ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ: ಇ-ಮೇಲ್ ಕಳುಹಿಸಲಾದ ಮೊಬೈಲ್ ಸಂಖ್ಯೆ ಮತ್ತು ಸ್ಥಳ ಪತ್ತೆ
ಬಾಲಿವುಡ್ ಮೆಗಾಸ್ಟಾರ್ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆಯ ಇ-ಮೇಲ್ ಕಳುಹಿಸಲಾದ ಮೊಬೈಲ್ ಸಂಖ್ಯೆ ಮತ್ತು ಸ್ಥಳವನ್ನು ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆಯ ಇ-ಮೇಲ್ ಬಂದಿದ್ದು ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಸಲ್ಮಾನ್ ಖಾನ್ ಎಲ್ಲಾ ಹೊರಾಂಗಣ ಕಾರ್ಯಕ್ರಮಗಳು ಹಾಗೂ ಸ್ಟೇಜ್ ಶೋಗಳಿಂದ ದೂರವಿದ್ದಾರೆ.
ತಮಗೆ ಕೊಲೆ ಬೆದರಿಕೆ ಇ-ಮೇಲೆ ಬಂದ ಬಗ್ಗೆ ನಟ ಸಲ್ಮಾನ್ ಖಾನ್ ಎಫ್‌ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಸಲ್ಮಾನ್ ಖಾನ್ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಬೈಲ್ ಸಂಖ್ಯೆ ಮತ್ತು ಯುಕೆಯಲ್ಲಿ ಇಮೇಲ್ ಕಳುಹಿಸಲಾದ ಸ್ಥಳವನ್ನು ಪತ್ತೆಹಚ್ಚಿದ್ದಾರೆ.

ಪೋಲಿಸರು ಫೋನ್ ನಂಬರ್ ಹೊಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಸಲ್ಮಾನ್‌ಗೆ ಬೆದರಿಕೆ ಹಾಕಲು ಇ-ಮೇಲ್ ಐಡಿ ಬಳಸಿದ್ದ ಗೋಲ್ಡಿ ಬ್ರಾರ್ ಅವರ ಸಹಾಯಕ ಮೋಹಿತ್ ಗಾರ್ಗ್ ಎಂದು ತಿಳಿದುಬಂದಿದೆ. ಈತ ಲಾರೆನ್ಸ್ ಬಿಷ್ಣೋಯ್ ಅವರ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.
ಐಪಿಸಿಯ 506 (2), 120 (ಬಿ), ಮತ್ತು 34 ರ ಅಡಿಯಲ್ಲಿ ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಮತ್ತು ರೋಹಿತ್ ಬ್ರಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸಲ್ಮಾನ್ ಅವರ ಮನೆಯ ಗ್ಯಾಲಕ್ಸಿಯ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಅಪಾರ್ಟ್‌ಮೆಂಟ್‌ನ ಹೊರಗೆ ಸೇರದಂತೆ ಅಭಿಮಾನಿಗಳಿಗೆ ಕೇಳಿಕೊಳ್ಳಲಾಗಿದೆ.

ಸಲ್ಮಾನ್ ಖಾನ್ ಗೆ ಕಳುಹಿಸಿದ ಇ-ಮೇಲ್ ನಲ್ಲಿ ಏನು ಬರೆದಿತ್ತು?
ಸಲ್ಮಾನ್ ಖಾನ್ರ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಆಗಿರುವ ಪ್ರಶಾಂತ್ ಗುಂಜಲ್ಕರ್ ಅವರಿಗೆ ಬೆದರಿಕೆ ಇ-ಮೇಲ್ ಬಂದಿದೆ. ಈ ಬೆದರಿಕೆ ಇ-ಮೇಲ್ ಅನ್ನು ಪಾತಕಿ ಗೋಲ್ಡಿ ಬ್ರಾರ್ನ ಆಪ್ತ ಮೋಹಿತ್ ಗರ್ಗ್ ಕಳಿಸಿದ್ದಾನೆ ಎನ್ನಲಾಗಿದೆ. ಮೋಹಿತ್ ಗಾರ್ಗ್ ಕಳುಹಿಸಿದ ಇಮೇಲ್ ಶನಿವಾರ ಮಧ್ಯಾಹ್ನ ಬಂದಿದ್ದು, "ಗೋಲ್ಡಿ ಅಣ್ಣ (ಗೋಲ್ಡಿ ಬ್ರಾರ್) ನಿನ್ನ ಬಾಸ್ (ಸಲ್ಮಾನ್ ಖಾನ್) ಜೊತೆ ಮಾತನಾಡಬೇಕಂತೆ. ಲಾರೆನ್ಸ್ ನ ಸಂದರ್ಶನ ನೋಡಿಯೇ ಇರಬೇಕು ಅವನು. ಸಂದರ್ಶನ ನೋಡಿಲ್ಲ ಎಂದಾದರೆ ತೋರಿಸು ಅವನಿಗೆ. ಈ ವಿಷಯ ಇಲ್ಲಿಗೆ ಮುಗಿಸಬೇಕು ಎಂದರೆ ಗೋಲ್ಡಿ ಅಣ್ಣನ ಜೊತೆ ಮಾತಾಡಲು ಹೇಳು.'' ಎಂದು ಹೇಳಿ ಬರೆಯಲಾಗಿದೆ.
ಅದೂ ನೇರಾ-ನೇರಾ. ಈಗ ಸಮಯ ಇದೆ ಅದಕ್ಕೆ ಹೇಳುತ್ತಿದ್ದೇನೆ. ಇಲ್ಲವಾದರೆ ಹೊಡೆಯುತ್ತೇವೆ ಅಷ್ಟೆ ಎಂದು ಮೇಲ್ನಲ್ಲಿ ಬರೆಯಲಾಗಿದೆ. ಮೇಲ್ ಮೋಹಿತ್ ಗರ್ಗ್ ಎಂಬಾತನ ಖಾತೆಯ ಮೂಲಕ ಬಂದಿದೆ. ಸಲ್ಮಾನ್‌ಗೆ ಜೀವ ಬೆದರಿಕೆ ಹಿನ್ನೆಲೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸಲ್ಮಾನ್ ಖಾನ್ ಕೊಲ್ಲಲು ಪಾತಕಿ ಲಾರೆನ್ಸ್ ಬಿಷ್ಣೋಯಿ ಸಂಚು
ಬಾಲಿವುಡ್ ನಟ ಸ್ಮಾನ್ ಖಾನ್ ಅನ್ನು ಕೊಲ್ಲಲು ಉತ್ತರ ಭಾರತದ ನಟೋರಿಯಸ್ ಗ್ಯಾಂಗ್ ಒಂದು ಅಡಿಗಡಿಗೆ ಹೊಂಚು ಹಾಕುತ್ತಿದೆ. ಸಲ್ಮಾನ್ ಖಾನ್ ಅನ್ನು ಕೊಂದೇ ಕೊಲ್ಲುತ್ತೇನೆ ಎಂದು ಪಾತಕಿ ಲಾರೆನ್ಸ್ ಬಿಷ್ಣೋಯಿ ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಕೆಲವು ದಿನ ಹಿಂದಷ್ಟೇ ಸಲ್ಮಾನ್ ಖಾನ್ ಅನ್ನು ಕೊಲ್ಲವುದೇ ನನ್ನ ಜೀವನದ ಅಂತಿಮ ಗುರಿ ಎಂದು ಹೇಳಿದ್ದಾನೆ. ಅದರ ಬೆನ್ನಲ್ಲೇ ಸಲ್ಮಾನ್ ಖಾನ್‌ಗೆ ಮತ್ತೊಂದು ಬೆದರಿಕೆ ಬಂದಿದೆ.
ಈ ಹಿಂದೆ ಸಲ್ಮಾನ್ ಖಾನ್‌ಗೆ ಪತ್ರದ ಮೂಲಕ ಗೋಲ್ಡಿ ಬ್ರಾರ್-ಬಿಷ್ಣೋಯಿ ಗ್ಯಾಂಗ್ನವರು ಬೆದರಿಕೆ ಹಾಕಿದ್ದರು. ಆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಲಾರೆನ್ಸ್ ಬಿಷ್ಣೋಯಿ ಹಾಗೂ ಇನ್ನೂ ಹಲವರು ತನಿಖೆಗೆ ಒಳಪಡಿಸಿದ್ರು. ಈ ಹಿಂದೆ ಸಲ್ಲು ಮೇಲೆ ಕೊನೆ ಯತ್ನಗಳು ಕೂಡ ನಡೆದಿತ್ತು. ಇದೀಗ ಸಲ್ಮಾನ್ ಖಾನ್‌ಗೆ ಮತ್ತೊಂದು ಬೆದರಿಕೆ ಬಂದಿದ್ದು, ಈ ಬಾರಿ ಇ-ಮೇಲ್ ಮೂಲಕ ಈ ಬೆದರಿಕೆ ಬಂದಿದೆ.
ಬೆದರಿಕೆ ಇ-ಮೇಲ್ ಬಂದಿರುವ ಬಗ್ಗೆ ಪ್ರಶಾಂತ್ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೊಲೆ ಬೆದರಿಕೆ ಹಿನ್ನೆಲೆ ಎಚ್ಚೆತ್ತ ಸಲ್ಮಾನ್ ಖಾನ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.












Click it and Unblock the Notifications