ಸಾಲದ ಹೊರೆ: ಮಧ್ಯಪ್ರದೇಶ ಕೀಟನಾಶಕ ಸೇವಿಸಿ ರೈತ ಆತ್ಮಹತ್ಯೆ
ಬೆಟುಲ್(ಮಧ್ಯಪ್ರದೇಶ), ಅಕ್ಟೋಬರ್ 7: ಸಾಲದ ಬಾಧೆ ತಾಳಲಾದರೆ ರೈತನೊಬ್ಬ ಕ್ರಿಮಿನಾಷಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶ ಬೆಟುಲ್ ನ ಚಕೋರ ಎಂಬ ಹಳ್ಳಿಯಲ್ಲಿ ನಡೆದಿದೆ.
ಪಂಜು ಕುಮಾರ್ ಎಂಬ ರೈತ 2 ಲಕ್ಷ ರೂ.ಗೂ ಹೆಚ್ಚು ಸಾಲ ಮಾಡಿಕೊಂಡದ್ದರು. ಬ್ಯಾಂಕ್ ಅಧಿಕಾರಿಗಳು ಈ ಹಣವನ್ನು ವಾಪಾಸ್ ಮಾಡುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ, ಒತ್ತಡ ತಾಳಲಾರದೆ ರೈತ ಸಾವನ್ನಪ್ಪಿದ್ದಾರೆ.

ಅಕ್ಟೋಬರ್ 4 ರಂದು ರಾಖೇಶ್ ಎಂಬುವವರು ಸಹ ಸಾಲದ ಬಾಧೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚುತ್ತಿರುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.











Click it and Unblock the Notifications