ದೆಹಲಿಯಲ್ಲಿ ಹೆಚ್ಚಾದ ಚಳಿ: ಎಲ್ಲೆಡೆ ದಟ್ಟ ಮಂಜು- ವಾಹನ ಸವಾರರ ಪರದಾಟ

ಹೊಸದಿಲ್ಲಿ ಡಿಸೆಂಬರ್ 27: ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಬೆಳಗಿನ ಜಾವ ಹಾಗೂ ಸಂಜೆ ದಟ್ಟ ಮಂಜು ಆವರಿಸಿಕೊಳ್ಳುತ್ತಿದೆ. ಇದರಿಂದಾಗಿ ಗೋಚರತೆ ತೀವ್ರ ಕಡಿಮೆಯಾಗಿದೆ. ವಾಹನ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದೆ. ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು, ಶೀತ ಅಲೆಯು ಉತ್ತರ ಭಾರತದಲ್ಲಿ ಬೀಸಿದೆ. ಕನಿಷ್ಠ ತಾಪಮಾನವು ಋತುವಿನ ಸಾಮಾನ್ಯಕ್ಕಿಂತ ಸುಮಾರು 3 ಡಿಗ್ರಿಗಳಷ್ಟು ಕಡಿಮೆಯಾಗಿದೆ.

ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲೂ ದಟ್ಟವಾದ ಮತ್ತು ಅತ್ಯಂತ ದಟ್ಟವಾದ ಮಂಜು ಸ್ಥಿತಿಗಳನ್ನು ವರದಿಯಾಗಿವೆ. ಹೀಗಾಗಿ ದೆಹಲಿಯ ಮಂಜು ತುಂಬಿದ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಚಲಿಸಲು ಹಾಗೂ ವೇಗವನ್ನು ಕಡಿಮೆಗೊಳಿಸಲು ಸೂಚಿಸಲಾಗಿದೆ. ದೆಹಲಿಯಲ್ಲಿ ಇಂದು ಭೀಕರ ಪರಿಸ್ಥಿತಿ ಎದುರಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Delhi Cold: Thick fog everywhere - motorists stranded

"ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ಶೀತ ದಿನ/ತೀವ್ರ ಶೀತ ದಿನದ ಪರಿಸ್ಥಿತಿಗಳು ಮತ್ತು ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ 2022ರ ಡಿಸೆಂಬರ್ 26 ಮತ್ತು 27 ರಂದು ಅಧಿಕ ಶೀತ ದಿನದ ಪರಿಸ್ಥಿತಿಗಳು ಉಂಟಾಗುತ್ತವೆ" ಎಂದು ಐಎಂಡಿ ತನ್ನ ಬುಲೆಟಿನ್‌ನಲ್ಲಿ ನಿನ್ನೆ ಸಂಜೆ ತಿಳಿಸಿದೆ.

Delhi Cold: Thick fog everywhere - motorists stranded

"ಲಘು ಗಾಳಿ ಮತ್ತು ಕಡಿಮೆ ಉಷ್ಣವಲಯದ ಮಟ್ಟದಲ್ಲಿ ಹೆಚ್ಚಿನ ತೇವಾಂಶದ ಕಾರಣ, ಮುಂದಿನ 48 ಗಂಟೆಗಳಲ್ಲಿ ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿ ಮತ್ತು ಪಶ್ಚಿಮ ರಾಜಸ್ಥಾನದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಮುಂದುವರಿಯುವ ಸಾಧ್ಯತೆಯಿದೆ" ಎಂದು IMD ತಿಳಿಸಿದೆ. ಆದರೆ ಇನ್ನೂ ದೆಹಲಿಯ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ವರ್ಗವಾಗಿ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+