Delhi Blast Case: ದೆಹಲಿ ಸ್ಫೋಟ ಪ್ರಕರಣ ಕುರಿತು ಉತ್ತರ ವಲಯದ ಡಿಸಿಪಿ ಹೇಳಿದ್ದಿಷ್ಟು
Delhi Blast Case: ದೆಹಲಿ ಸ್ಫೋಟ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಇದು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಕುರಿತು ಉತ್ತರ ವಲಯದ ಡಿಸಿಪಿ ರಾಜಾ ಬಂಥಿಯಾ ಅವರು ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಅವರು ಏನು ಹೇಳಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
"ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಯುಎಪಿಎ, ಸ್ಫೋಟಕ ಕಾಯ್ದೆ ಮತ್ತು ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎನ್‌ಎಸ್‌ಜಿ, ದೆಹಲಿ ಪೊಲೀಸ್ ಮತ್ತು ಎಫ್‌ಎಸ್‌ಎಲ್‌ನ ತಂಡಗಳು ಸ್ಥಳದಲ್ಲಿ ಪರಿಶೀಲನೆ ಮುಂದುವರೆಸಿವೆ. ಸ್ಫೋಟ ಸಂಭವಿಸಿದ ಕಾರಿನೊಳಗೆ ಕೆಲವು ಶರೀರದ ಅವಶೇಷಗಳು ಪತ್ತೆಯಾಗಿವೆ. ಎಫ್‌ಎಸ್‌ಎಲ್ ತಂಡವು ಅವುಗಳನ್ನು ಸಂಗ್ರಹಿಸುತ್ತಿದ್ದು, ಅವು ಹೇಗೆ ಸಂಪರ್ಕ ಹೊಂದಿವೆ ಎಂಬುದನ್ನು ನೋಡೋಣ," ಎಂದು ತಿಳಿಸಿದ್ದಾರೆ.

"ದೆಹಲಿ ಸ್ಫೋಟ ಪ್ರಕರಣ ಕುರಿತು ಪ್ರಸ್ತುತ ತನಿಖೆ ನಡೆಯುತ್ತಿದೆ. ಈಗ ಯಾವುದೇ ವಿಷಯದ ಕುರಿತು ಅಂತಿಮವಾಗಿ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಎಫ್‌ಎಸ್‌ಎಲ್ ತಂಡವು ಸ್ಫೋಟದ ಗುರುತುಗಳನ್ನು ಸಂಗ್ರಹಿಸುತ್ತಿದೆ. ನಾವು ಅಪರಾಧ ಸ್ಥಳವನ್ನು ಪರಿಶೀಲಿಸುತ್ತಿದ್ದೇವೆ," ಎಂದು ಉತ್ತರ ವಲಯದ ಡಿಸಿಪಿ ರಾಜಾ ಬಂಥಿಯಾ ಅವರು ಹೇಳಿದರು.












Click it and Unblock the Notifications