Delhi Election Results 2025: ದೆಹಲಿಯಲ್ಲಿ ಕಮಲ ಕಮಾಲ್- ಇವರೇ ಮುಂದಿನ ದೆಹಲಿ ದೊರೆ
ದೆಹಲಿ ಜನವರಿ 8: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ. ಆರಂಭಿಕ ಹಂತದ ಮತ ಎಣಿಕೆಯ ಫಲಿತಾಂಶ ನೋಡುವುದಾದರೆ ದೆಹಲಿಯಲ್ಲಿ ಬಿಜೆಪಿ ಗೆಲುವು ಖಚಿತವಾಗಿದೆ. 70 ದೆಹಲಿ ವಿಧಾನಸಭಾ ಕ್ಷೇತ್ರಗಳಲ್ಲಿ 50 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಫಲಿತಾಂಶದಂತೆ ಬಿಜೆಪಿ ಗೆಲುವು ಸಾಧಿಸಿದರೆ ದೆಹಲಿಯ ಮುಂದಿನ ಸಿಎಂ ಯಾರು? ಯಾರಿದ್ದಾರೆ ಸಿಎಂ ರೇಸ್‌ನಲ್ಲಿ ಎಂದು ತಿಳಿಯೋಣ.
ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೇರುತ್ತಿರುವುದು ಕಾರ್ಯಕರ್ತರಲ್ಲಿ ಸಂತಸ ತಂದಿದೆ. ಕೇಂದ್ರದಲ್ಲಿ ಹಾಗೂ ರಾಷ್ಟ್ರ ರಾಜಧಾನಿಯಲ್ಲೂ ಬಿಜೆಪಿ ಅಧಿಕಾರದಲ್ಲಿ ಇದ್ದಂತಾಗುತ್ತದೆ. ಹಾಗಾದರೆ ರಾಷ್ಟ್ರರಾಜಧಾನಿಯಲ್ಲಿ ಬಿಜೆಪಿಯಿಂದ ಯಾರು ಸಿಎಂ ಆಗಲಿದ್ದಾರೆ? ಸಿಎಂ ರೇಸ್‌ನಲ್ಲಿ ಮುಂಚುಣಿಯಲ್ಲಿರುವವರು ಯಾರು?

* ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ದೆಹಲಿ ಸಿಎಂ ರೇಸ್‌ನಲ್ಲಿ ಪ್ರಮುಖರು. ಇವರು ಬಿಜೆಪಿಯ ಪ್ರಮುಖ ನಾಯಕ ಮತ್ತು ಪ್ರಭಾವಿ ಆಗಿದ್ದಾರೆ. ಇವರಿಗೆ ದೆಹಲಿಯಲ್ಲಿ ಸಿಎಂ ಆಗುವ ಅವಕಾಶ ಸಿಗುವ ಸಾಧ್ಯತೆ ಇದೆ.
* ಇನ್ನೂ ಮನೋಜ್ ತಿವಾರಿ. ಇವರು ಸತತ ಮೂರನೇ ಬಾರಿಗೆ ಈಶಾನ್ಯ ದೆಹಲಿಯಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಬಿಜೆಪಿ ಜಯ ಗಳಿಸಿದರೆ ಇವರು ಸಿಎಂ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ.
* ನವದೆಹಲಿಯ ಸಂಸದೆ ಮತ್ತು ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸುರಿ ಸ್ವರಾಜ್ ಅವರು ದೆಹಲಿ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ.

* ಮಾಜಿ ಕೇಂದ್ರ ಸಚಿವೆ ಮತ್ತು ಪ್ರಸಿದ್ಧ ನಾಯಕಿ ಸ್ಮೃತಿ ಇಆರಾನಿ ಅವರು ಕೂಡ ದೆಹಲಿ ಸಿಎಂ ರೇಸ್‌ನಲ್ಲಿ ಇದ್ದಾರೆ.
* ಹಿರಿಯ ಬಿಜೆಪಿ ನಾಯಕಿ ಮತ್ತು ಪ್ರಭಾವಿ ಭಾಷಣಕಾರರಾದ ಮೀನಾಕ್ಷಿ ಲೇಖಿ ಈ ರೇಸ್‌ನಲ್ಲಿ ಇದ್ದು ಬಿಜೆಪಿ ಮಹಿಳೆಯರನ್ನು ಸಿಎಂ ಮಾಡುವ ಸಾಧ್ಯತೆ ಇದೆ.
ಹೌದು... ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ತೆರೆಮರೆಯಲ್ಲಿ ಸಿಎಂ ಸ್ಥಾನಕ್ಕಾಗಿ ಲಾಭಿ ಶುರುವಾಗಿದೆ. ಈಗಾಗಲೇ ಆಸಕ್ತ ಅಭ್ಯರ್ಥಿಗಳು ಸಿಎಂ ಸ್ಥಾನ ತಮ್ಮ ತೆಕ್ಕೆಗೆ ಪಡೆಯಲು ತಯಾರಿ ಶುರು ಮಾಡಿದ್ದಾರೆ. ಒಟ್ಟಿನಲ್ಲಿ ಸಿಎಂ ರೇಸ್‌ನಲ್ಲಿ ಇರುವ ಅಭ್ಯರ್ಥಿಗಳ ಪೈಕಿ ಮಹಿಳೆಯರಿಗೆ ಈ ಬಾರಿ ಸಿಎಂ ಸ್ಥಾನ ನೀಡಲಾಗುತ್ತದೆ ಎನ್ನುವ ಮಾತುಗಳೂ ಕೇಳಿ ಬಂದಿವೆ. ಇದೆಲ್ಲದಕ್ಕೂ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ತಿಳಿದು ಬರಲಿದೆ.












Click it and Unblock the Notifications