'ಬುಲೆಟ್ ಪ್ರೂಫ್ ಕಾರಿನಲ್ಲಿ ಭಾರತ್ ಜೋಡೋ ಯಾತ್ರೆ ಸಾಧ್ಯವಿಲ್ಲ' ರಾಹುಲ್ ಗಾಂಧಿ
ನವದೆಹಲಿ ಡಿಸೆಂಬರ್ 31: ದೆಹಲಿಯಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು ಭದ್ರತಾ ಲೋಪವಾಗಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆ ಸ್ವತಃ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ. ಬುಲೆಟ್ ಪ್ರೂಫ್ ಕಾರಿನಲ್ಲಿ ನಾನು ಭಾರತ್ ಜೋಡೋ ಯಾತ್ರೆಯನ್ನು ಮಾಡಬೇಕೆಂದು ಸರ್ಕಾರ ಬಯಸುತ್ತದೆ, ನಾನು ಅದನ್ನು ಹೇಗೆ ಮಾಡಬಹುದು? ಇದು ಪಾದಯಾತ್ರೆ. ಬುಲೆಟ್ ಪ್ರೂಫ್ ಕಾರಿನಲ್ಲಿ ಯಾತ್ರೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಆಡಳಿತಾರೂಢ ಬಿಜೆಪಿ ಸರ್ಕಾರದ ನಾಯಕರು ಬುಲೆಟ್ ಪ್ರೂಫ್ ಕಾರುಗಳನ್ನು ದೂರವಿಟ್ಟ ಘಟನೆಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಪೊಲೀಸ್ ಪಡೆ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದ್ದಾರೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ' ಎಂದು ಹೇಳಿದರು.

ಪಾದಯಾತ್ರೆ ಭಾರತದ ಭಾವನೆಗಳನ್ನು ಪ್ರತಿನಿಧಿಸುತ್ತದೆ. ನಮಗೆ ಬಹಳಷ್ಟು ಕಲಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
LIVE: Media Interaction | AICC HQ, Delhi | #BharatJodoYatra https://t.co/bQL6dvG89g
— Bharat Jodo (@bharatjodo) December 31, 2022
ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ 150 ದಿನಗಳ ಯಾತ್ರೆಯ ಬಗ್ಗೆ ಮಾತನಾಡುತ್ತಾ ರಾಹುಲ್ ಗಾಂಧಿ ಅವರು, "ನಾನು ಮೆರವಣಿಗೆಯನ್ನು ಪ್ರಾರಂಭಿಸಿದಾಗ, ನಾನು ಯಾವುದೇ ಪೂರ್ವಾಗ್ರಹವನ್ನು ಹೊಂದಿರಲಿಲ್ಲ. ನಾನು ಪ್ರಯಾಣವನ್ನು ಅನುಭವಿಸಲು ಹೋಗಿದ್ದೆ. ದಿನಗಳು ಕಳೆದಂತೆ, ಇದು ಕೇವಲ ಪಾದಯಾತ್ರೆಗಿಂತ ಹೆಚ್ಚಿನದಾಗಿದೆ ಎಂದು ನಾನು ಅರಿತುಕೊಂಡೆ. ಅದು ಜೀವಂತ ಜೀವಿಯಂತೆ ಭಾವನೆಗಳನ್ನು ಹೊಂದಿತ್ತು. ಇದು ಭಾರತವನ್ನು ಪ್ರತಿನಿಧಿಸುತ್ತದೆ. ಭಾವನೆಗಳು ಮತ್ತು ನಾನು ಊಹಿಸಿದ್ದಕ್ಕಿಂತ ಹೆಚ್ಚಿನದನ್ನು ನನಗೆ ಕಲಿಸಿದೆ "ಎಂದು ಹೇಳಿದರು.
ಮುಂಬರುವ 2024 ರ ಚುನಾವಣೆಯಲ್ಲಿ, "ಪ್ರತಿಪಕ್ಷಗಳು ಒಗ್ಗಟ್ಟಾಗಿ ನಿಂತರೆ, ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ, ಪ್ರತಿಪಕ್ಷಗಳು ಪರ್ಯಾಯ ದೃಷ್ಟಿಕೋನದಿಂದ ಜನರ ಬಳಿಗೆ ಹೋಗಬೇಕು. ಆದರೆ ಇದೀಗ ಬಿಜೆಪಿ ವಿರುದ್ಧ ಭಾರೀ ವಿರೋಧವಿದೆ. ಇದರಿಂದ ಬಿಜೆಪಿಗೆ ಅದು ಸಾಧ್ಯವಾಗುತ್ತಿಲ್ಲ. ನನ್ನ ಗಮನವು ದ್ವೇಷ ಮತ್ತು ಕೋಪದ ವಿರುದ್ಧ ಹೋರಾಡುವುದು" ಎಂದು ಹೇಳಿದರು.











Click it and Unblock the Notifications