Delhi Election Exit Poll 2025: ದೆಹಲಿಯಲ್ಲಿ 'ಕಾಂಗ್ರೆಸ್‌'ಗೆ ಕೈಕೊಟ್ಟ ಮತದಾರ, ಹ್ಯಾಟ್ರಿಕ್ ಸೋಲು

ದೆಹಲಿ, ಫೆಬ್ರವರಿ 05: ದೆಹಲಿಯ ವಿಧಾನಸಭಾ ಚುನಾವಣೆಗೆ ತೆಗೆ ಬಿದ್ದಿದ್ದು, ಅಧಿಕೃತ ಫಲಿತಾಂಶ ಹೊರ ಬೀಳುವುದು ಮಾತ್ರವೇ ಬಾಕಿ ಇದೆ. ಸದ್ಯ ಎಕ್ಸಿಟ್‌ ಪೋಲ್ ಫಲಿತಾಂಶಗಳು ಪ್ರಕಟವಾಗಿದ್ದು, ಕಾಂಗ್ರೆಸ್ ಮೂಲೆಗುಂಪಾಗಿದೆ. ದಶಕಗಳ ಕಾಲ ದೇಶವಾಳಿದ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್ ಅನ್ನು ಜನ 'ಕೈ' ಬಿಟ್ಟಿದ್ದಾರೆ. ಕೆಲವರು ಎಎಪಿ ಪರ, ಬಹುತೇಕರು ಬಿಜೆಪಿ ಪರವಾಗಿದ್ದಾರೆ ಎಂದು ಇಂದಿನ ಎಕ್ಸಿಟ್ ಪೋಲ್ ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್‌ ಐತಿಹಾಸಿಕ, ಹ್ಯಾಟ್ರಿಕ್ ಹಿನ್ನಡೆ ಅನುಭವಿಸಿದೆ. ಕೇವಲ 2 ಸೀಟು ಪಡೆಯಲು ಹರಸಾಹಸ ಪಟ್ಟಿದೆ ಎಂಬುದು ಗೊತ್ತಾಗುತ್ತಿದೆ.

ಈ ಬಾರಿ ಆಡಳಿತಾರೂಢ ಎಎಪಿಗೂ ಹಿನ್ನಡೆಯಾಗುವ ಸಾಧ್ಯತೆ ಇದ್ದು, ಬಿಜೆಪಿ ಪರ ಮತದಾರರು ಮನ ಸೋತಿದ್ದಾರೆ. ದೆಹಲಿಯಲ್ಲಿ ಈ ಬಾರಿ ಕಮಲ ಅರಳುವುದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಭರವಸೆ ನೀಡಿ ಗೆದ್ದಿದ್ದ ಕಾಂಗ್ರೆಸ್‌ ಅನ್ನು ಮೂಲೆಗುಂಪು ಮಾಡಿದ್ದಾರೆ. ಗ್ಯಾರಂಟಿಗೆ ಮನಸೋತಿಲ್ಲ.

Delhi Election Exit Poll Result 2025 Congress Faces Major Defeat

ಕರ್ನಾಟಕ, ತೆಲಂಗಾಣ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಮಾಸಿಕ ಹಣ, ಉಚಿತ ಅಕ್ಕಿ, ಬಸ್ ಪ್ರಯಾಣ ಸೇರಿದಂತೆ ಅನೇಕ ಭರವಸೆ ನೀಡಿತ್ತು. ಅಲ್ಲಿ ಅಧಿಕಾರಕ್ಕೆ ಬಂದಿತ್ತು. ಈ ಗ್ಯಾರಂಟಿ ಪ್ಲಾನ್‌ಗಳು ದೆಹಲಿ ಮಟ್ಟಿಗೆ ವರ್ಕೌಟ್ ಆಗಿಲ್ಲ.

2015 ಮತ್ತು 2020ರ ಕಳೆದ ಎರಡು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸೀಟು ಗೆಲ್ಲದೇ ತೀವ್ರ ಮುಖಭಂಗ ಅನುಭವಿಸಿದ್ದ ರಾಷ್ಟ್ರೀಯ ಕಾಂಗ್ರೆಸ್ ಇದೀಗ ಹೀನಾಯ ಸೋಲು ಕಂಡಿದೆ. 70 ಸೀಟುಗಳಲ್ಲಿ ಒಂದಂಕಿ ಸಂಖ್ಯೆಯ ಸೀಟು ಗೆಲ್ಲಲು ಹಿಂದೆ ಮುಂದೆ ನೋಡುತ್ತಿದೆ.

ಮುಖ್ಯವಾಗಿ ದೆಹಲಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಭ್ಯರ್ಥಿಯೇ ಇಲ್ಲ. ಹೀಗಿದ್ದರೂ ಗ್ಯಾರಂಟಿ ಆಧಾರವಾಗಿಟ್ಟುಕೊಂಡು ಎಎಪಿ ಜೊತೆ ಮೈತ್ರಿ ಇಲ್ಲದೇ ಪ್ರತ್ಯೇಕವಾಗಿ ನಿಂತ ಕಾಂಗ್ರೆಸ್‌ ಅನ್ನು ಜನರು ತಿರಸ್ಕರಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ, ಉಪಚುನಾವಣೆಯಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್ ಭರವಸೆಗಳಿಗೆ ಮತದಾರರು ಮರಳಾಗಿಲ್ಲ. ಬದಲಾಗಿ ಬಿಜೆಪಿಯತ್ತ ಒಲವು ವ್ಯಕ್ತಪಡಿಸಿದ್ದಾರೆ ಎಂದು ಇಂದಿನ ಎಕ್ಸಿಟ್ ಪೋಲ್‌ ಸಮೀಕ್ಷೆಗಳಿಂದ ತಿಳಿದು ಬಂದಿದೆ.

ದೆಹಲಿಯಲ್ಲಿ ಇಂದು 57ರಷ್ಟು ಮತದಾನ ಆಗಿದೆ. ಫೆಬ್ರವರಿ 8ರಂದು ಕೇಂದ್ರ ಚುನಾವಣೆ ಆಯೋಗದಿಂದ ಅಧಿಕೃತ ಚುನಾವಣೆ ಫಲಿತಾಂಶ ಬಿಡುಗಡೆ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+