Delhi Assembly Election 2025: ಆದಾಯ ತೆರಿಗೆ ಮಿತಿ ಹೆಚ್ಚಳ, ದೆಹಲಿ ಚುನಾವಣೆಯಲ್ಲಿ ಲಾಭ

ನವದೆಹಲಿ, ಫೆಬ್ರವರಿ 01: ದೆಹಲಿ ವಿಧಾನಸಭೆ ಚುನಾವಣೆ-2025ಕ್ಕೂ ಮೊದಲು ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.

ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ 12 ಲಕ್ಷ ರೂ. ತನಕ ಯಾವುದೇ ತೆರಿಗೆ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ದೆಹಲಿ ವಿಧಾನಸಭೆ ಚುನಾವಣೆಗೂ ಮೊದಲು ಮಾಡಿರುವ ಈ ಘೋಷಣೆ ಬಿಜೆಪಿಗೆ ಚುನಾವಣೆಯಲ್ಲಿ ಹೇಗೆ ಸಹಾಯಕವಾಗಲಿದೆ? ಎಂದು ಈಗ ಲೆಕ್ಕಾಚಾರ ಹಾಕಲಾಗುತ್ತಿದೆ.

Delhi Elections 2025 Will Budget Income Tax Cuts Win Middle Class Votes For BJP

ಆದಾಯ ತೆರಿಗೆ ವಿನಾಯಿತಿ ಘೋಷಣೆ ದೇಶದ ಮಧ್ಯಮ ವರ್ಗ, ವೇತನದಾರರಿಗೆ ಬಹುದೊಡ್ಡ ರಿಲೀಫ್ ನೀಡಿದೆ. ಇದು ಮತದಾರರ ಮೇಲೆ ಹೇಗೆ ಪ್ರಭಾವ ಬೀರಲಿದೆ. 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಗೆ ಅಧಿಕಾರ ತಂದುಕೊಡಲಿದೆಯೇ? ಎಂಬ ಚರ್ಚೆಗಳು ಆರಂಭವಾಗಿದೆ.

ಮಧ್ಯಮ ವರ್ಗದ ಮೇಲೆ ಗಮನ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಹಿಡಿದು ಎಎಪಿ ಸಂಸ್ಥಾಪಕ ಅರವಿಂದ ಕೇಜ್ರಿವಾಲ್ ತನಕ ಎಲ್ಲರೂ ಮಧ್ಯಮ ವರ್ಗದ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಆದ್ದರಿಂದ ಫೆಬ್ರವರಿ 5ರ ಬಜೆಟ್‌ನಲ್ಲಿ ಜನರು ಯಾರ ಪರವಾಗಿ ತೀರ್ಪು ನೀಡಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಶುಕ್ರವಾರ 2025ರ ಸಂಸತ್ ಬಜೆಟ್ ಅಧಿವೇಶನದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, "ತಾಯಿ ಮಹಾಲಕ್ಷ್ಮೀ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಶೀರ್ವಾದ ಮಾಡಲಿ. ಅವರಿಗೆ ಒಳ್ಳೆಯದು ಮಾಡಲಿ" ಎಂದು ಹೇಳಿದ್ದರು.

ಸಂಸತ್ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಸುಮಾರು 8 ಬಾರಿ ಮಧ್ಯಮ ವರ್ಗದ ಜನರ ಬಗ್ಗೆ ಮಾತನಾಡಿದ್ದರು. ಎಎಪಿ ಮುಖ್ಯಸ್ಥ, ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಮಧ್ಯಮ ವರ್ಗದ ಜನರ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ಮಧ್ಯಮ ವರ್ಗದ ಜನರಿಗಾಗಿಯೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು.
ಈ ಪ್ರಣಾಳಿಕೆಯಲ್ಲಿಯೂ ಆದಾಯ ತೆರಿಗೆ ಮಿತಿ ಹೆಚ್ಚಿಸುವ ಪ್ರಸ್ತಾವನೆಗಾಗಿ ಬೇಡಿಕೆ ಇಡಲಾಗಿತ್ತು.

ದೆಹಲಿಯಲ್ಲಿ ಎಎಪಿ ಮಧ್ಯಮ ವರ್ಗದ ಮತಗಳನ್ನು ಭದ್ರಪಡಿಸಿಕೊಂಡಿದೆ. ಅದರಲ್ಲೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ಕೊಟ್ಟಿದ್ದ ಪಕ್ಷ ಮಧ್ಯಮ ವರ್ಗವನ್ನು ಸೆಳೆಯುವಲ್ಲಿ ಸಫಲವಾಗಿತ್ತು. 2020ರಲ್ಲಿ ಆಡಳಿತಕ್ಕೆ ಬಂದ ಬಳಿಕ ಬಡ ಮತ್ತು ಮಧ್ಯಮ ವರ್ಗದ ಜನರಿಗಾಗಿ ಹಲವು ಯೋಜನೆ ಜಾರಿಗೊಳಿಸಿ ಪಕ್ಷ ಅವರ ಬೆಂಬಲವನ್ನು ಗಳಿಸುವ ಪ್ರಯತ್ನ ನಡೆಸಿದೆ.

ಸದ್ಯದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ, ಎಎಪಿ ನಡುವೆ ದೆಹಲಿಯಲ್ಲಿ ನೇರ ಪೈಪೋಟಿ ಇದೆ. ಅದರಲ್ಲೂ ಈ ಎರಡು ಪಕ್ಷಗಳು ಬಡ, ಮಧ್ಯಮ ವರ್ಗದ ಮತಗಳನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಆದರೆ ಯಾರಿಗೆ ಚುನಾವಣೆಯಲ್ಲಿ ಜಯ ಸಿಗಲಿದೆ? ಎಂಬುದು ಫೆಬ್ರವರಿ 8ರಂದು ಬಹಿರಂಗವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+