12ನೇ ತರಗತಿ ಸಿಬಿಎಸ್‌ಇ ಫಲಿತಾಂಶ ಪ್ರಕಟ

Written By:
Subscribe to Oneindia Kannada

ನವದೆಹಲಿ, ಮೇ 23: ಸಿಬಿಎಸ್ ಇ ದ್ವಿತೀಯ ಪಿಯುಸಿಯ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್) ಫಲಿತಾಂಶ ಶನಿವಾರ ಪ್ರಕಟವಾಗಿದೆ. ಇಲ್ಲಿ ಸಹ ವಿದ್ಯಾರ್ಥಿಯರೇ ಹೆಚ್ಚಿನ ಸಾಧನೆ ಮಾಡಿದ್ದಾರೆ.

ಶೇ.85.58ರಷ್ಟು ವಿದ್ಯಾರ್ಥಿನಿಯರು ಶೇ.78.85ರಷ್ಟು ಹುಡುಗರು ಉತ್ತೀರ್ಣರಾಗಿದ್ದಾರೆ. ದೆಹಲಿಯ ಮಾಂಟ್ ಫೋರ್ಟ್ ಶಾಲೆಯ ಸುಕೃತಿ ಗುಪ್ತಾ 500ಕ್ಕೆ 497 ಅಂಕ ಪಡೆದು ಅಗ್ರ ಸ್ಥಾನ ತಮ್ಮದಾಗಿರಿಸಿಕೊಂಡಿದ್ದಾರೆ.[ಯುಪಿಎಸ್ಸಿ: ಕರ್ನಾಟಕದ ಸಾಧಕರಿಗೊಂದು ಅಭಿನಂದನೆ]

cbse

ಮೊದಲ ಮೂರು ಸ್ಥಾನಗಳನ್ನು ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದಾರೆ. ಪಲಕ್ ಗೋಯಲ್ ದ್ವಿತೀಯ ಸ್ಥಾನ ಪಡೆದರೆ, ಸೌಮ್ಯ ಉಪ್ಪಾಲ್ ಅವರು ತೃತೀಯ ಸ್ಥಾನ ಪಡೆದಿದ್ದಾರೆ.[ನಿಡ್ಡೋಡಿಯ ರೈತನ ಮಗಳು ಮಿಶಲ್ ಯುಪಿಎಸ್ಸಿ ಸಾಧಕಿ!]

ಕಳೆದ ವರ್ಷದ ಫಲಿತಾಂಶಕ್ಕಿಂತ ಈ ವರ್ಷ ಶೇ. 2.38ರಷ್ಟು ಹೆಚ್ಚು ಫಲಿತಾಂಶ ಬಂದಿದೆ. ಕಳೆದ ವರ್ಷ ಶೇ. 82ರಷ್ಟು ಬಂದಿತ್ತು. ಈ ಬಾರಿ ಫಲಿತಾಂಶ 83.05ರಷ್ಟು ಬಂದಿದೆ.

ಫಲಿತಾಂಶ ವೀಕ್ಷಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Delhi Girl Sukriti Gupta has topped the CBSE Class XII board exams with 99.4 per cent. Gupta, a student of Montfort School, Ashok Vihar, scored 497 marks out of 500. At second position is Palak Goel from Tagore Public School in Kurukshetra, Haryana with 496 marks.
Please Wait while comments are loading...