Shubman Gill: ಶುಭಮನ್ ಗಿಲ್ - ಸಾರಾ ತೆಂಡೂಲ್ಕರ್ ಫೋಟೊ ವೈರಲ್ : ಅಸಲಿಯತ್ತೇನು ಗೊತ್ತಾ?

ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಪ್ರೀತಿಯಲ್ಲಿದ್ದಾರೆ ಎನ್ನುವ ಗುಸು ಗುಸು ಕ್ರಿಕೆಟ್ ಲೋಕದಲ್ಲಿ ಹಲವು ವರ್ಷಗಳಿಂದ ಕೂಡ ಚಾಲ್ತಿಯಲ್ಲಿದೆ. ಇವರಿಬ್ಬರ ನಡುವೆ ಮನಸ್ತಾಪ ಬಂದು ದೂರವಾಗಿದ್ದರು ಎನ್ನಲಾಗಿತ್ತಾದರೂ, ನಂತರ ಇಬ್ಬರೂ ಮುನಿಸು ಮರೆತು ಒಂದಾಗಿದ್ದಾರೆ ಎಂದು ಹೇಳಲಾಗಿತ್ತು.

ಸದ್ಯ ಈ ಇಬ್ಬರೂ ಒಟ್ಟಿಗೆ ಇರುವ ಫೋಟೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ. ಚಿತ್ರದಲ್ಲಿ, ಸಾರಾ ಅವರು ಫೋಟೊಗೆ ಪೋಸ್ ನೀಡುತ್ತಿರುವಾಗ ಶುಭಮನ್ ಗಿಲ್‌ರನ್ನು ತಬ್ಬಿಕೊಂಡಿರುವುದನ್ನು ಕಾಣಬಹುದು.

Deepfake Scandal Hits Rumored Couple Sara Tendulkar and Shubman Gill

ಆದರೆ ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದೊಂದು ಮಾರ್ಪಡಿಸಿದ ಚಿತ್ರ ಎನ್ನುವುದು ಅರ್ಥವಾಗುತ್ತದೆ. ಇದು ಸಾರಾ ತೆಂಡೂಲ್ಕರ್ ತಮ್ಮ ಸಹೋದರ ಅರ್ಜುನ್ ತೆಂಡೂಲ್ಕರ್ ಅವರೊಂದಿಗೆ ತೆಗೆಸಿಕೊಂಡಿರುವ ಚಿತ್ರವಾಗಿದ್ದು, ತಮ್ಮ ಸಹೋದರನ ಹುಟ್ಟುಹಬ್ಬದಂದು ಇನ್‌ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

ಈ ಚಿತ್ರವನ್ನು ಬದಲಾಯಿಸಲಾಗಿದೆ, ಅರ್ಜುನ್ ತೆಂಡೂಲ್ಕರ್ ಫೋಟೋವನ್ನು ಬದಲಾಯಿಸಿ ಶುಭಮನ್ ಮುಖವನ್ನು ಅಂಟಿಸಲಾಗಿದೆ. ಈ ಫೋಟೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಲಾಗಿದೆ.

ರಶ್ಮಿಕಾ, ಕತ್ರಿನಾಗೆ ಕೂಡ ಆಘಾತ

ನಟಿಯರಾದ ರಶ್ಮಿಕಾ ಮಂದಣ್ಣ ಮತ್ತು ಕತ್ರಿನಾ ಕೈಫ್ ಡೀಪ್‌ಫೇಕ್ ತಂತ್ರಜ್ಞಾನಕ್ಕೆ ಬಲಿಯಾದ ನಂತರ ಈಗ ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಚಿನ್ ಪುತ್ರಿ ಸಾರಾ ಕೂಡ ಈ ತಂತ್ರಜ್ಞಾನಕ್ಕೆ ಬಲಿಯಾಗಿದ್ದು, ಆತಂಕ ಉಂಟುಮಾಡಿದೆ.

ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೋ ಬಾರಿ ವೈರಲ್ ಆದ ನಂತರ ಈ ತಂತ್ರಜ್ಞಾನದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅಮಿತಾಬ್ ಬಚ್ಚನ್ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಕಳವಳ ವ್ಯಕ್ತಪಡಿಸಿದ್ದರು, ರಶ್ಮಿಕಾ ಮಂದಣ್ಣ ಕೂಡ ಆತಂಕ ವ್ಯಕ್ತಪಡಿಸಿದ್ದು, ಇದಕ್ಕೆ ಕಡಿವಾಣ ಹಾಕಲು ಕ್ರಮ ಅಗತ್ಯ ಎಂದಿದ್ದರು.

ಈಗಾಗಲೇ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಪ್ರೀತಿಯಲ್ಲಿದ್ದಾರೆ ಎನ್ನುವ ಊಹಾಪೋಹಗಳ ನಡುವೆಯೇ ಈ ಫೋಟೊ ವೈರಲ್ ಆಗಿದೆ. ಈ ಬಗ್ಗೆ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಸಹೋದರನ ಜೊತೆಗಿನ ಫೋಟೊವನ್ನು ಈ ರೀತಿ ಬದಲಾಯಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಸರ್ಕಾರದಿಂದ ಮಾರ್ಗಸೂಚಿ

ಡೀಪ್‌ಫೇಕ್ ದುರ್ಬಳಕೆಯನ್ನು ನಿಭಾಯಿಸಲು ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಡೀಪ್‌ಫೇಕ್ ತಂತ್ರಜ್ಞಾನದ ದುರ್ಬಳಕೆಯಾಗುತ್ತಿರುವುದು ಜನರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ಬಹಳಷ್ಟು ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ, ಈ ರೀತಿಯ ದುರುದ್ದೇಶಪೂರಿತ ಎಐ- ರಚಿತವಾದ ಚಿತ್ರಗಳು ಮತ್ತು ವೀಡಿಯೊಗಳನ್ನು ಗುರುತಿಸುವುದು ಮುಖ್ಯವಾಗಿದೆ.

ಡೀಪ್‌ಫೇಕ್ ವೀಡಿಯೊಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ಕೇಂದ್ರ ಸರ್ಕಾರ ಮಂಗಳವಾರ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಮಾಧ್ಯಮ ಕಂಪನಿಗಳು ಡೀಪ್‌ಫೇಕ್ ವೀಡಿಯೊಗಳನ್ನು ತೆಗೆದುಹಾಕಲು 36 ಗಂಟೆಗಳ ಒಳಗೆ ತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂದು ಆದೇಶಿಸಿದೆ.

ಹಾಗೆ ಮಾಡಲು ವಿಫಲವಾದರೆ 2021 ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು) ನಿಯಮಗಳ ನಿಯಮ 7 ರ ಅಡಿಯಲ್ಲಿ ಕಾನೂನು ಕ್ರಮಕ್ಕೆ ಕಾರಣವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+