಬೈಲ್ ಫೋನ್‌ಗಳು ಮತ್ತು ಒಂಬತ್ತು ಮಂಗಳಸೂತ್ರಗಳು ಇವೆ. ಇದು ಪ್ರಯಾಣಿಕರ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ.

ಚಿನ್ನಾಭರಣ ಮರೆತ ಪ್ರಯಾಣಿಕರು
CISF ಸಿಬ್ಬಂದಿಯೊಬ್ಬರು ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿ ಇಳಿಯುವಾಗ 13 ಜೋಡಿ ಕಾಲ್ಗೆಜ್ಜೆಗಳು, ಉಂಗುರ ಮತ್ತು ಬಳೆಗಳು ಸೇರಿ ಅನೇಕ ಚಿನ್ನಾಭರಣ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ಬೆಳ್ಳಿ, ಚಿನ್ನಾಭರಣಗಳು ಇವೆ. ಇವೆಲ್ಲ ಬೆಲೆಬಾಳುವ ಅತ್ಯಮೂಲ್ಯ ವಸ್ತುಗಳಾದರೂ ಸಹಿತ ಪ್ರಯಾಣಿಕರು ಬಿಟ್ಟು ಹೋಗಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಟ್ರೋದಲ್ಲಿ ವಿದೇಶಿ ಕರೆನ್ಸಿ ಪತ್ತೆ
ಅನೇಕ ಮೌಲ್ಯಯುತ ವಸ್ತುಗಳ ಜೊತೆಗೆ US ಡಾಲರ್‌ಗಳು, ಸೌದಿ ರಿಯಾಲ್‌ಗಳು ಮತ್ತು ಥಾಯ್ ಬಹ್ತ್‌ನಂತಹ ವಿವಿಧ ವಿದೇಶಿ ಕರೆನ್ಸಿಗಳು ಮೆಟ್ರೋ ಸಿಬ್ಬಂದಿಗೆ ಸಿಕ್ಕಿವೆ. ಮೆಟ್ರೋ ನಿರ್ವಹಣೆ ವೇಳೆ ಒಟ್ಟು 24,550 ಮೊತ್ತದ ಬೇರೆ ಬೇರೆ ದೇಶಗಳ ಕರೆನ್ಸಿಗಲೂ ಲಭ್ಯವಾಗಿವೆ, ಇದು ಸಹ ನಗದು ಸಾಲಿಗೆ ಸೇರಿದೆ.
ಜೀವಂತ ಮದ್ದುಗುಂಡು, ಬಂದೂಕು ಮೆಟ್ರೋ ವಶಕ್ಕೆ
ಆಶ್ಚರ್ಯ ವಿಷಯವೆಂದರೆ ಭದ್ರತಾ ತಪಾಸಣೆಯ ಸಮಯದಲ್ಲಿ ವೇಳೆ 75 ಜೀವಂತ ಮದ್ದುಗುಂಡು ಕಾರ್ಟ್ರಿಡ್ಜ್ ಹಾಗೂ 07 ಬಂದೂಕನ್ನು ಸಿಬ್ಬಂದಿ ವಶಕ್ಕೆ ಪಡೆದಿದೆ. ಇದು ಭದ್ರತಾ ಪಡೆಗಳ ಅಜಾಗರೂಕತೆ, ಅತೀ ಗಂಭೀರ ಬೇಜವಾಬ್ದಾರಿ ಕುರಿತು ತಿಳಿಸುತ್ತೆ. ಇದು ಸೇರಿದಂತೆ ಆರೋಗ್ಯ ತಪಾಸಣೆಗೆ ಬಂದಾಗ ಸ್ಕ್ನಾನ್ ರಿಪೋರ್ಟ್, ಇತರ ಬಟ್ಟೆ ಬರೆಯಂತ ಶಾಪಿಂಗ್ ಇತರ ವಸ್ತುಗಳು ಜಪ್ತಿಯಾಗಿವೆ ಎಂದು ದೆಹಲಿ ಮೆಟ್ರೋ ಮಾಹಿತಿ ನೀಡಿದೆ.












Click it and Unblock the Notifications