ಪಾಕ್, ಉತ್ತರ ಭಾರತದ ಪ್ರಬಲ ಭೂಕಂಪದಲ್ಲಿ ಮಡಿದವರ ಸಂಖ್ಯೆ 19 ಕ್ಕೆ ಏರಿಕೆ
ನವದೆಹಲಿ, ಸೆಪ್ಟೆಂಬರ್ 24: ಪಾಕಿಸ್ತಾನ ಮತ್ತು ಉತ್ತರ ಭಾರತದಲ್ಲಿಸಂಭವಿಸಿದ 6.1 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ 19 ಕ್ಕೆ ಏರಿದೆ.
ಘಟನೆಯಲ್ಲಿ 300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಭಾರತ ಮತ್ತು ಪಾಕಿಸ್ತಾನದ ಗಡಿಯ ಪ್ರದೇಶ ಭೂಕಂಪ ಕೇಂದ್ರವಾಗಿದ್ದು, ಅತೀ ಹೆಚ್ಚು ಹಾನಿಯಾಗಿದ್ದು ಮಿರ್ಪುರ್ ಮತ್ತು ಝೆಲುಮ್ ನಲ್ಲಿ ಎಂಬ ಮಾಹಿತಿ ಲಭ್ಯವಾಗಿದೆ.
ಕಂಪನ 10 ಕಿಮೀ ಆಳದಲ್ಲಿ ಸಂಭವಿಸಿದ್ದು, ಭಾರತದಲ್ಲಿ ಪಂಜಾಬ್, ದೆಹಲಿ, ಹರ್ಯಾಣ, ಹಿಮಾಚಲಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿದೆ.

ಇಂದು(ಸೆ.24) ಮಧ್ಯಾಹ್ನ ಸುಮಾರು 4:30 ರ ವೇಳೆಗೆ ಭೂಕಂಪ ಸಂಭವಿಸಿದ್ದು, ಹೆದ್ದಾರಿಗಳೇ ಕುಸಿದಿದ್ದು, ಸಾಕಷ್ಟು ಹಾನಿಯುಂಟಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎನ್ನಲಾಗಿದೆ.












Click it and Unblock the Notifications