Delhi Election Results 2025: ದೆಹಲಿ ಚುನಾವಣೆ ಮತ ಎಣಿಕೆ- ಗುಡಿಸುವುದರಲ್ಲಿ ಹಿಂದೆ ಉಳಿದ ಪೊರಕೆ
ದೆಹಲಿ ಜನವರಿ 8: ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭವಾಗಿದೆ. ಆರಂಭಿಕ ಹಂತದ ಮತ ಎಣಿಕೆಯಲ್ಲಿ 33 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದರೆ, ಎಎಪಿ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನೂ ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಿ ಮುನ್ನಡೆದಿದೆ. ಈ ಮಾಹಿತಿ ಬೆಳಗ್ಗೆ 9 ಗಂಟೆಗೂ ಮುನ್ನ ಸಂಗ್ರಹವಾದ ಮಾಹಿತಿಯಾಗಿದೆ.
ದೆಹಲಿ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು ಇಂದು (ಫೆಬ್ರವರಿ 8) ಮತ ಎಣಿಕೆ ಕಾರ್ಯ ಆರಂಭವಾಗಿದೆ. ಆರಂಭಿಕ ಹಂತದ ಫಲಿತಾಂಶ ಎಎಪಿಗೆ ಭಾರೀ ಆಘಾತವನ್ನುಂಟು ಮಾಡಿದ್ದು, ಬಿಜೆಪಿಗೆ ಹೊಸ ಉತ್ಸಾಹ ನೀಡುತ್ತಿದೆ. ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಅಂದರೆ ಬಿಜೆಪಿ ಬಹುಮತದ ಗಡಿ ದಾಟುತ್ತಿದೆ. ದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ ಮನೆ ಮಾಡಿದೆ.

ನವದೆಹಲಿ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ (ಎಎಪಿ) ಅರವಿಂದ್ ಕೇಜ್ರಿವಾಲ್, ಕಲ್ಕಾಜಿ ಸ್ಥಾನದಿಂದ ಅತಿಶಿ, ಜಂಗ್ಪುರದಿಂದ ಮನೀಶ್ ಸಿಸೋಡಿಯಾ ಮತ್ತು ಪತ್ಪರ್ಗಂಜ್ ನಿಂದ ಅವಧ್ ಓಜಾ ಹಿನ್ನಡೆಯಲ್ಲಿದ್ದಾರೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ದೆಹಲಿಯಲ್ಲಿ ಯಾರ ಸರ್ಕಾರ ರಚನೆಯಾಗುತ್ತದೆ ಎಂಬುದು ಸ್ಪಷ್ಟವಾಗಲಿದೆ.
ದೆಹಲಿ ವಿಧಾನಸಭಾ ಚುನಾವಣೆ
ಫೆಬ್ರವರಿ 5 ರಂದು ದೆಹಲಿಯ 70 ಸ್ಥಾನಗಳಿಗೆ ಶೇಕಡ 60.54ರಷ್ಟು ಮತದಾನ ನಡೆಯಿತು. 14 ಎಕ್ಸಿಟ್ ಪೋಲ್‌ಗಳು ಬಂದವು. ಸಮೀಕ್ಷೆಗಳು ಬಿಜೆಪಿ 12 ಕ್ಷೇತ್ರಗಳಲ್ಲಿ ಮತ್ತು ಕೇಜ್ರಿವಾಲ್ 2 ಕ್ಷೇತ್ರಗಳಲ್ಲಿ ಸರ್ಕಾರ ರಚಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದವು. ಮತ ಎಣಿಕೆಗೂ ಮೊದಲು ದೆಹಲಿ ಮುಖ್ಯಮಂತ್ರಿ ಮತ್ತು ಕಲ್ಕಾಜಿಯ ಎಎಪಿ ಅಭ್ಯರ್ಥಿ ಅತಿಶಿ, "ಇದು ಸಾಮಾನ್ಯ ಚುನಾವಣೆಯಲ್ಲ, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಹೋರಾಟ. ದೆಹಲಿಯ ಜನರು ಎಎಪಿ ಮತ್ತು ಕೇಜ್ರಿವಾಲ್ ಜೊತೆ ನಿಂತಿದ್ದಾರೆ. ಕೇಜ್ರಿವಾಲ್ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ" ಎಂದು ಹೇಳಿದರು.
ಆದರೆ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುತೇಕ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಚುನಾವಣೋತ್ತರ ಸಮೀಕ್ಷೆಯಲ್ಲಿಯೂ ಬಿಜೆಪಿಗೆ ಈ ಬಾರಿ ದೆಹಲಿಯಲ್ಲಿ ಜಯ ಸಿಗಲಿದೆ ಎನ್ನಲಾಗಿತ್ತು. ಬಹುತೇಕ ಸಮೀಕ್ಷೆಗಳು ಇದೇ ಭವಿಷ್ಯವನ್ನು ನುಡಿದಿದ್ದವು.
ಜೊತೆಗೆ ಆರಂಭಿಕ ಹಂತದ ಮತದಾನ ಫಲಿತಾಂಶದಲ್ಲೂ ಇದೇ ಫಲಿತಾಂಶ ಹೊರಬಂದಿದ್ದು, ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಲು ಶುರು ಮಾಡಿದ್ದಾರೆ. ಕಳೆದ ಚುನಾವಣೆಗಳಲ್ಲಿ ಸಮೀಕ್ಷೆಗಳು ನುಡಿದ ಭವಿಷ್ಯ ನಿಜವಾಗಿರಲಿಲ್ಲ. ಪ್ರತಿಷ್ಠಿತ ಕಂಪನಿಗಳಿಂದ ನಡೆದ ಸಮೀಕ್ಷೆಗಳು ಬಿಜೆಪಿಗೆ ಗೆಲುವು ಖಚಿತ ಎಂದು ಹೇಳಿದ್ದವು. ಆದರೆ ಕಳೆದ ಎರಡು ಬಾರಿ ಎಎಪಿ ಭರ್ಜರಿ ಮತದಾನದ ಮೂಲಕ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಬೀಗಿತ್ತು.
ಈ ಬಾರಿಗೂ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ನಿಜವಾಗುವುದಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶ ಈ ಬಾರಿ ನಿಜವಾಗುವಂತೆ ಕಾಣಿಸುತ್ತಿದೆ. ಈ ಬಾರಿ ಭಾರತೀಯ ಜನತಾ ಪಕ್ಷ ದೆಹಲಿ ಅಧಿಕಾರದ ಗದ್ದುಗೆಗೆ ಏರುವುದು ಖಚಿತ ಎನ್ನುವ ಲಕ್ಷಣಗಳು ಕಾಣಿಸುತ್ತಿವೆ.












Click it and Unblock the Notifications