Get Updates
Get notified of breaking news, exclusive insights, and must-see stories!

ಆಧಾರ್ ಕಾರ್ಡ್‌ನೊಂದಿಗೆ ಮತದಾರರ ಗುರುತಿನ ಚೀಟಿ ಲಿಂಕ್ ಮಾಡುವ ಗಡುವು ವಿಸ್ತರಣೆ, ವಿವರಗಳು ಇಲ್ಲಿವೆ

ಈ ಲಿಂಕ್ ಪ್ರಕ್ರಿಯೆಯು ಕಡ್ಡಾಯವಲ್ಲ. ಆದರೆ, ನಕಲಿ ಮತದಾನವನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನಲಾಗಿದೆ.

ನವದೆಹಲಿ, ಮಾರ್ಚ್. 22: ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರವು ಗಡುವು ವಿಸ್ತರಣೆ ಮಾಡಿದೆ. ಕೊನೆಯ ದಿನಾಂಕವನ್ನು ಏಪ್ರಿಲ್ 1, 2023 ರಿಂದ ಮಾರ್ಚ್ 31, 2024 ರವರೆಗೆ ವಿಸ್ತರಿಸಿದೆ. ಮುಖ್ಯ ವಿಷಯವೆಂದರೇ, ಇವೆರಡನ್ನೂ ಲಿಂಕ್ ಮಾಡುವುದು ಕಡ್ಡಾಯವಲ್ಲ.

ಎರಡು ಗುರುತುಗಳನ್ನು ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಹಿಂದಿನ ಏಪ್ರಿಲ್ 1, 2023 ರಿಂದ ಮಾರ್ಚ್ 31, 2024 ರವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಇದರೊಂದಿಗೆ, ಬಳಕೆದಾರರು ತಮ್ಮ ಆಧಾರ್ ಅನ್ನು ಮತದಾರರ ಐಡಿಗೆ ಆನ್‌ಲೈನ್‌ನಲ್ಲಿ ಅಥವಾ ಎಸ್‌ಎಂಎಸ್ ಮೂಲಕ ಮಾರ್ಚ್ 31, 2024 ರೊಳಗೆ ಲಿಂಕ್ ಮಾಡಬಹುದು.

Deadline to link voter ID with Aadhaar card extended, Details

2022ರ ಜೂನ್ 17ರಂದು ಆದೇಶ ಹೊರಡಿಸಿದ್ದ ಕೇಂದ್ರ ಕಾನೂನು ಇಲಾಖೆಯ ಸೂಚನೆಯಲ್ಲಿ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ಜೋಡಿಸಲು 2023ರ ಮಾರ್ಚ್ 31 ಕಡೆಯ ದಿನ ಎಂದು ಆದೇಶಿಸಿತ್ತು. ಈ ಸೂಚನೆಯನ್ನು ಈಗ ತೆಗೆದುಹಾಕಿ ಮತ್ತೆ ಹೋಸ ಆದೇಶ ಹೊರಡಿಸಿದ್ದು, ಮುಂದಿನ ವರ್ಷ ಮಾರ್ಚ್ 31ರ ವರೆಗೆ ವಿಸ್ತರಿಸಿದೆ.

ಈ ಜೋಡಣೆ ಪ್ರಕ್ರಿಯೆಯು ಕಡ್ಡಾಯವಲ್ಲ. ಆದರೆ, ನಕಲಿ ಮತದಾನವನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನಲಾಗಿದೆ. "ಒಂದೇ ವ್ಯಕ್ತಿಯ ಹೆಸರನ್ನು ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಳಸುವುದು. ಅಥವಾ ಒಂದೇ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಲು ಬರುವವರನ್ನು ತಪ್ಪಿಸಲು" ಸಹಾಯ ಮಾಡುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

Deadline to link voter ID with Aadhaar card extended, Details

ಕಾನೂನು ಮತ್ತು ನ್ಯಾಯ ಸಚಿವಾಲಯದ ಗೆಜೆಟ್ ಅಧಿಸೂಚನೆಯಲ್ಲಿ ಎರಡು ಗುರುತಿನ ಚೀಟಿಗಳನ್ನು ಲಿಂಕ್ ಮಾಡದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಲು ಅರ್ಜಿಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದೆ. ಮತದಾರರು ಆಧಾರ್ ಸಂಖ್ಯೆಯನ್ನು ತೋರಿಸಲು ವಿಫಲವಾದರೆ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸುವುದಿಲ್ಲ ಎಂದೂ ತಿಳಿಸಿದೆ.

"ಕೇಂದ್ರ ಸರ್ಕಾರವು ಈ ಮೂಲಕ ಕಾನೂನು ಮತ್ತು ನ್ಯಾಯ ಸಚಿವಾಲಯ (ಶಾಸಕಾಂಗ ಇಲಾಖೆ), ಸಂಖ್ಯೆ S.O.2893(E), ದಿನಾಂಕ 17ನೇ ಜೂನ್ 2022 ರಲ್ಲಿ ಭಾರತ ಸರ್ಕಾರದ ಅಧಿಸೂಚನೆಯಲ್ಲಿ ಈ ಕೆಳಗಿನ ತಿದ್ದುಪಡಿಯನ್ನು ಮಾಡುತ್ತದೆ. ಅವುಗಳೆಂದರೆ, ಈ ಅಧಿಸೂಚನೆಯಲ್ಲಿ, '1ನೇ ಏಪ್ರಿಲ್ 2023' ಪದಗಳು ಮತ್ತು ಅಂಕಿಅಂಶಗಳನ್ನು '31ನೇ ಮಾರ್ಚ್ 2024' ಎಂದು ಬದಲಿಸಲಾಗುತ್ತದೆ" ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

ಡಿಸೆಂಬರ್ 2021 ರಲ್ಲಿ ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದ ನಂತರ ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಅಧಿಕೃತಗೊಳಿಸಲಾಯಿತು. ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ನೋಡೋಣ.

ಹಂತ 1: ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ನ (NVSP) ಅಧಿಕೃತ ವೆಬ್‌ಸೈಟ್‌ಗೆ ಇಲ್ಲಿ ಭೇಟಿ ನೀಡಿ.

ಹಂತ 2: ಪೋರ್ಟಲ್‌ಗೆ ಲಾಗ್ ಇನ್ ಮಾಡಿ.

ಹಂತ 3: "ಎಲೆಕ್ಟೋರಲ್ ರೋಲ್‌ನಲ್ಲಿ ಹುಡುಕಿ" ಆಯ್ಕೆಗೆ ಹೋಗಿ.

ಹಂತ 4: ವಿವರಗಳನ್ನು ಭರ್ತಿ ಮಾಡಿ ಮತ್ತು ನಂತರ ಆಧಾರ್ ಸಂಖ್ಯೆಯನ್ನು ನಮೂದಿಸಿ.

ಹಂತ 5: ನಂತರ ಬಳಕೆದಾರರು ದೃಢೀಕರಣದ ಉದ್ದೇಶಕ್ಕಾಗಿ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ನಲ್ಲಿ ಓಟಿಪಿ (OTP) ಬರುತ್ತದೆ

ಹಂತ 6: ಬಂದ ಓಟಿಪಿ (OTP) ನಮೂದಿಸಿ. ಇದರೊಂದಿಗೆ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+