Breaking: ದೆಹಲಿಯಲ್ಲಿ ಬಾಲಕಿ ಮೇಲೆ ಆಸಿಡ್ ದಾಳಿ, ಮೂವರ ಬಂಧನ

ನವದೆಹಲಿ, ಡಿಸೆಂಬರ್ 14: ರಾಷ್ಟ್ರ ರಾಜಧಾನಿಯಲ್ಲಿ 17 ವರ್ಷದ ಬಾಲಕಿಯ ಮೇಲೆ ಆಸಿಡ್ ಎರಗಿಚ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೂವರನ್ನು ಆರೋಪಿಗಳನ್ನು ಬಂಧಿಸಿದ್ದಾರೆ. ಬದುಕುಳಿದ ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಈ ಹಿಂದೆ ಒಬ್ಬ ಆರೋಪಿಯನ್ನು ಬಂಧಿಸಿದ್ದರು.

ಈ ಆರೋಪಿಗಳು ಬಳಸುತ್ತಿದ್ದ ಬೈಕನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಸಚಿನ್ ಅರೋರಾ ಬಾಲಕಿಯೊಂದಿಗೆ ನಂಟು ಹೊಂದಿದ್ದು, ಮೂರು ತಿಂಗಳ ಹಿಂದೆ ಬೇರ್ಪಟ್ಟಿದ್ದರು. ತದನಂತರದಲ್ಲಿ ಬಾಲಕಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಫ್ಲಿಪ್‌ಕಾರ್ಟ್‌ನಿಂದ ಆನ್‌ಲೈನ್‌ನಲ್ಲಿ ಆಸಿಡ್ ಅನ್ನು ಆರ್ಡರ್ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಬಂಧಿತರಾದ ಹರ್ಷಿತ್ ಮತ್ತು ವೀರೇಂದ್ರ ಅವರೊಂದಿಗೆ ಸಚಿನ್ ದಾಳಿ ನಡೆಸಿದ್ದನು. ಆರೋಪಿ ಹರ್ಷಿತ್ ಹಿಂದೆ ಕುಳಿತಿದ್ದರೆ, ಸಚಿನ್ ಬೈಕ್ ಚಾಲನೆ ಮಾಡುತ್ತಿದ್ದನು ಎಂದು ಗೊತ್ತಾಗಿದೆ. ಈ ದಾಳಿಯ ಸಮಯದಲ್ಲಿ, ಮೂರನೇ ಆರೋಪಿ ವೀರೇಂದ್ರ, ಸಚಿನ್ ಅವರ ಮೊಬೈಲ್ ಫೋನ್ ಮತ್ತು ಅವರ ಸ್ಕೂಟಿಯೊಂದಿಗೆ ಬೇರೆ ಸ್ಥಳಕ್ಕೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Delhi acid attack on girl: 3 accused arrested by Police

ಆಸಿಡ್ ಕುರಿತು ರಾಸಾಯನಿಕ ಪರೀಕ್ಷೆ:

ದೆಹಲಿಯಲ್ಲಿ ಬಾಲಕಿ ಮೇಲೆ ಎರಚಿದ ಆಸಿಡ್ ಎಷ್ಟರ ಮಟ್ಟಿಗೆ ಮಾರಣಾಂತಿಕವಾಗಿದೆ ಎಂಬುದನ್ನು ಪತ್ತೆ ಮಾಡುವುದಕ್ಕಾಗಿ ರಾಸಾಯನಿಕ ಪರೀಕ್ಷೆನ್ನು ನಡೆಸಲಾಗುತ್ತದೆ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ದೆಹಲಿಯ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಈ ಆಸಿಡ್ ದಾಳಿ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಾಲಕಿ ತನ್ನ ತಂಗಿಯೊಂದಿಗೆ ಇದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದರು.

Delhi acid attack on girl: 3 accused arrested by Police

ದಾಳಿ ಬಗ್ಗೆ ಬಾಲಕಿಯ ಸಹೋದರಿ ಹೇಳಿದ್ದೇನು?:

"ನಾನು ಮತ್ತು ನನ್ನ ಸಹೋದರಿ ಬೆಳಗ್ಗೆ 7:32ರ ಸುಮಾರಿಗೆ ಶಾಲೆಗೆ ಹೋಗುತ್ತಿದ್ದೆವು. ಇದ್ದಕ್ಕಿದ್ದಂತೆ ಅವಳ ಕಿರುಚಾಟ ನನಗೆ ಕೇಳಿಸಿತು. ನಾನು ಅವಳ ಮುಖ ನೋಡಿ ಗಾಬರಿಗೊಂಡು ನಮ್ಮ ತಂದೆಗೆ ಕರೆ ಮಾಡಿದೆ. ನಂತರ ಆಕೆಯನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು. ಬೈಕಿಗೆ ನಂಬರ್ ಪ್ಲೇಟ್ ಇರಲಿಲ್ಲ. ಅವಳಿಗೆ ಇಬ್ಬರ ಪರಿಚಯವಿತ್ತು. ನನ್ನ ತಂದೆಗೂ ಅವರ ಪರಿಚಯವಿತ್ತು' ಎಂದು ಸಂತ್ರಸ್ತ ಬಾಲಕಿಯ ಸಹೋದರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+