Delhi Assembly Election 2025: ದೆಹಲಿ ಚುನಾವಣೆ: "ಪಂಜಾಬ್" ಮೂಲಕ ಎಎಪಿಗೆ ಚೆಕ್‌ಮೆಟ್ ಕೊಟ್ಟ ಬಿಜೆಪಿ!
ದೆಹಲಿಯಲ್ಲಿ ಎಎಪಿ ಹೊಸ.. ಹೊಸ ಹಾಗೂ ಭರ್ಜರಿ ಭರವಸೆಗಳನ್ನು ಕೊಡುತ್ತಿದೆ. ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಎಎಪಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಭರವಸೆಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಆದರೆ ದೆಹಲಿಯ ಚುನಾವಣೆಯಲ್ಲಿ ಭರವಸೆ ಕೊಡುವುದಕ್ಕಿಂತ ಮುಂಚೆ ನೀವು ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿ ಅಂತ ಬಿಜೆಪಿಯು ಎಎಪಿಗೆ ಸವಾಲು ಹಾಕಿದೆ. ದೆಹಲಿ ಹಾಗೂ ಪಂಜಾಬ್ ಎರಡೂ ರಾಜ್ಯಗಳಲ್ಲೂ ಆಮ್ ಆದ್ಮಿ ಪಕ್ಷವು (ಎಎಪಿ) ಅಧಿಕಾರದಲ್ಲಿ ಇದೆ. ಆದರೆ ಪಂಜಾಬ್‌ನಲ್ಲಿ ಅಧಿಕಾರಕ್ಕೇರುವ ಮುಂಚೆ ನೀಡಲಾಗಿದ್ದ ಭರವಸೆಗಳನ್ನೇ ಈಡೇರಿಸಿಲ್ಲ. ಈ ರೀತಿ ಇರುವಾಗ ದೆಹಲಿಯಲ್ಲಿ ಮತ್ತೆ ಹೊಸ ಭರವಸೆಗಳನ್ನು ಕೊಡುವುದರಲ್ಲಿ ಏನು ಅರ್ಥವಿದೆ ಅಂತ ಬಿಜೆಪಿ ಪಕ್ಷವು ಎಎಪಿ ಪಕ್ಷವನ್ನು ಪ್ರಶ್ನೆ ಮಾಡಿದೆ.
ದೆಹಲಿಯಲ್ಲಿ ಮುಂದಿನ ತಿಂಗಳು ಫೆಬ್ರವರಿ 5ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ದೆಹಲಿ ವಿಧಾನಸಭೆ ಚುನಾವಣೆಗಿಂತ ಮುಂಚೆ ನೀವು ಪಂಜಾಬ್‌ನಲ್ಲಿ ಕೊಟ್ಟಿರುವ ಭರವಸೆಗಳನ್ನು ಈಡೇರಿಸಿ ಅಂತ ಕೇಂದ್ರ ರೈಲ್ವೆ ರಾಜ್ಯ ಸಚಿವ ರವನೀತ್ ಸಿಂಗ್ ಅವರು ಆಗ್ರಹಿಸಿದ್ದಾರೆ. ಪಂಜಾಬ್‌ನಲ್ಲಿ ಎಎಪಿ ಯಾವ ರೀತಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕೆಲವೊಂದು ವಿಷಯಗಳನ್ನು ಪ್ರಸ್ತಾಪಸಿದ್ದಾರೆ. ಇನ್ನು ಈಗಾಗಲೇ ಎಎಪಿ ವಿವಿಧ ಕಾರಣಕ್ಕೆ ದೆಹಲಿಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದೆ. ಇದೀಗ ಎಎಪಿಗೆ ಚೆಕ್‌ಮೆಟ್ ಇರಿಸುವುದಕ್ಕೆ ಬಿಜೆಪಿ ಮುಂದಾಗಿದೆ.

ಎಎಪಿಯು ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಹಲವು ಭರವಸೆಗಳನ್ನು ಕೊಟ್ಟಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಆ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇದೀಗ ದೆಹಲಿಯಲ್ಲಿ ಸಾಲು ಸಾಲು ಭರವಸೆಗಳನ್ನು ಕೊಡುತ್ತಿದೆ. ಪಂಜಾಬ್‌ನಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸುವ ಬದ್ಧತೆಯನ್ನು ಎಎಪಿ ಪ್ರದರ್ಶಿಸಲಿ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಎಎಪಿ ಕೊಟ್ಟಿದ್ದ ಚುನಾವಣೆ ಪ್ರಣಾಳಿಕೆ / ಭರವಸೆಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳೂ 1,000 ಸಾವಿರ ರೂ.ಗಳನ್ನು ಕೊಡುವುದು ಸಹ ಸೇರಿದೆ. ಆದರೆ ಯಾವುದನ್ನೂ ಈಡೇರಿಸಿಲ್ಲ ಅಂತ ಹೇಳಿದ್ದಾರೆ.
ದೆಹಲಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಉಚಿತ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಪಂಜಾಬ್ ವಿಷಯಗಳನ್ನು ಅವರು ಮರೆತಿರಬೇಕು. ಪಂಜಾಬ್‌ನಲ್ಲಿ ಮಾದಕ ದ್ರವ್ಯ / ಡ್ರಗ್ಸ್ ನಿರ್ಮೂಲನೆ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಡ್ರಗ್ಸ್ ಮುಕ್ತ ಮಾಡುವಲ್ಲಿ ಏನೂ ಮಾಡಿಲ್ಲ. 2023ರಲ್ಲಿ ಪಂಜಾಬ್‌ನಲ್ಲಿ ಮಾದಕ ವಸ್ತುಗಳ ಬೆಲೆ ಏರಿಕೆ ಮಿತಿ ಮೀರಿ ಹೆಚ್ಚಳವಾಗಿದೆ. ಇದರಿಂದ ಪಂಜಾಬ್‌ನಲ್ಲಿ 144 ಜನ ಸಾವನ್ನಪ್ಪಿದ್ದಾರೆ. ಇದು ದೇಶದ ಉಳಿದೆಲ್ಲ ರಾಜ್ಯಗಳಿಂತ ಹೆಚ್ಚಳವಾಗಿದೆ. ಅಲ್ಲದೆ ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತಲೂ ಅವರು ಹೇಳಿದ್ದಾರೆ.
ಇನ್ನು ದೆಹಲಿ ವಿಧಾನಸಭೆ ಚುನಾವಣೆಯು ಫೆಬ್ರವರಿ 5ರಂದು ನಡೆಯಲಿದ್ದು. ಚುನಾವಣೆ ಫಲಿತಾಂಶವು ಫೆಬ್ರವರಿ 8ಕ್ಕೆ ಪ್ರಕಟವಾಗಲಿದೆ. ಈ ಬಾರಿ ಎಎಪಿ ಹಾಗೂ ಬಿಜೆಪಿಯ ನಡುವೆ ತೀವ್ರ ಸ್ಪರ್ಧೆ ಇದೆ. ಒಂದು ಕಾಲದಲ್ಲಿ ದೆಹಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಇಲ್ಲಿ ಕಳೆದ ಬಾರಿ ಶೂನ್ಯ ಸಾಧನೆ ಮಾಡಿದೆ.












Click it and Unblock the Notifications